ETV Bharat / sports

ಭಾರತದಲ್ಲಿ ಬುಮ್ರಾರಂತಹ ವೇಗದ ಬೌಲರ್​ ಹುಟ್ಟುತ್ತಾರೆಂದು ನಾವು ಆಲೋಚಿಸಿರಲಿಲ್ಲ: ಕರ್ಟ್ನಿ ಆ್ಯಂಬ್ರೋಸ್​ - ಆ್ಯಂಡಿ ರಾಬರ್ಟ್ಸ್

ವೆಸ್ಟ್​ ವಿಂಡೀಸ್​ ವಿರುದ್ಧ ಮೊದಲ ಟೆಸ್ಟ್​ನಲ್ಲಿ ಅದ್ಭುತ ಬೌಲಿಂಗ್​ ಪ್ರದರ್ಶನ ತೋರಿದ ಬುಮ್ರಾ ಅದ್ಬುತ ಬೌಲಿಂಗ್​ ಪ್ರದರ್ಶನ ತೋರಿ ಕೇವಲ 7 ರನ್​ ನೀಡಿ 5 ವಿಕೆಟ್​ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿದ್ದರು. ಈ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ ಆಫ್ರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್​ ಹಾಗೂ ವೆಸ್ಟ್​ ಇಂಡೀಸ್​ನಲ್ಲಿ 5 ವಿಕೆಟ್​ ಪಡೆದ ಏಷ್ಯಾದ ಮೊದಲ ಬೌಲರ್​ ಎಂಬ ಕೀರ್ತಿಗೆ ಭಾಜನರಾಗಿದ್ದರು.

Curtly Ambrose- Jasprit Bumrah
author img

By

Published : Aug 29, 2019, 3:28 PM IST

ಆ್ಯಂಟಿಗುವಾ: ಭಾರತ ತಂಡದ ವೇಗದ ಬೌಲರ್ ಬುಮ್ರಾರನ್ನು ವೆಸ್ಟ್​ ಇಂಡೀಸ್​ ಕಂಡ ಶ್ರೇಷ್ಠ ಕ್ರಿಕೆಟಿಗರಾದ ಕರ್ಟ್ನಿ ಆ್ಯಂಬ್ರೋಸ್​ ಹಾಗೂ ಆ್ಯಂಡಿ ರಾಬರ್ಟ್ಸ್​ ಕೊಂಡಾಡಿದ್ದಾರೆ. ​

ವೆಸ್ಟ್​ ವಿಂಡೀಸ್​ ವಿರುದ್ಧ ಮೊದಲ ಟೆಸ್ಟ್​ನಲ್ಲಿ ಅದ್ಭುತ ಬೌಲಿಂಗ್​ ಪ್ರದರ್ಶನ ತೋರಿದ ಬುಮ್ರಾ ಅದ್ಬುತ ಬೌಲಿಂಗ್​ ಪ್ರದರ್ಶನ ತೋರಿ ಕೇವಲ 7 ರನ್​ ನೀಡಿ 5 ವಿಕೆಟ್​ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿದ್ದರು. ಈ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ ಆಫ್ರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್​ ಹಾಗೂ ವೆಸ್ಟ್​ ಇಂಡೀಸ್​ನಲ್ಲಿ 5 ವಿಕೆಟ್​ ಪಡೆದ ಏಷ್ಯಾದ ಮೊದಲ ಬೌಲರ್​ ಎಂಬ ಕೀರ್ತಿಗೆ ಭಾಜನರಾಗಿದ್ದರು.

ಬುಮ್ರಾ ಪ್ರದರ್ಶನ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುವ ಕರ್ಟ್ನಿ ಆ್ಯಂಬ್ರೋಸ್​," ಬುಮ್ರಾ ಉತ್ತಮ ಲೈನ್​ ಹಾಗೂ ವೇರಿಯೇಷನ್​ನಲ್ಲಿ ಬ್ಯಾಟ್ಸ್​ಮನ್​ಗಳಿಗೆ ತಕ್ಕಂತೆ ಉತ್ತಮವಾಗಿ ಬೌಲ್​ ಮಾಡುತ್ತಾರೆ. ಅವರು ಪಿಚ್​ ಕಂಡೀಷನ್​ಗೆ ತಕ್ಕಂತೆ ವಿಶ್ವಕಪ್​ನಲ್ಲಿ ಬೌಲಿಂಗ್​ ಮಾಡುತ್ತಿದ್ದದ್ದನ್ನು ನಾನು ನೋಡಿದ್ದೇನೆ. ಆತನ ಬೌಲಿಂಗ್​ ಆ್ಯಕ್ಷನ್​ ನೋಡಿದರೆ ಕರ್ಟ್ನಿ ವಾಲ್ಸ್​ ತರ ಇದೆ. ಅತನ ವೇಗ, ಲೆಂತ್​ ಅಂಡ್​ ಲೈನ್​, ಅಗ್ರೆಷನ್, ಕುಶಲತೆಯುಳ್ಳ ಬೌಲಿಂಗ್​ ನಮ್ಮ ಕಾಲದಲ್ಲಿನ ಬೌಲರ್​ಗಳನ್ನು ನೆನೆಪಿಸುತ್ತಿದೆ. ಬುಮ್ರಾ ಯಾವುದೇ ಕಾಲದಲ್ಲಿ ಆಡಿರದ ಒಬ್ಬ ಪರಿಪೂರ್ಣ ಬೌಲರ್​ ಹಾಗೂ ಭಾರತದ ಬೌಲಿಂಗ್​ ಎಕ್ಸ್​ಪ್ರೆಸ್​ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮತ್ತೊಬ್ಬ ಲೆಜೆಂಡ್​ ಆಟಗಾರ ರಾಬರ್ಟ್​, ಜಸ್ಪ್ರಿತ್​ ಬುಮ್ರಾ ನಾನು ಕಂಡಂತಹ ಭಾರತದ ಅತ್ಯುತ್ತಮ ವೇಗದ ಬೌಲರ್​. ಭಾರತದಲ್ಲಿ ನಮ್ಮ ಕಾಲದಲ್ಲಿ ಸ್ಪಿನ್​ ಬೌಲರ್​ಗಳೇ ಹೆಚ್ಚಿನವರಾಗಿರುತ್ತಿದ್ದರು, ಇದ್ದ ವೇಗಿಗಳಲ್ಲಿ ಕಪಿಲ್​ ದೇವ್​ ಮಾತ್ರ ಉತ್ತಮ ಬೌಲಿಂಗ್​ ಮಾಡುತ್ತಿದ್ದರು. ಇದೀಗ ಬುಮ್ರಾ ಕಪಿಲ್​ಗಿಂತಲೂ ಉತ್ತಮ ಬೌಲರ್. ಭಾರತ ಇಂತಹ ಒಬ್ಬ ಬೌಲರ್​ ಒಬ್ಬನನ್ನು ಸೃಷ್ಠಿಸುತ್ತದೆ ನಾವು ಆಲೋಚಿಸಿರಲಿಲ್ಲ ​ ಎಂದು ರಾಬರ್ಟ್ಸ್​ ತಿಳಿಸಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.