ETV Bharat / sports

ವಿಂಡೀಸ್​ ವಿರುದ್ಧ ಇಶಾಂತ್​ 5 ವಿಕೆಟ್​ ಪಡೆದಿರುವುದಕ್ಕೆ ಸಲಹೆ ನೀಡಿದ್ದು ಯಾರು ಗೊತ್ತಾ?

ವಿಂಡೀಸ್ ವಿರುದ್ಧ 5 ವಿಕೆಟ್​ ಪಡೆದಿದ್ದ ಇಶಾಂತ್​ಗೆ ಬೌಲಿಂಗ್​ ನಡೆಸಲು ಬುಮ್ರಾ ನೀಡಿದ ಸಲಹೆಯೇ ಕಾರಣ ಎಂದು ಸ್ವತಃ ಇಶಾಂತ್​ ಶರ್ಮಾ ಹೇಳಿಕೊಂಡಿದ್ದಾರೆ.

Jasprit Bumrah
author img

By

Published : Aug 25, 2019, 1:17 PM IST

Updated : Aug 26, 2019, 7:10 AM IST

ಆ್ಯಂಟಿಗೋವಾ: ಭಾರತ ತಂಡ ವೆಸ್ಟ್​ ಇಂಡೀಸ್​ ವಿರುದ್ಧದ ಟೆಸ್ಟ್​ನಲ್ಲಿ ಮೇಲುಗೈ ಸಾಧಿಸಿದೆ. ಆದರೆ, ವಿಂಡೀಸ್​ ವಿರುದ್ಧ ಇನ್ನಿಂಗ್ಸ್​ ಮುನ್ನಡೆ ಸಾಧಿಸಲು ಕಾರಣರಾಗಿದ್ದು ಹಿರಿಯ ವೇಗಿ ಇಸಾಂತ್​ ಶರ್ಮಾ.

ಟೀಮ್​ ಇಂಡಿಯಾ ಮೊದಲ ಇನ್ನಿಂಗ್ಸ್​ನಲ್ಲಿ 297 ರನ್​ಗಳಿಸಲು ನೆರವಾಗಿದ್ದ ಜಡೇಜಾಗೆ ಉತ್ತಮ ಸಾಥ್​ ನೀಡಿದ್ದ ಇಶಾಂತ್​ ಬೌಲಿಂಗ್​ನಲ್ಲೂ 5 ವಿಕೆಟ್​ ಪಡೆದು ವಿಂಡೀಸ್​ ತಂಡವನ್ನು ಆಲೌಟ್​ ಮಾಡಲು ನೆರವಾಗಿದ್ದರು.ಆದರೆ, ಇಶಾಂತ್​ ಈ ಪಂದ್ಯದಲ್ಲಿ 5 ವಿಕೆಟ್​ ಪಡೆಯಲು ಅವರಿಗೆ ಯಾವ ರೀತಿ ಬೌಲಿಂಗ್​ ಮಾಡಬೇಕೆಂದು ಸಲಹೆ ನೀಡಿದ್ದು ಅವರಿಗಿಂತ ಚಿಕ್ಕ ವಯಸ್ಸಿನವರಾದ ಜಸ್ಪ್ರೀತ್​ ಬುಮ್ರಾ ಎಂಬುದನ್ನು ಸ್ವತಃ ಇಶಾಂತ್​ ಶರ್ಮಾ ತಿಳಿಸಿದ್ದಾರೆ.

Jasprit Bumrah
ಜಸ್ಪ್ರೀತ್​ ಬುಮ್ರಾ

ಪಂದ್ಯದ ವೇಳೆ ಮಳೆ ಬಿದ್ದು ಚೆಂಡು ಒದ್ದೆಯಾಗಿದ್ದರಿಂದ ನಮ್ಮ ವೈಯಕ್ತಿಕ ಬೌಲಿಂಗ್​ನಲ್ಲಿ ಯಾವುದೇ ಪ್ರಯೋಜನವಾಗುವುದಿಲ್ಲ. ನಾವು ಕ್ರಾಸ್​ ಸೀಮ್​ನಲ್ಲಿ​ ಬೌಲಿಂಗ್ ಮಾಡೋಣ ಎಂದು ಬುಮ್ರಾ ತಿಳಿಸಿದರು. ಅವರು ನೀಡಿದ ಸಲಹೆಯನ್ನು ಪ್ರಯೋಗ ಮಾಡಿದ್ದರಿಂದ ನನ್ನ ಬೌಲಿಂಗ್​ ಯಶಸ್ವಿಯಾಯಿತು ಎಂದು 5 ವಿಕೆಟ್​ ಪಡೆದ ಇಶಾಂತ್​ ಮಾಧ್ಯಮಕ್ಕೆ ತಿಳಿಸಿದ್ದಾರೆ. ಇಶಾಂತ್​ ಶರ್ಮಾ 43 ರನ್​ ನೀಡಿ 5 ವಿಕೆಟ್​ ಪಡೆದು ವಿಂಡೀಸ್ ತಂಡವನ್ನು​ 222 ರನ್​ಗಳಿಗೆ ಆಲೌಟ್​ ಮಾಡುವ ಮೂಲಕ 75 ರನ್​ಗಳ ಮುನ್ನಡೆ ಸಾಧಿಸಲು ನೆರವಾದರು.

Intro:Body:Conclusion:
Last Updated : Aug 26, 2019, 7:10 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.