ನವದೆಹಲಿ: 1983ರ ವಿಶ್ವಕಪ್ ವಿಜೇತ ಕ್ರಿಕೆಟ್ ತಂಡದ ಕ್ಯಾಪ್ಟನ್ ಕಪಿಲ್ ದೇವ್ ಇಂದು ಆಸ್ಪತ್ರೆಗೆ ತೆರಳಿ ಕೋವಿಡ್ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ.
-
Delhi: Veteran cricketer Kapil Dev received his first dose of #COVID19Vaccine at Fortis Hospital today. pic.twitter.com/Gpn5vMRz39
— ANI (@ANI) March 3, 2021 " class="align-text-top noRightClick twitterSection" data="
">Delhi: Veteran cricketer Kapil Dev received his first dose of #COVID19Vaccine at Fortis Hospital today. pic.twitter.com/Gpn5vMRz39
— ANI (@ANI) March 3, 2021Delhi: Veteran cricketer Kapil Dev received his first dose of #COVID19Vaccine at Fortis Hospital today. pic.twitter.com/Gpn5vMRz39
— ANI (@ANI) March 3, 2021
62 ವರ್ಷದ ಕಪಿಲ್ ದೇವ್, ನವದೆಹಲಿಯ ಫೋರ್ಟಿಸ್ ಹಾರ್ಟ್ ಇನ್ಸ್ಟಿಟ್ಯೂಟ್ ಆಸ್ಪತ್ರೆಯಲ್ಲಿ ಹೃದ್ರೋಗ ತಜ್ಞ ಡಾ. ಅತುಲ್ ಮಾಥುರ್ ಅವರ ನಿರ್ದೇಶನದಲ್ಲಿ ಕೋವಿಡ್ ಲಸಿಕೆ ಪಡೆದಿದ್ದಾರೆ. ಎದೆ ನೋವಿನ ಕಾರಣ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಕಪಿಲ್ ದೇವ್ ಆಸ್ಪತ್ರಗೆ ದಾಖಲಾಗಿದ್ದರು. ಈ ವೇಳೆ ಅವರಿಗೆ ಆಂಜಿಯೋಪ್ಲ್ಯಾಸ್ಟಿ ಮಾಡಲಾಗಿತ್ತು.
ಟೀಂ ಇಂಡಿಯಾ ಪರ 131 ಟೆಸ್ಟ್ ಪಂದ್ಯ ಹಾಗೂ 225 ಏಕದಿನ ಪಂದ್ಯಗಳನ್ನಾಡಿರುವ ಕಪಿಲ್ ದೇವ್ 5,248 ರನ್ಗಳಿಕೆ ಮಾಡಿದ್ದು, 434 ವಿಕೆಟ್ ಪಡೆದುಕೊಂಡಿದ್ದಾರೆ. ಇವರ ನಾಯಕತ್ವದಲ್ಲಿ ಟೀಂ ಇಂಡಿಯಾ 1983ರ ವಿಶ್ವಕಪ್ ಗೆದ್ದಿತ್ತು. ಇದಕ್ಕೂ ಮೊದಲು 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಮದನ್ ಲಾಲ್ ಕೂಡ ನಿನ್ನೆ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ. ಜತೆಗೆ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಕೂಡ ಲಸಿಕೆ ಹಾಕಿಸಿಕೊಂಡಿದ್ದರು.
-
In the fight against Covid -19 .. im vaccine strong!!! "Proud to get the Jab ". Organized and well handled at Jeewan hospital and nursing home !!! pic.twitter.com/Ur70FSxOyh
— Madan Lal (@MadanLal1983) March 2, 2021 " class="align-text-top noRightClick twitterSection" data="
">In the fight against Covid -19 .. im vaccine strong!!! "Proud to get the Jab ". Organized and well handled at Jeewan hospital and nursing home !!! pic.twitter.com/Ur70FSxOyh
— Madan Lal (@MadanLal1983) March 2, 2021In the fight against Covid -19 .. im vaccine strong!!! "Proud to get the Jab ". Organized and well handled at Jeewan hospital and nursing home !!! pic.twitter.com/Ur70FSxOyh
— Madan Lal (@MadanLal1983) March 2, 2021
ದೇಶಾದ್ಯಂತ ಕೋವಿಡ್ ಲಸಿಕೆ ಹಾಕುವ 2ನೇ ಹಂತದ ಅಭಿಯಾನ ಮಾರ್ಚ್ 1ರಿಂದ ಆರಂಭಗೊಂಡಿದ್ದು, ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿ ಅನೇಕರು ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ.