ಲೀಡ್ಸ್: ವಿಶ್ವ ಏಕದಿನ ಕ್ರಿಕೆಟ್ನ ನಂಬರ್ ಒನ್ ಬೌಲರ್ ಆಗಿರುವ ಬುಮ್ರಾ ಹೆಸರಿಗೆ ಮತ್ತೊಂದು ದಾಖಲೆ ಸೇರ್ಪಡೆಗೊಂಡಿದೆ.
ಇಂದು ಲಂಕಾ ವಿರುದ್ಧ ನಡೆಯುತ್ತಿರುವ ವಿಶ್ವಕಪ್ನ ಕೊನೆಯ ಲೀಗ್ ಪಂದ್ಯದಲ್ಲಿ ಲಂಕಾ ನಾಯಕ ಕರುಣರತ್ನೆ ವಿಕೆಟ್ ಪಡೆಯುವ ಮೂಲಕ ಏಕದಿನ ಕ್ರಿಕೆಟ್ನಲ್ಲಿ 100ನೇ ವಿಕೆಟ್ ಪಡೆದಿದ್ದಾರೆ. ಅಲ್ಲದೆ 57ನೇ ಏಕದಿನ ಪಂದ್ಯದಲ್ಲಿ ಈ ಸಾಧನೆ ಮಾಡುವ ಮೂಲಕ ವೇಗವಾಗಿ ಈ ಸಾಧನೆ ಮಾಡಿದ ವಿಶ್ವದ 9ನೇ ಹಾಗೂ ಭಾರತದ ಎರಡನೇ ಬೌಲರ್ ಎಂಬ ಖ್ಯಾತಿಗೆ ಪಾತ್ರರಾದರು.
-
A century of ODI wickets for Jasprit Bumrah 💯
— ICC (@ICC) July 6, 2019 " class="align-text-top noRightClick twitterSection" data="
It's taken him just 57 games to reach the landmark - only one Indian has got there quicker 😱
Can you guess who? 🤔#SLvIND | #CWC19 | #TeamIndia pic.twitter.com/mV9RXJLB9j
">A century of ODI wickets for Jasprit Bumrah 💯
— ICC (@ICC) July 6, 2019
It's taken him just 57 games to reach the landmark - only one Indian has got there quicker 😱
Can you guess who? 🤔#SLvIND | #CWC19 | #TeamIndia pic.twitter.com/mV9RXJLB9jA century of ODI wickets for Jasprit Bumrah 💯
— ICC (@ICC) July 6, 2019
It's taken him just 57 games to reach the landmark - only one Indian has got there quicker 😱
Can you guess who? 🤔#SLvIND | #CWC19 | #TeamIndia pic.twitter.com/mV9RXJLB9j
ಬುಮ್ರಾಗಿಂತ ಮೊದಲು ಭಾರತದ ಮೊಹಮ್ಮದ್ ಶಮಿ 56 ಏಕದಿನ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು. ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ವೇಗವಾಗಿ 100 ವಿಕೆಟ್ ಪಡೆದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಖಾನ್ 44 ಪಂದ್ಯಗಳಲ್ಲಿ ವಿಕೆಟ್ಗಳ ಶತಕ ಬಾರಿಸಿದ್ದರು. ನಂತರದ ಸ್ಥಾನದಲ್ಲಿ ಆಸೀಸ್ ವೇಗಿ ಸ್ಟಾರ್ಕ್ ಇದ್ದು, ಅವರು 52 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು.
ಏಕದಿನದಲ್ಲಿ ಅತಿ ವೇಗದಲ್ಲಿ 100 ವಿಕೆಟ್ ಪಡೆದವರು
ರಶೀದ್ ಖಾನ್ (44)
ಮಿಚೆಲ್ ಸ್ಟಾರ್ಕ್(52)
ಸಕ್ಲೈನ್ ಮುಷ್ತಾಕ್(53)
ಶೇನ್ ಬಾಂಡ್(54)
ಮುಸ್ತಫಿಜುರ್ ರಹಮಾನ್(54)
ಬ್ರೆಟ್ಲೀ(55)
ಟ್ರೆಂಟ್ ಬೌಲ್ಟ್(56)
ಮೊಹಮ್ಮದ್ ಶಮಿ(56)
ಜಸ್ಪ್ರೀತ್ ಬುಮ್ರಾ(57)
ಏಕದಿನದಲ್ಲಿ ಅತಿ ವೇಗವಾಗಿ 100 ವಿಕೆಟ್ ಪಡೆದ ಭಾರತೀಯರು
ಮೊಹಮ್ಮದ್ ಶಮಿ (56)
ಜಸ್ಪ್ರೀತ್ ಬುಮ್ರಾ (57)
ಇರ್ಫಾನ್ ಪಠಾಣ್ (59)
ಜಹೀರ್ ಖಾನ್ (65)
ಅಜಿತ್ ಅಗರ್‌ಕರ್(67)
ಜಾವಗಲ್ ಶ್ರೀನಾಥ್(68)