ETV Bharat / sports

ಕಿಯಾ ಸೂಪರ್ ಲೀಗ್​ನಲ್ಲಿ ವೇಗದ ಶತಕ ದಾಖಲಿಸಿದ ಭಾರತದ ಜೆಮೈಮಾ ರಾಡ್ರಿಗಸ್​​..

author img

By

Published : Aug 26, 2019, 8:00 AM IST

ಭಾರತ ತಂಡದ ಜೆಮೈಮಾ ರಾಡ್ರಿಗಸ್​ ಇಂಗ್ಲೆಂಡ್​ನ ಕಿಯಾ ಟಿ20 ಸೂಪರ್​ ಲೀಗ್​ನಲ್ಲಿ 58 ಎಸೆತಗಳಲ್ಲಿ 112 ರನ್​ಗಳಿಸುವ ಮೂಲಕ ಕೊನೆಯ ಎಸೆತದಲ್ಲಿ ಯಾರ್ಕ್​ಶೈರ್ ಡೈಮಂಡ್ಸ್​ ವಿರುದ್ಧ ಗೆಲುವು ತಂದುಕೊಟ್ಟಿದ್ದಾರೆ.

Kia Super League

ಯಾರ್ಕ್: ಭಾರತದ ಯುವ ಆಟಗಾರ್ತಿ ಜೆಮೈಮಾ ರಾಡ್ರಿಗಸ್​​ ಕಿಯಾ ಮಹಿಳಾ ಸೂಪರ್​ ಲೀಗ್​ನಲ್ಲಿ ಭರ್ಜರಿ ಶತಕಗಳಿಸುವ ಮೂಲಕ ಏಕಾಂಗಿಯಾಗಿ ಹೋರಾಡಿ ತಮ್ಮ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.

ಭಾನುವಾರ ನಡೆದ ಸೌಥರ್ನ್​ ವಿಪರ್ಸ್​ ವಿರುದ್ಧ 51 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ಟಿ20 ಲೀಗ್​​ನಲ್ಲಿ ವೇಗದ ಶತಕ ಬಾರಿಸಿದ ಆಟಗಾರ್ತಿ ಎನಿಸಿದರು. ಅಲ್ಲದೆ ಔಟಾಗದೆ 112 ರನ್​ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. 18 ವರ್ಷದ ಜೆಮೈಮಾ ಇನ್ನಿಂಗ್ಸ್​ನಲ್ಲಿ 17 ಬೌಂಡರಿ ಹಾಗೂ ಒಂದು ಸಿಕ್ಸರ್​ ಸೇರಿತ್ತು. ಇದಲ್ಲದೆ ಜೆಮೈಮಾ 112 ರನ್​ಗಳಿಸುವ ಮೂಲಕ ಭಾರತದ ಪರ ಟಿ20 ಕ್ರಿಕೆಟ್​ನಲ್ಲಿ ವೈಯಕ್ತಿಕ ಹೆಚ್ಚು ರನ್​ಗಳಿಸಿದ ಶ್ರೇಯಕ್ಕೆ ಪಾತ್ರರಾದರು.

  • I’ve been involved in cricket for a long time, Jemimah Rodrigues played a special innings today, 112 off 58 balls, one of the best I’ve seen, she’s only 18, superstar in the making @YorksDiamonds

    — Mel Betts (@melbetts75) August 25, 2019 " class="align-text-top noRightClick twitterSection" data=" ">

ಮೊದಲು ಬ್ಯಾಟಿಂಗ್​ ನಡೆಸಿ ಸೌಥರ್ನ್​ ವಿಪರ್ಸ್​ ಸೂಝಿ ಬೇಟ್ಸ್​ 47, ಡೇನಿಯಲ್​ ವೇಟ್ 42, ಟಮ್ಮಿ ಬ್ಯೂಮಾಂಟ್ 33, ಮೈಯಾ ಬೌಚರ್​ 23 ಹಾಗೂ ಅಮಂಡಾ ವೆಲ್ಲಿಂಗ್ಟನ್​ 24 ರನ್​ಗಳ ನೆರವಿನಿಂದ 20 ಓವರ್​ಗಳಲ್ಲಿ 184 ರನ್​ಗಳಿಸಿತ್ತು.

ಈ ಮೊತ್ತವನ್ನು ಬೆನ್ನೆತ್ತಿದ ಯಾರ್ಕ್​ಶೈರ್​ ಡೈಮಂಡ್ಸ್ 20 ಓವರ್​ಗಳಲ್ಲಿ 185 ರನ್​ಗಳಿಸಿ ಗೆಲುವು ಪಡೆಯಿತು. ಜೆಮೈಮಾ ಔಟಾಗದೆ 112 ರನ್​, ಅಲಿಸ್ಸಾ 22 ರನ್​, ಹೊಲ್ಲಿ ಅರ್ಮಿಟೇಜ್​ 23, ಲೈಗ್​ ಕಾಸ್ಪರೆಕ್​ 12 ರನ್​ಗಳಿಸಿದರು.

ಕಳೆದ ವರ್ಷದ ಆವೃತ್ತಿಯಲ್ಲಿ ಸ್ಮೃತಿ ಮಂಧಾನ ಕೂಡ ಶತಕ ಬಾರಿಸಿದ್ದರು. ಮಂಧಾನ 61 ಎಸೆತಗಳಲ್ಲಿ ಲಂಕಶೈರ್​ ತಂಡರ್ ವಿರುದ್ಧ 102 ರನ್​ ಬಾರಿಸಿದ್ದರು.​

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.