ಮುಂಬೈ: ದಕ್ಷಿಣ ಆಫ್ರಿಕಾ ಮಾಜಿ ಆಲ್ರೌಂಡರ್ ಜೆಪಿ ಡುಮಿನಿ ತಮ್ಮ ನೆಚ್ಚಿನ ಐಪಿಎಲ್ ತಂಡವನ್ನು ಘೋಷಣೆ ಮಾಡಿದ್ದಾರೆ. ಇದರಲ್ಲಿ ಕೇವಲ ಇಬ್ಬರು ಭಾರತೀಯರನ್ನು ಆಯ್ಕೆ ಮಾಡಿದ್ದಾರೆ.
ಐಪಿಎಲ್ ನಿಯಮಾವಳಿಗಳ ಅನ್ವಯ ಒಂದು ತಂಡ 7 ಭಾರತೀಯರು ಹಾಗೂ 4 ವಿದೇಶಿ ಆಟಗಾರರನ್ನು ಆಯ್ಕೆ ಮಾಡಬೇಕಿತ್ತು. ಆದರೆ ಡುಮಿನಿ ಈ ನಿಯಮವನ್ನು ಮರೆತು ತಂಡವನ್ನು ಪ್ರಕಟಿಸಿದ್ದಾರೆ. ಆಶ್ಚರ್ಯವೆಂದರೆ ಐಪಿಎಲ್ನ ಶ್ರೇಷ್ಠ ನಾಯಕ ಹಾಗೂ ವಿಕೆಟ್ ಕೀಪರ್ ಆಗಿರುವ ಎಂಎಸ್ ಧೋನಿಯನ್ನು ತಂಡದಿಂದ ಕೈಬಿಟ್ಟಿದ್ದಾರೆ.
ಆಶ್ಚರ್ಯವೆಂದರೆ 4 ಐಪಿಎಲ್ ಟ್ರೋಫಿ ಗೆದ್ದಿರುವ ರೋಹಿತ್ ಶರ್ಮಾರನ್ನು ಬಿಟ್ಟು, ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ತಮ್ಮ ನೆಚ್ಚಿನ ತಂಡದ ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ. ಇನ್ನೂ ಆಶ್ಚರ್ಯಕರ ವಿಚಾರವೆಂದರೆ ಇವರಿಬ್ಬರೇ ಈ ತಂಡದಲ್ಲಿ ಸ್ಥಾನ ಪಡೆದಿರುವ ಆಟಗಾರರಾಗಿದ್ದಾರೆ.
ದಕ್ಷಿಣ ಆಫ್ರಿಕಾದ ಇಬ್ಬರು, ವಿಂಡೀಸ್ ತಂಡದ 3, ಶ್ರೀಲಂಕಾದ ಇಬ್ಬರು ಆಸ್ಟ್ರೇಲಿಯಾದ ಇಬ್ಬರು ಆಟಗಾರರನ್ನು ಡುಮಿನಿ ಆಯ್ಕೆ ಮಾಡಿದ್ದಾರೆ.
ಡುಮಿನಿ ಸಾರ್ವಕಾಲಿಕ ನೆಚ್ಚಿನ ತಂಡ
ಕ್ರಿಸ್ ಗೇಲ್, ಆಡಂ ಗಿಲ್‌ಕ್ರಿಸ್ಟ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್ಸ್, ಕೀರನ್ ಪೊಲಾರ್ಡ್, ಆಂಡ್ರೆ ರಸ್ಸೆಲ್, ಬ್ರೆಟ್ ಲೀ, ಮುತ್ತಯ್ಯ ಮುರಳೀಧರನ್, ಲಸಿತ್ ಮಾಲಿಂಗ, ಇಮ್ರಾನ್ ತಾಹಿರ್