ETV Bharat / sports

ರಬಾಡ ವಿಕೆಟ್​ ಕೀಳುವ ರಣೋತ್ಸಾಹ.. ಸತತ 25 ಪಂದ್ಯಗಳಲ್ಲಿ ಕನಿಷ್ಠ 1 ವಿಕೆಟ್​ ಪಡೆದ ಡೆಲ್ಲಿ ಬೌಲರ್ - ರಬಾಡ ದಾಖಲೆ

ರಬಾಡ ಕೇವಲ 11 ಪಂದ್ಯಗಳಿಂದ 22 ವಿಕೆಟ್ ಪಡೆದಿದ್ದಾರೆ. ಇನ್ನೂ 3 ಲೀಗ್ ಹಾಗೂ ಪ್ಲೇ ಆಫ್ ಸೇರಿ 5-6 ಪಂದ್ಯಗಳಿದ್ದು, 10 ವಿಕೆಟ್ ಪಡೆದರೆ ಐಪಿಎಲ್ ಸೀಸನ್​ ಒಂದರಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎಂಬ ದಾಖಲೆ ಕೂಡ ರಬಾಡ ಪಾಲಾಗಲಿದೆ..

ಕಗಿಸೋ ರಬಾಡ
ಕಗಿಸೋ ರಬಾಡ
author img

By

Published : Oct 24, 2020, 5:15 PM IST

ದುಬೈ: ಐಪಿಎಲ್​ನ 13ನೇ ಆವೃತ್ತಿಯಲ್ಲಿ ತಮ್ಮ ಅದ್ಭುತ ಫಾರ್ಮ್​ ಮುಂದುವರಿಸಿರುವ ಡೆಲ್ಲಿಕ್ಯಾಪಿಟಲ್ ತಂಡದ ಕಗಿಸೋ ರಬಾಡ ಇಂಡಿಯನ್ ಪ್ರೀಮಿಯರ್ ಲೀಗ್​ನ ಇತಿಹಾಸದಲ್ಲಿ ಸತತ 25 ಪಂದ್ಯಗಳಲ್ಲಿ ಕನಿಷ್ಠ 1 ವಿಕೆಟ್ ಪಡೆದ 2ನೇ ಬೌಲರ್ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

2020ರ ಆವೃತ್ತಿಯಲ್ಲಿ ಈ ಪಂದ್ಯಕ್ಕೂ ಮುನ್ನ 21 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಪಡೆದಿರುವ ರಬಾಡ ಇಂದಿನ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ವಿಕೆಟ್ ಪಡೆಯುವ ಮೂಲಕ ಐಪಿಎಲ್​ನಲ್ಲಿ ಸತತ 25ನೇ ಪಂದ್ಯದಲ್ಲೂ ವಿಕೆಟ್ ಪಡೆಯವಲ್ಲಿ ಯಶಸ್ವಿಯಾಗಿದ್ದಾರೆ.

ಅತಿ ಹೆಚ್ಚು ಸತತ ಪಂದ್ಯಗಳಲ್ಲಿ ವಿಕೆಟ್ ಪಡೆದಿರುವ ದಾಖಲೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್​ರೌಂಡರ್ ಡ್ವೇನ್ ಬ್ರಾವೋ ಇದ್ದು, ಅವರು ಸತತ 27 ಪಂದ್ಯಗಳಲ್ಲಿ ಕನಿಷ್ಠ ಒಂದು ವಿಕೆಟ್ ಪಡೆದ ದಾಖಲೆ ಬರೆದಿದ್ದಾರೆ. ಬ್ರಾವೋ ಐಪಿಎಲ್​ನಲ್ಲಿ 2 ಬಾರಿ ಪರ್ಪಲ್ ಕ್ಯಾಪ್ ಪಡೆದಿರುವ ಬೌಲರ್ ಕೂಡ ಆಗಿದ್ದಾರೆ.

ಇದರ ಜೊತೆಗೆ ರಬಾಡ ಕೇವಲ 11 ಪಂದ್ಯಗಳಿಂದ 22 ವಿಕೆಟ್ ಪಡೆದಿದ್ದಾರೆ. ಇನ್ನೂ 3 ಲೀಗ್ ಹಾಗೂ ಪ್ಲೇ ಆಫ್ ಸೇರಿ 5-6 ಪಂದ್ಯಗಳಿದ್ದು, 10 ವಿಕೆಟ್ ಪಡೆದರೆ ಐಪಿಎಲ್ ಸೀಸನ್​ ಒಂದರಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎಂಬ ದಾಖಲೆ ಕೂಡ ರಬಾಡ ಪಾಲಾಗಲಿದೆ. 2013 ರಲ್ಲಿ ಡ್ವೇನ್ ಬ್ರಾವೋ 32 ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.