ಅಬುಧಾಬಿ: ನಾಯಕ ದಿನೇಶ್ ಕಾರ್ತಿಕ್ ಹಾಗೂ ಯುವ ಬ್ಯಾಟ್ಸ್ಮನ್ ಶುಬ್ಮನ್ ಗಿಲ್ ಅವರ ಅರ್ಧಶತಕದ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಪಂಜಾಬ್ ವಿರುದ್ಧ 164 ರನ್ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ.
ಅಬುಧಾಬಿಯಲ್ಲಿ ನಡೆಯುತ್ತಿರುವ 24ನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಕೆಕೆಆರ್ ಆರಂಭದದಲ್ಲಿ ರನ್ಗಳಿಸಲು ಪರದಾಡಿದ್ದಲ್ಲದೆ, ಪವರ್ಪ್ಲೇನಲ್ಲೇ ಪ್ರಮುಖ ಬ್ಯಾಟ್ಸ್ಮನ್ಗಳಾದ ರಾಹುಲ್ ತ್ರಿಪಾಠಿ (4)ಹಾಗೂ ನಿತೀಶ್ ರಾಣಾ(2) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು,
ಈ ಹಂತದಲ್ಲಿ ಒಂದಾದ ಗಿಲ್(57) ಹಾಗೂ ಇಯಾನ್ ಮಾರ್ಗನ್(24) 3ನೇ ವಿಕೆಟ್ಗೆ 49 ರನ್ ಸೇರಿಸಿ ಕೆಕೆಆರ್ಗೆ ಚೇತರಿಕೆ ನೀಡಿದರು. ಮಾರ್ಗನ್ 23 ಎಸೆತಗಳಲ್ಲಿ 24 ರನ್ ಸಿಡಿಸಿ ಬಿಷ್ಣೋಯ್ಗೆ ವಿಕೆಟ್ ಒಪ್ಪಿಸಿದರು
63 ರನ್ಗಳಿಗೆ 3 ವಿಕೆಟ್ ಕಳೆದುಕೊಂಡ ಕಡಿಮೆ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ತಂಡಕ್ಕೆ ನಾಯಕ ಕಾರ್ತಿಕ್ ಹಾಗೂ ಗಿಲ್ 4 ನೇ ವಿಕೆಟ್ಗೆ 43 ಎಸೆತಗಳಲ್ಲಿ 82 ರನ್ ಸೇರಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. 47 ಎಸೆತಗಳಲ್ಲಿ 5 ಬೌಂಡರಿ ಸಹಿತ 57 ರನ್ಗಳಿಸಿದ್ದ ಗಿಲ್ ರನ್ ಔಟ್ ಆದರು. ನಂತರ ಬಂದ ರಸೆಲ್ ಕೇವಲ 3 ಎಸೆತಗಳನ್ನೆದುರಿಸಿ 5 ರನ್ಗಳಿಗೆ ವಿಕೆಟ್ ಒಪ್ಪಿಸಿದರು.
ಕೊನೆಯವರೆಗೂ ಹೋರಾಡಿದ ದಿನೇಶ್ ಕಾರ್ತಿಕ್ 28 ಎಸೆಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 58 ರನ್ಗಳಿಸಿ ಕೊನೆಯ ಎಸೆತದಲ್ಲಿ ರನ್ಔಟ್ ಆದರು. ಕೆಕೆಆರ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 164 ರನ್ಗಳಿಸಿತು.
ಪಂಜಾಬ್ ಪರ ಶಮಿ 30ಕ್ಕೆ1, ಅರ್ಶ್ದೀಪ್ ಸಿಂಗ್ 4 ಓವರ್ಗಳಲ್ಲಿ ಒಂದು ಮೇಡನ್ ಸಹಿತ 24 ರನ್ ನೀಡಿ 1 ವಿಕೆಟ್ ಹಾಗೂ ಬಿಷ್ಣೋಯ್ 4 ಓವರ್ಗಳಲ್ಲಿ 25 ರನ್ ನೀಡಿ 1 ವಿಕೆಟ್ ಪಡೆದು ಮಿಂಚಿದರು.