ಪ್ರಿಟೋರಿಯಾ: ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಭಾರತದ ಕಾರ್ತಿಕ್ ತ್ಯಾಗಿ ಅಫ್ಘಾನಿಸ್ತಾನದ ವಿರುದ್ಧ ಮೊದಲ ಓವರ್ನಲ್ಲೇ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದಾರೆ.
ಹಾಲಿ ಚಾಂಪಿಯನ್ ಆಗಿರುವ ಭಾರತದ ಕಿರಿಯರ ತಂಡ ಅಫ್ಘನ್ ವಿರುದ್ಧ ಮೊದಲ ಅಭ್ಯಾಸ ಪಂದ್ಯದಲ್ಲಿ ಉತ್ತರ ಪ್ರದೇಶದ ಕಾರ್ತಿಕ್ ತ್ಯಾಗಿ ಮೊದಲ ಓವರ್ನ 2ನೇ ಎಸೆತದಲ್ಲಿ ಫರ್ಹಾನ್ ಝಾಕಿಲ್, 3ನೇ ಎಸೆತದಲ್ಲಿ ಸೆದಿಕ್ ಅಟಲ್ ಹಾಗೂ 4ನೇ ಎಸೆತದಲ್ಲಿ ಜಮ್ಶಿದ್ ಖಾನ್ ಅವರನ್ನು ಔಟ್ ಮಾಡುವ ಮೂಲಕ ಹ್ಯಾಟ್ರಿಕ್ ಪಡೆದರು.
-
0.2 - Farhan Zakhil ☝️
— Cricket World Cup (@cricketworldcup) January 12, 2020 " class="align-text-top noRightClick twitterSection" data="
0.3 - Sediq Atal ☝️
0.4 - Jamshid Khan ☝️
Kartik Tyagi has taken a hat-trick in India's warm up game against Afghanistan!#U19CWC pic.twitter.com/QvN2lCMOoY
">0.2 - Farhan Zakhil ☝️
— Cricket World Cup (@cricketworldcup) January 12, 2020
0.3 - Sediq Atal ☝️
0.4 - Jamshid Khan ☝️
Kartik Tyagi has taken a hat-trick in India's warm up game against Afghanistan!#U19CWC pic.twitter.com/QvN2lCMOoY0.2 - Farhan Zakhil ☝️
— Cricket World Cup (@cricketworldcup) January 12, 2020
0.3 - Sediq Atal ☝️
0.4 - Jamshid Khan ☝️
Kartik Tyagi has taken a hat-trick in India's warm up game against Afghanistan!#U19CWC pic.twitter.com/QvN2lCMOoY
ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ 255 ರನ್ ಗಳಿಸಿದರೆ, ಅಫ್ಘನ್ ತಂಡ ಭಾರತದ ಬೌಲರ್ಗಳ ದಾಳಿಗೆ ತತ್ತರಿಸಿ 44 ರನ್ಗಳಿಗೆ ಆಲೌಟ್ ಆಗುವ ಮೂಲಕ 211 ರನ್ಗಳ ಸೋಲನುಭವಿಸಿತ್ತು.
ಉತ್ತರ ಪ್ರದೇಶದ ರೈತನ ಮಗನಾಗಿರುವ ಕಾರ್ತಿಕ್ ತ್ಯಾಗಿ ವಿಶ್ವಕಪ್ಗೂ ಮೊದಲೇ ತನ್ನ ಬೌಲಿಂಗ್ ಪರಾಕ್ರಮ ತೋರಿಸಿರುವುದು ಭಾರತ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಪ್ರಿಯಂ ಗರ್ಗ್ ನೇತೃತ್ವದ ಭಾರತ ತಂಡ ಜನವರಿ 19ರಂದು ಶ್ರೀಲಂಕಾ ತಂಡದ ವಿರುದ್ಧ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.