ETV Bharat / sports

ಅಬುಧಾಬಿ ಟಿ10 ಲೀಗ್.. ಪೋಲಾರ್ಡ್ ಬ್ಯಾಟಿನಿಂದ ಒಂದೇ ಓವರ್​ನಲ್ಲಿ 6,6,6,6,4,2.. - ಅಬುಧಾಬಿ ಟಿ10 ಲೀಗ್​

ಕೀರನ್​ ಪೋಲಾರ್ಡ್​ ಅಬುಧಾಬಿ ಟಿ10 ಲೀಗ್​ನಲ್ಲಿ ಸಂದೀಪ್​ ಲರಮಿಚ್ಚಾನೆ ಓವರ್​ನಲ್ಲಿ ಸತತ 6 ಸಿಕ್ಸರ್​ ಸಿಡಿಸಿದ್ದಲ್ಲದೆ ಒಂದೇ ಓವರ್​ನಲ್ಲಿ 30 ರನ್​ ತೆಗೆದು ತಾವಾಡಿದ

Kieron Pollard smashed 30 off an
author img

By

Published : Nov 18, 2019, 7:33 PM IST

ಅಬುಧಾಬಿ: ಆಫ್ಘಾನಿಸ್ತಾನದ ವಿರುದ್ಧ ಟಿ20 ಸರಣಿಯಲ್ಲಿ ಹೀನಾಯ ಪ್ರದರ್ಶನ ತೋರಿದ್ದ ಪೋಲಾರ್ಡ್​ ಅಬುಧಾಬಿ ಟಿ20 ಲೀಗ್​ಗೆ ಕಾಲಿಟ್ಟ ಮೊದಲ ಪಂದ್ಯದಲ್ಲಿಯೇ ಅಬ್ಬರದ ಬ್ಯಾಟಿಂಗ್​ ಪ್ರದರ್ಶನ ನೀಡುವ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸಿದ್ದಾರೆ.

ನಿನ್ನೆ ಲಖನೌದಲ್ಲಿ ಟಿ20 ಸರಣಿ ಮುಗಿಸಿ ಅಬುಧಾಬಿಗೆ ಆಗಮಿಸಿರುವ ವಿಂಡೀಸ್ ಆಟಗಾರರು ಇಂದು ಟಿ10 ಲೀಗ್​ನಲ್ಲಿ ಆಡಿದ್ದಾರೆ. ಅದರಲ್ಲೂ ವಿಂಡೀಸ್​ ನಾಯಕ ಪೋಲಾರ್ಡ್​ ಡೆಕ್ಕನ್​ ಗ್ಲಾಡಿಯೇಟರ್​ ಪರ ಬ್ಯಾಟಿಂಗ್‌ಗಿಳಿದು ಕೇವಲ 22 ಎಸೆತಗಳಲ್ಲಿ 45 ರನ್​ ಸಿಡಿಸಿ ತಂಡವನ್ನು ಗೆಲ್ಲಿಸಿಕೊಟ್ಟರು.

ಕರ್ನಾಟಕ ಬುಲ್ಡೋಜರ್ಸ್​ ತಂಡದಲ್ಲಿರುವ ನೇಪಾಳ ಯುವ ಸ್ಪಿನ್​ ಬೌಲರ್ ಸಂದೀಪ್​ ಲೆಮಿಚ್ಚಾನೆ​ ಎಸೆದ 7ನೇ ಓವರ್​ನಲ್ಲಿ ಪೋಲಾರ್ಡ್​ 30 ರನ್​ ದೋಚುವ ಮೂಲಕ ಸೋಲಿನತ್ತ ಮುಖಮಾಡಿದ್ದ ಪಂದ್ಯವನ್ನು ಗೆಲುವಿನ ಸನಿಹ ತಂದರು. ಪೋಲಾರ್ಡ್​ ಒಂದೇ ಓವರ್​ನಲ್ಲಿ ಸತತ 6,6,6,6,4,2 ರನ್​ ಸಿಡಿಸಿ ಯುವ ಸ್ಪಿನ್ನರ್​ ಮುಖದಲ್ಲಿ ಬೆವರಿಳಿಸಿದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ್ದ ಕರ್ನಾಟಕ ಟಸ್ಕರ್ಸ್​ ತಂಡ 10 ಓವರ್​ಗಳಲ್ಲಿ 110 ರನ್​ಗಳಿಸಿತ್ತು. ಈ ಮೊತ್ತವನ್ನು ಗ್ಲಾಡಿಯೇಟರ್​ ಪೋಲಾರ್ಡ್​ ಅಬ್ಬರದಿಂದ ಕೇವಲ 8.3 ಓವರ್​ಗಳಲ್ಲಿ ಗೆಲುವು ಸಾಧಿಸಿತು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.