ETV Bharat / sports

ಪಿಎಸ್​ಎಲ್: ಸೂಪರ್ ಓವರ್​ ಪಂದ್ಯದಲ್ಲಿ ಗೆದ್ದು ಫೈನಲ್ ಪ್ರವೇಶಿಸಿದ ಕರಾಚಿ ಕಿಂಗ್ಸ್​

ಲೀಗ್​ ಹಂತದ ಪಂದ್ಯಗಳು ಮಾರ್ಚ್​ನಲ್ಲೇ ಮುಗಿದಿತ್ತು. ಆದರೆ ಕೋವಿಡ್​ 19 ಪರಿಣಾಮ ನಾಕೌಟ್ ಪಂದ್ಯಗಳನ್ನು ಅನಿರ್ದಿಷ್ಟಾವದಿಗೆ ಮುಂದೂಡಲ್ಪಟ್ಟಿತ್ತು. ಇದೀಗ ಶನಿವಾರದಿಂದ ಪುನರಾರಂಭಗೊಂಡಿದ್ದು, ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಕರಾಚಿ ಕಿಂಗ್ಸ್​ ಸೂಪರ್​ ಓವರ್​ ನಲ್ಲಿ ಗೆದ್ದು ಬೀಗಿದೆ.

ಪಿಎಸ್​ಎಲ್ ಎಲಿಮಿನೇಟರ್
ಪಿಎಸ್​ಎಲ್ ಎಲಿಮಿನೇಟರ್
author img

By

Published : Nov 14, 2020, 8:12 PM IST

ಕರಾಚಿ: ರೋಚಕ ಹೋರಾಟ ಕಂಡುಬಂದ ಪಾಕಿಸ್ತಾನ ಸೂಪರ್​ ಲೀಗ್​ ಕ್ವಾಲಿಫೈಯರ್ ಪಂದ್ಯದಲ್ಲಿ ಕರಾಚಿ ಕಿಂಗ್ಸ್​ ಅಗ್ರಸ್ಥಾನಿ ಮುಲ್ತಾನ್ ಸುಲ್ತಾನ್​ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದೆ.

ಲೀಗ್​ ಹಂತದ ಪಂದ್ಯಗಳು ಮಾರ್ಚ್​ನಲ್ಲೇ ಮುಗಿದಿತ್ತು. ಆದರೆ ಕೋವಿಡ್​ 19 ಪರಿಣಾಮ ನಾಕೌಟ್ ಪಂದ್ಯಗಳನ್ನು ಅನಿರ್ದಿಷ್ಟಾವದಿಗೆ ಮುಂದೂಡಲ್ಪಟ್ಟಿತ್ತು. ಇದೀಗ ಶನಿವಾರದಿಂದ ಪುನರಾರಂಭಗೊಂಡಿದ್ದು, ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಕರಾಚಿ ಕಿಂಗ್ಸ್​ ಸೂಪರ್​ ಓವರ್​ ನಲ್ಲಿ ಗೆದ್ದು ಬೀಗಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಮುಲ್ತಾನ್ ಸುಲ್ತಾನ್ ತಂಡ ಬೊಪೆರಾ ಅವರ 40 ರನ್​ಗಳ ನೆರವಿನಿಂದ​ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 7 ವಿಕೆಟ್​ ಕಳೆದುಕೊಂಡು 141 ರನ್​ಗಳಿಸಿತ್ತು. ಇದಕ್ಕುತ್ತರವಾಗಿ ಕರಾಚಿ ಬಾಬರ್ ಅಜಮ್​ ಅವರ ಅರ್ಧಶತಕದ(65) ಹೊರೆತಾಗಿಯೂ 141 ರನ್​ಗಳಿಸಿ ಗೆಲ್ಲುವ ಪಂದ್ಯವನ್ನು ಟೈನಲ್ಲಿ ಅಂತ್ಯಗೊಳಿಸಿತ್ತು.

ಆದರೆ ಸೂಪರ್​ ಓವರ್​ನಲ್ಲಿ ಕರಾಚಿ ಕಿಂಗ್ಸ್​ ತನ್ವೀರ್ ಓವರ್​ನಲ್ಲಿ 13 ರನ್​ಗಳಿಸಿದರೆ, ಮುಲ್ತಾನ್​ ಸುಲ್ತಾನ್​ ಮೊಹಮ್ಮದ್​ ಅಮೀರ್ ಎಸೆದ ಸೂಪರ್​ ಓವರ್​ನಲ್ಲಿ ಕೇವಲ 9 ರನ್​ಗಳಿಸಿ ಸೋಲುಕಂಡಿತು.

ಈ ಗೆಲುವಿನೊಂದಿಗೆ ಕರಾಚಿ ಫೈನಲ್ ಪ್ರವೇಶಿಸಿದರೆ, ಮುಲ್ತಾನ್ ಇಂದು ನಡೆಯವು ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲ್ಲುವ ತಂಡವನ್ನು 2ನೇ ಎಲಿಮಿನೇಟರ್ ಪಂದ್ಯದಲ್ಲಿ ಸೆಣಸಾಡಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.