ETV Bharat / sports

ಈ ಕಾರಣದಿಂದ ಜೋಸ್​ ಬಟ್ಲರ್​ ರಾಯಲ್ಸ್​ ಪರ ಮೊದಲ ಪಂದ್ಯವಾಡುತ್ತಿಲ್ಲ!!

author img

By

Published : Sep 20, 2020, 5:46 PM IST

ಬಟ್ಲರ್​ ಬಯೋ ಸೆಕ್ಯೂರ್​ ವಲಯದಿಂದ ಹೊರಬಂದ ಮೇಲೆ ಯುಎಇಗೆ ಕುಟುಂಬದವರೊಂದಿಗೆ ಯುಎಇಗೆ ಆಗಮಿಸಿದ್ದಾರೆ. ಈ ಕಾರಣದಿಂದ 6 ದಿನಗಳ ಕ್ವಾರಂಟೈನ್​ ಪೂರ್ತಿಗೊಳಿಸಬೇಕಿರುವುದು ಅನಿವಾರ್ಯವಾಗಿದೆ..

ಜೋಸ್​ ಬಟ್ಲರ್
ಜೋಸ್​ ಬಟ್ಲರ್

ದುಬೈ: ರಾಜಸ್ಥಾನ್​ ರಾಯಲ್ಸ್​ ತಂಡದ ಸ್ಫೋಟಕ ಬ್ಯಾಟ್ಸ್​ಮನ್​​ 22ನೇ ತಾರೀಖಿನಂದು ನಡೆಯುವ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ಆಡುತ್ತಿಲ್ಲ ಎನ್ನುವುದು ಖಚಿತವಾಗಿದೆ.

ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್​ಗಳ ಸರಣಿ ಮುಗಿಸಿ ಯುಎಇಗೆ ಬಂದಿಳಿದಿರುವ ಜೋಸ್​ ಬಟ್ಲರ್​ ತಮ್ಮ ರಾಜಸ್ಥಾನ್​ ರಾಯಲ್ಸ್​ ಪರ ಮೊದಲ ಪಂದ್ಯದಿಂದ ಹೊರಗುಳಿಯಲಿದ್ದಾರೆ.

ಬಟ್ಲರ್​ ಬಯೋ ಸೆಕ್ಯೂರ್​ ವಲಯದಿಂದ ಹೊರಬಂದ ಮೇಲೆ ಯುಎಇಗೆ ಕುಟುಂಬದವರೊಂದಿಗೆ ಯುಎಇಗೆ ಆಗಮಿಸಿದ್ದಾರೆ. ಈ ಕಾರಣದಿಂದ 6 ದಿನಗಳ ಕ್ವಾರಂಟೈನ್​ ಪೂರ್ತಿಗೊಳಿಸಬೇಕಿರುವುದು ಅನಿವಾರ್ಯವಾಗಿದೆ. ಹಾಗಾಗಿ, ಮೊದಲ ಪಂದ್ಯದಿಂದ ಅವರು ಹೊರಗುಳಿಯಲಿದ್ದಾರೆ. ಈ ವಿಚಾರವನ್ನು ರಾಜಸ್ಥಾನ್ ರಾಯಲ್ಸ್​ನ ಇನ್ಸ್‌ಸ್ಟಾಗ್ರಾಮ್ ಲೈವ್​ನಲ್ಲಿ ಬಟ್ಲರ್​ ಖಚಿತಪಡಿಸಿದ್ದಾರೆ.

ಈಗಾಗಲೇ ಇಂಗ್ಲೆಂಡ್​ ತಂಡದವರೇ ಆದ ಬೆನ್​ಸ್ಟೋಕ್ಸ್​ ಕೂಡ ಇನ್ನು ಐಪಿಎಲ್​ನಲ್ಲಿ ಆಡುವುದು ಖಚಿತವಾಗಿಲ್ಲ. ಇದೀಗ ಮೊದಲ ಪಂದ್ಯದಲ್ಲೇ ಬಟ್ಲರ್​ ಕೂಡ ಆಡದಿರುವುದು ರಾಯಲ್ಸ್‌ಗೆ ದೊಡ್ಡ ಹೊಡೆತ ನೀಡಿದೆ. ಜೋಸ್​ ಬಟ್ಲರ್​ 2018ರಲ್ಲಿ 13 ಪಂದ್ಯಗಳಿಂದ 548 ರನ್​ ಸಿಡಿಸಿದ್ದರು. 2019ರಲ್ಲಿ 8 ಪಂದ್ಯಗಳಿಂದ 311ರನ್​ ಸಿಡಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.