ETV Bharat / sports

20 ನಿಮಿಷ ತರಬೇತಿ ನಡೆಸಿದರೂ ತೀವ್ರತೆ ಇರಲಿ, ಕಷ್ಟಪಡುವ ಅಗತ್ಯವಿಲ್ಲ: ಮಹಿಳಾ ಕ್ರಿಕೆಟಿಗರಿಗೆ ಮಿಥಾಲಿ ಸಲಹೆ

author img

By

Published : Oct 28, 2020, 10:22 PM IST

ಮಹಿಳೆಯರ ಟಿ20 ಚಾಲೆಂಜ್​ ನವೆಂಬರ್​ 4ರಿಂದ 9ರವರೆಗೆ ಶಾರ್ಜಾ ಮೈದಾನದಲ್ಲಿ 3 ತಂಡಗಳು ಫೈನಲ್ ಸೇರಿದಂತೆ 4 ಪಂದ್ಯಗಳನ್ನಾಡಲಿವೆ. ಈ ಟೂರ್ನಿಯಲ್ಲಿ ಟ್ರೈಬ್ಲೇಜರ್ಸ್ , ಸೂಪರ್​ನೋವಾಸ್​ ಹಾಗೂ ವೆಲಾಸಿಟಿ ತಂಡಗಳು ಸೆಣಸಾಡಲಿವೆ. ಈ ತಂಡಗಳನ್ನು ಕ್ರಮವಾಗಿ ಸ್ಮೃತಿ ಮಂಧಾನ, ಹರ್ಮನ್ ಪ್ರೀತ್ ಕೌರ್ ಹಾಗೂ ಮಿಥಾಲಿ ರಾಜ್ ಮುನ್ನಡೆಸಲಿದ್ದಾರೆ.

ಮಹಿಳೆಯರ ಐಪಿಎಲ್
ಮಿಥಾಲಿ ರಾಜ್​

ಶಾರ್ಜಾ: ಮಹಿಳೆಯರ ಐಪಿಎಲ್​ಗೆ ಒಂದು ವಾರವಿದ್ದು, ವೆಲಾಸಿಟಿ ತಂಡದ ನಾಯಕಿ ಮಿಥಾಲಿ ರಾಜ್ ಬುಧವಾರ ಟೂರ್ನಿಗೂ ಮುನ್ನ ತಮ್ಮ ತಂಡದ ಆಟಗಾರರಿಗೆ ಕೇವಲ ನಿಮ್ಮ ಮೂಲಭೂತ ಸಾಮರ್ಥ್ಯದ ಕಡೆ ಗಮನ ಹರಿಸಿ ಎಂದು ಸಲಹೆ ನೀಡಿದ್ದಾರೆ.

ಈಗಾಗಲೆ ಎಲ್ಲಾ ಆಟಗಾರ್ತಿಯರು ಯುಎಇಗೆ ತಲುಪಿದ್ದು 6 ದಿನಗಳ ಕಾಲ ಕ್ವಾರಂಟೈನ್ ಮುಗಿಸಿದ್ದಾರೆ. ಸುದೀರ್ಘ ಸಮಯದ ನಂತರ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳಿರುವ ಆಟಗಾರ್ತಿಯರಿಗೆ ಅನುಭವಿ ಆಟಗಾರ್ತಿ ಮಿಥಾಲಿ ರಾಜ್​ ಕೆಲವು ಸಲಹೆ ನೀಡಿದ್ದಾರೆ.

ನಾವು ಇಲ್ಲಿಗೆ ಯಾರನ್ನು ಜಡ್ಜ್​ ಮಾಡಲು ಬಂದಿಲ್ಲ. ನಾವೆಲ್ಲರೂ ಕ್ವಾರಂಟೈನ್ ಮುಗಿಸಿ ಬಂದಿದ್ದೇವೆ. ಮುಂದಿನ ಒಂದೆರೆಡು ದಿನ ಕೇವಲ ನಿಮ್ಮ ಮೂಲಭೂತ ಸಾಮರ್ಥ್ಯದ ಕಡೆ ಗಮನ ನೀಡಿ. ನಂತರ ಅದು ಸರಾವಾಗುತ್ತದೆ. ಕೇವಲ 20 ನಿಮಿಷಗಳ ಕಾಲ ತರಬೇತಿ ನಡೆಸಿದರು ಸಹಾ ಅದರಲ್ಲಿ ತೀವ್ರತೆ ಇರಬೇಕು, ಹೆಚ್ಚು ಕಷ್ಟಪಟ್ಟು ಪ್ರಯತ್ನಿಸುವುದು ಬೇಡ ಎಂದು ಭಾರತ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.