ಅಬುಧಾಬಿ: ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಕೇವಲ 2 ರನ್ಗಳಿಸಿದರೆ, ಐಪಿಎಲ್ ಇತಿಹಾಸದಲ್ಲಿ 5,000 ರನ್ಗಳಿಸಿದ 3ನೇ ಬ್ಯಾಟ್ಸ್ಮನ್ ಎನಿಸಿಕೊಳ್ಳಲಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡ ಆಡಿರುವ ಮೂರು ಪಂದ್ಯಗಳಲ್ಲಿ ಒಂದು ಪಂದ್ಯ ಮಾತ್ರ ಗೆದ್ದು , ಆರ್ಸಿಬಿ ಹಾಗೂ ಚೆನ್ನೈ ವಿರುದ್ಧ ಸೋಲು ಕಂಡಿದೆ. ಇಂದಿನ ಪಂದ್ಯದಲ್ಲಿ ಕೆಎಲ್ ರಾಹುಲ್ ನೇತೃತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸೆಣಸಾಡಲಿದೆ. ಈ ಪಂದ್ಯ ನಾಯಕ ರೋಹಿತ್ ಶರ್ಮಾರಿಗೆ ಮಹತ್ವದ್ದಾಗಿದ್ದು, ಕೇವಲ 2 ರನ್ಗಳಿಸಿದರೆ ಐಪಿಎಲ್ನಲ್ಲಿ 5 ಸಾವಿರ ರನ್ ಪೂರೈಸಿದ ಬ್ಯಾಟ್ಸ್ಮನ್ ಎನಿಸಿಕೊಳ್ಳಲಿದ್ದಾರೆ.
-
🙋🙋♂️ Raise your hands if you're waiting for this man to bat tonight!#OneFamily #MumbaiIndians #MI #Dream11IPL @ImRo45 pic.twitter.com/33txBYwO27
— Mumbai Indians (@mipaltan) October 1, 2020 " class="align-text-top noRightClick twitterSection" data="
">🙋🙋♂️ Raise your hands if you're waiting for this man to bat tonight!#OneFamily #MumbaiIndians #MI #Dream11IPL @ImRo45 pic.twitter.com/33txBYwO27
— Mumbai Indians (@mipaltan) October 1, 2020🙋🙋♂️ Raise your hands if you're waiting for this man to bat tonight!#OneFamily #MumbaiIndians #MI #Dream11IPL @ImRo45 pic.twitter.com/33txBYwO27
— Mumbai Indians (@mipaltan) October 1, 2020
ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಪ್ರಸ್ತುತ 190 ಪಂದ್ಯಗಳಿಂದ 4,998 ರನ್ಗಳಿಸಿದ್ದಾರೆ. ಈಗಾಗಲೇ ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ 178 ಪಂದ್ಯಗಳಿಂದ 5426 ರನ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸುರೇಶ್ ರೈನಾ193 ಪಂದ್ಯಗಳಿಂದ 5368 ರನ್ಗಳಿಸುವ ಮೂಲಕ ಐಪಿಎಲ್ನಲ್ಲಿ 5000 ರನ್ ಪೂರೈಸಿರುವ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.