ETV Bharat / sports

ಇಶಾನ್​ ಕಿಶನ್ ಆರ್ಭಟ... ಸೂಪರ್ ಓವರ್​ನಲ್ಲಿ ಹೈದರಾಬಾದ್ ಮಣಿಸಿದ ಜಾರ್ಖಂಡ್​

author img

By

Published : Jan 18, 2021, 11:00 PM IST

ರಕ್ಷಾನ್​ ರೆಡ್ಡಿ ಎಸೆದ ಸೂಪರ್​ ಓವರ್​ನಲ್ಲಿ ಇಶಾನ್​ ಕಿಶನ್​ 2 ಸಿಕ್ಸರ್​ ಸಿಡಿಸಿದರೆ, ಅನುಕುಲ್ ರಾಯ್​ ಒಂದು ಸಿಕ್ಸರ್​ ಸಿಡಿಸುವ ಮೂಲಕ 23 ರನ್ ಸೇರಿಸಿದರು. ಆದರೆ ಹೈದರಾಬಾದ್​ ಕೇವಲ 14 ರನ್​ಗಳಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು. ಜಾರ್ಖಂಡ್​ 12 ಅಂಕಗಳೊಂದಿಗೆ ಗುಂಪಿನಲ್ಲಿ 3ನೇ ಸ್ಥಾನ ಪಡೆದುಕೊಂಡಿತು. ಹೈದರಾಬಾದ್ ಕೇವಲ ಒಂದು ಗೆಲುವಿನೊಂದಿಗೆ ಕೊನೆ ಸ್ಥಾನ ಪಡೆಯಿತು.

ಸೂಪರ್ ಓವರ್​ನಲ್ಲಿ ಹೈದರಾಬಾದ್ ಮಣಿಸಿದ ಜಾರ್ಖಂಡ್​

ಕೋಲ್ಕತ್ತಾ: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಮೆಂಟ್​ನ ಬಿ ಗುಂಪಿನ ಪಂದ್ಯದಲ್ಲಿ ಇಶಾನ್ ಕಿಶನ್ ನೇತೃತ್ವದ ಜಾರ್ಖಂಡ್ ತಂಡ ಹೈದರಾಬಾದ್​ ವಿರುದ್ಧ ಸೂಪರ್​ ಓವರ್​ ಮೂಲಕ ರೋಚಕ ಜಯ ಸಾಧಿಸಿದೆ.

ಸೋಮವಾರ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದ ಜಾರ್ಖಂಡ್ ಹೈದರಾಬಾದ್ ತಂಡವನ್ನು 20 ಓವರ್​ಗಳಲ್ಲಿ 139 ರನ್​ಗಳಿಗೆ ನಿಯಂತ್ರಿಸಿತ್ತು. ಎಡಗೈ ವೇಗಿ ವಿಕಾಶ್ ಸಿಂಗ್ ಹಾಗೂ ವಿವೇಕಾನಂದ್ ತಿವಾರಿ ತಲಾ ಮೂರು ವಿಕೆಟ್​ ಪಡೆದಿದ್ದರು.

2, 6, 1, 6, 6, 2! 👌

Anukul Roy hits one six while @ishankishan51 creams two sixes as Jharkhand score 23 runs in the Super Over. 👍#JHAvHYD #SyedMushtaqAliT20

Will Hyderabad score 24 runs to win the game in the Super Over?🤔🤔

Follow the match 👉 https://t.co/EdCwmxMAcu pic.twitter.com/mkAU7B71sU

— BCCI Domestic (@BCCIdomestic) January 18, 2021

ಹೈದರಾಬಾದ್​ ಪರ ಬಿ.ಸಂದೀಪ್​ 37, ಹಿಮಾಲಯ್ ಅಗರ್​ವಾಲ್​ ಮತ್ತು ಬುದ್ದಿ ರಾಹುಲ್ ತಲಾ 26 ರನ್​ಗಳಿಸಿ ಸ್ಪರ್ಧಾತ್ಮಕ ಮೊತ್ತಗಳಿಸಲು ನೆರವಾಗಿದ್ದರು.

140 ರನ್​ಗಳ ಗುರಿ ಬೆನ್ನತ್ತಿದ ಜಾರ್ಖಂಡ್​ ನಾಯಕ ಇಶಾನ್ ಕಿಶನ್(27) ಹಾಗೂ ಉತ್ಕರ್ಷ್​ ಸಿಂಗ್(29) ಮೊದಲ ವಿಕೆಟ್ಗೆ 43 ರನ್​ಗಳಿಸಿ ಉತ್ತಮ ಆರಂಭ ನೀಡಿದರು. ಮಧ್ಯಮ ಕ್ರಮಾಂಕದ ವೈಫಲ್ಯದ ನಡುವೆಯೂ ಕೌಶಾಲ್ ಸಿಂಗ್(24) ಮತ್ತು ಅನುಕುಲ್ ರಾಯ್​(18)ಅವರ ಸಾಹಸದಿಂದ ಪಂದ್ಯ ಟೈನಲ್ಲಿ ಅಂತ್ಯಗೊಂಡಿತು. ಹೈದರಾಬಾದ್​ ಪರ ಅಜಯ್​ ದೇವ್​ 4, ರವಿತೇಜ 2 ವಿಕೆಟ್​ ಪಡೆದು ಮಿಂಚಿದರು.

