ಕಟುನಾಯಕೆ(ಶ್ರೀಲಂಕಾ): ವಿಶ್ವಕಪ್ ಟೂರ್ನಿ ಫೈನಲ್ ಪಂದ್ಯದಲ್ಲಿ ವಿರೋಚಿತ ಸೋಲುಂಡ ನ್ಯೂಜಿಲ್ಯಾಂಡ್ ತಂಡ ಸೋಲಿನ ನಡುವೆಯೂ ಕೊಟ್ಯಂತರ ಕ್ರೀಡಾಭಿಮಾನಿಗಳ ಮನಗೆದ್ದಿದ್ದರು.ಅದರಲ್ಲೂ ನಾಯಕ ಕೇನ್ ವಿಲಿಯಮ್ಸನ್ ಕ್ರಿಕೆಟ್ ಅಭಿಮಾನಿಗಳ ಫೇವರೆಟ್ ಆದರು.
ಪ್ರಸ್ತುತ ಲಂಕಾ ಪ್ರವಾಸದಲ್ಲಿರುವ ಕಿವೀಸ್ ಟೀಮ್, ಲಂಕಾ ಬೋರ್ಡ್ ಪ್ರೆಸಿಡೆಂಟ್ ಇಲೆವೆನ್ ಜೊತೆ ಗುರುವಾರ ನಡೆದ ಪಂದ್ಯದ ವೇಳೆ ಪಂದ್ಯ ನೋಡಲು ಬಂದ ಅಭಿಮಾನಿಗಳು ಕೇನ್ಗೆ ಕೇಕ್ ತಿನ್ನಿಸಿ ಸಂಭ್ರಮಿಸಿದ್ದಾರೆ.
-
What a way to celebrate the Birthday! Kane Williamson celebrates his 29th with Sri Lankan fans eating a piece of Cake with them during the warm-up! @BLACKCAPS pic.twitter.com/WyzZ86NUVH
— Sri Lanka Cricket 🇱🇰 (@OfficialSLC) August 8, 2019 " class="align-text-top noRightClick twitterSection" data="
">What a way to celebrate the Birthday! Kane Williamson celebrates his 29th with Sri Lankan fans eating a piece of Cake with them during the warm-up! @BLACKCAPS pic.twitter.com/WyzZ86NUVH
— Sri Lanka Cricket 🇱🇰 (@OfficialSLC) August 8, 2019What a way to celebrate the Birthday! Kane Williamson celebrates his 29th with Sri Lankan fans eating a piece of Cake with them during the warm-up! @BLACKCAPS pic.twitter.com/WyzZ86NUVH
— Sri Lanka Cricket 🇱🇰 (@OfficialSLC) August 8, 2019
ಶ್ರೀಲಂಕಾ ಅಭಿಮಾನಿಗಳು ತಂದಿದ್ದ ಕೇಕ್ ಅನ್ನು ಕೇನ್ ವಿಲಿಯಮ್ಸನ್ ಕಟ್ ಮಾಡಿ ತಿಂದಿದ್ದಾರೆ. ದೇಶಾತೀತವಾಗಿ ಓರ್ವ ಕ್ರಿಕೆಟಿಗ ಅಭಿಮಾನಿ ವರ್ಗವನ್ನು ಸೃಷ್ಟಿ ಮಾಡಿಕೊಳ್ಳುವುದು ಅಪರೂಪ ಮತ್ತು ಕೊಂಚ ಕಷ್ಟವೂ ಹೌದು. ಆದರೆ ಕೇನ್ ಮೃದು ಸ್ವಭಾವ ಕಿವೀಸ್ ಫ್ಯಾನ್ಸ್ಗೆ ಮಾತ್ರವಲ್ಲದೆ ಎಲ್ಲ ಕ್ರಿಕೆಟ್ ಅಭಿಮಾನಿಗಳಿಗೂ ಇಷ್ಟವಾಗಿದೆ.
ಕೇನ್ ವಿಲಿಯಮ್ಸನ್ ಮೈದಾನದಲ್ಲಿ ಕೇಕ್ ಕಟ್ ಮಾಡುತ್ತಿರುವ ಫೋಟೋಗಳನ್ನು ಶ್ರೀಲಂಕಾ ಕ್ರಿಕೆಟ್ ತನ್ನ ಅಧಿಕೃತ ಟ್ವಿಟರ್ ಖಾತೆ ಹಂಚಿಕೊಂಡಿದೆ. ಇದು ಒಂದು ಅದ್ಭುತ ಸಂದರ್ಭ ಎಂದು ಬರೆದುಕೊಂಡಿದೆ.