ETV Bharat / sports

ಮುಂಬೈನಲ್ಲಿ ಮೃತಪಟ್ಟಿದ್ದ ಡೀನ್​ ಜೋನ್ಸ್​ಗೆ ಹೃದಯಸ್ಪರ್ಶಿ ಗೌರವ ಸಲ್ಲಿಸಿದ ಪಿಎಸ್​ಎಲ್​ ಕ್ರಿಕೆಟಿಗರು - ಡೀನ್​ ಜೋನ್ಸ್​ಗೆ ಸಂತಾಪ

13ನೇ ಆವೃತ್ತಿಯಲ್ಲಿ ಸ್ಟಾರ್​​ ಸ್ಪೋರ್ಟ್ಸ್​ನ ಕಾಮೆಂಟೇಟರ್ ಆಗಿ ಕಾರ್ಯನಿರ್ವಹಿಸಲು ಬಂದಿದ್ದ ಡೀನ್​ ಜೋನ್ಸ್​ ಸೆಪ್ಟೆಂಬರ್​ನಲ್ಲಿ ಮುಂಬೈನ ಹೋಟೆಲ್​​ನಲ್ಲೇ ನಿಧರಾಗಿದ್ದರು.

ಡೀನ್​ ಜೋನ್ಸ್​ಗೆ ಹೃದಯ ಸ್ಪರ್ಶಿ ಗೌರವ
ಡೀನ್​ ಜೋನ್ಸ್​ಗೆ ಹೃದಯ ಸ್ಪರ್ಶಿ ಗೌರವ
author img

By

Published : Nov 14, 2020, 9:09 PM IST

Updated : Nov 14, 2020, 11:31 PM IST

ಕರಾಚಿ: ಸೆಪ್ಟೆಂಬರ್​ನಲ್ಲಿ ಮುಂಬೈನ ಹೋಟೆಲ್​ನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಡೀನ್ ಜೋನ್ಸ್​ಗೆ ಕರಾಚಿ ಕಿಂಗ್ಸ್ ಮತ್ತು ಮುಲ್ತಾನ್​ ಸುಲ್ತಾನ್ಸ್​ ಆಟಗಾರರು ಪಿಎಸ್​ಎಲ್ ಪುನಾರಾರಂಭಕ್ಕೂ ಮುನ್ನ ಹೃದಯಸ್ಪರ್ಶಿ ಗೌರವ ಸಲ್ಲಿಸಿದ್ದಾರೆ.

13ನೇ ಆವೃತ್ತಿಯಲ್ಲಿ ಸ್ಟಾರ್​​ ಸ್ಪೋರ್ಟ್ಸ್​ನ ಕಾಮೆಂಟೇಟರ್ ಆಗಿ ಕಾರ್ಯನಿರ್ವಹಿಸಲು ಬಂದಿದ್ದ ಡೀನ್​ ಜೋನ್ಸ್​ ಸೆಪ್ಟೆಂಬರ್​ನಲ್ಲಿ ಮುಂಬೈನ ಹೋಟೆಲ್​ನಲ್ಲೇ ನಿಧರಾಗಿದ್ದರು.

ಪಿಎಸ್​ಎಲ್​ನ ಕರಾಚಿ ಕಿಂಗ್ಸ್ ತಂಡದ ಮುಖ್ಯ ಕೋಚ್​ ಆಗಿದ್ದ ಡೀನ್ ಜೋನ್ಸ್​ರಿಗೆ ನಾಕೌಟ್ ಪಂದ್ಯಕ್ಕೂ ಮುನ್ನ ಎರಡು ತಂಡಗಳ ಆಟಗಾರರು ಮೈದಾನದಲ್ಲಿ D ಅಕ್ಷರದಲ್ಲಿ ನಿಂತು "ಎಂದೆಂದಿಗೂ ನೀವು ನಮ್ಮ ಹೃದಯದಲ್ಲಿರುತ್ತೀರಾ, ಡೀನೋ" ಎಂದು ಗೌರವ ಸೂಚಿಸಿದ್ದಾರೆ. ಈ ವಿಡಿಯೋವನ್ನು ಪಾಕಿಸ್ತಾನ್ ಸೂಪರ್​ ಲೀಗ್​ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದೆ.

2019ರಲ್ಲಿ ಇಸ್ಲಮಾಬಾದ್​ ತಂಡದ ಕೋಚ್​ ಆಗಿದ್ದ ಡೀನ್​ ಜೋನ್ಸ್​ ಸತತ 2 ಬಾರಿ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2019ರಲ್ಲಿ ಅವರನ್ನು ಕರಾಚಿ ಕಿಂಗ್ಸ್​ ಮುಖ್ಯ ಕೋಚ್ ಆಗಿ ನೇಮಿಸಿತ್ತು. ಇದೀಗ ಅವರ ಅನುಪಸ್ಥಿತಿಯಲ್ಲಿ ಪಾಕ್ ಮಾಜಿ ವೇಗಿ ವಾಸೀಮ್ ಅಕ್ರಂ ಕೋಚ್​ ಹುದ್ದೆಗೆ ನೇಮಕಗೊಂಡಿದ್ದಾರೆ.

Last Updated : Nov 14, 2020, 11:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.