ಇನ್ನು ರಕ್ಷಾನ್​ ರೆಡ್ಡಿ ಎಸೆದ ಸೂಪರ್​ ಓವರ್​ನಲ್ಲಿ ಇಶಾನ್​ ಕಿಶನ್​ 2 ಸಿಕ್ಸರ್​ ಸಿಡಿಸಿದರೆ, ಅನುಕುಲ್ ರಾಯ್​ ಒಂದು ಸಿಕ್ಸರ್​ ಸಿಡಿಸುವ ಮೂಲಕ 23 ರನ್ ಸೇರಿಸಿದರು. ಆದರೆ ಹೈದರಾಬಾದ್​ ಕೇವಲ 14 ರನ್​ಗಳಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು. ಜಾರ್ಖಂಡ್​ 12 ಅಂಕಗಳೊಂದಿಗೆ ಗುಂಪಿನಲ್ಲಿ 3ನೇ ಸ್ಥಾನ ಪಡೆದುಕೊಂಡಿತು. ಹೈದರಾಬಾದ್ ಕೇವಲ ಒಂದು ಗೆಲುವಿನೊಂದಿಗೆ ಕೊನೆ ಸ್ಥಾನ ಪಡೆಯಿತು.

ಕೋಲ್ಕತ್ತಾ: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಮೆಂಟ್​ನ ಬಿ ಗುಂಪಿನ ಪಂದ್ಯದಲ್ಲಿ ಇಶಾನ್ ಕಿಶನ್ ನೇತೃತ್ವದ ಜಾರ್ಖಂಡ್ ತಂಡ ಹೈದರಾಬಾದ್​ ವಿರುದ್ಧ ಸೂಪರ್​ ಓವರ್​ ಮೂಲಕ ರೋಚಕ ಜಯ ಸಾಧಿಸಿದೆ.

ಸೋಮವಾರ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದ ಜಾರ್ಖಂಡ್ ಹೈದರಾಬಾದ್ ತಂಡವನ್ನು 20 ಓವರ್​ಗಳಲ್ಲಿ 139 ರನ್​ಗಳಿಗೆ ನಿಯಂತ್ರಿಸಿತ್ತು. ಎಡಗೈ ವೇಗಿ ವಿಕಾಶ್ ಸಿಂಗ್ ಹಾಗೂ ವಿವೇಕಾನಂದ್ ತಿವಾರಿ ತಲಾ ಮೂರು ವಿಕೆಟ್​ ಪಡೆದಿದ್ದರು.

ಹೈದರಾಬಾದ್​ ಪರ ಬಿ.ಸಂದೀಪ್​ 37, ಹಿಮಾಲಯ್ ಅಗರ್​ವಾಲ್​ ಮತ್ತು ಬುದ್ದಿ ರಾಹುಲ್ ತಲಾ 26 ರನ್​ಗಳಿಸಿ ಸ್ಪರ್ಧಾತ್ಮಕ ಮೊತ್ತಗಳಿಸಲು ನೆರವಾಗಿದ್ದರು.

140 ರನ್​ಗಳ ಗುರಿ ಬೆನ್ನತ್ತಿದ ಜಾರ್ಖಂಡ್​ ನಾಯಕ ಇಶಾನ್ ಕಿಶನ್(27) ಹಾಗೂ ಉತ್ಕರ್ಷ್​ ಸಿಂಗ್(29) ಮೊದಲ ವಿಕೆಟ್ಗೆ 43 ರನ್​ಗಳಿಸಿ ಉತ್ತಮ ಆರಂಭ ನೀಡಿದರು. ಮಧ್ಯಮ ಕ್ರಮಾಂಕದ ವೈಫಲ್ಯದ ನಡುವೆಯೂ ಕೌಶಾಲ್ ಸಿಂಗ್(24) ಮತ್ತು ಅನುಕುಲ್ ರಾಯ್​(18)ಅವರ ಸಾಹಸದಿಂದ ಪಂದ್ಯ ಟೈನಲ್ಲಿ ಅಂತ್ಯಗೊಂಡಿತು. ಹೈದರಾಬಾದ್​ ಪರ ಅಜಯ್​ ದೇವ್​ 4, ರವಿತೇಜ 2 ವಿಕೆಟ್​ ಪಡೆದು ಮಿಂಚಿದರು.

ಇನ್ನು ರಕ್ಷಾನ್​ ರೆಡ್ಡಿ ಎಸೆದ ಸೂಪರ್​ ಓವರ್​ನಲ್ಲಿ ಇಶಾನ್​ ಕಿಶನ್​ 2 ಸಿಕ್ಸರ್​ ಸಿಡಿಸಿದರೆ, ಅನುಕುಲ್ ರಾಯ್​ ಒಂದು ಸಿಕ್ಸರ್​ ಸಿಡಿಸುವ ಮೂಲಕ 23 ರನ್ ಸೇರಿಸಿದರು. ಆದರೆ ಹೈದರಾಬಾದ್​ ಕೇವಲ 14 ರನ್​ಗಳಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು. ಜಾರ್ಖಂಡ್​ 12 ಅಂಕಗಳೊಂದಿಗೆ ಗುಂಪಿನಲ್ಲಿ 3ನೇ ಸ್ಥಾನ ಪಡೆದುಕೊಂಡಿತು. ಹೈದರಾಬಾದ್ ಕೇವಲ ಒಂದು ಗೆಲುವಿನೊಂದಿಗೆ ಕೊನೆ ಸ್ಥಾನ ಪಡೆಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.