ಹೈದರಾಬಾದ್: 2021ರ ಫೆಬ್ರವರಿಯಲ್ಲಿ ನಡೆದಿದ್ದ ಹರಾಜಿನಲ್ಲಿ ಅನ್ಸೋಲ್ಡ್ ಆಗಿದ್ದ ಇಂಗ್ಲೆಂಡ್ ಆರಂಭಿಕ ಬ್ಯಾಟ್ಸ್ಮನ್ ಜೇಸನ್ ರಾಯ್ಗೆ ಐಪಿಎಲ್ನಲ್ಲಿ ಆಡುವ ಅದೃಷ್ಟ ಸನ್ರೈಸರ್ಸ್ ಹೈದರಾಬಾದ್ ಮೂಲಕ ದೊರೆತಿದೆ. ವೈಯಕ್ತಿಕ ಕಾರಣಗಳಿಂದ ಆಸ್ಟ್ರೇಲಿಯಾ ಆಲ್ರೌಂಡರ್ ಮಿಚೆಲ್ ಮಾರ್ಷ್ ಐಪಿಎಲ್ನಿಂದ ಹಿಂದೆ ಸರಿದ ಕಾರಣ ಹೈದರಾಬಾದ್ ರಾಯ್ ಜೊತೆ ಬದಲಿ ಆಟಗಾರನಾಗಿ ಆಯ್ಕೆ ಮಾಡಿಕೊಂಡಿದೆ.
ಮಿಚೆಲ್ ಮಾರ್ಷ್ ಕಳೆದ ಆವೃತ್ತಿಯ ವೇಳೆ ಗಾಯಗೊಂಡು ಟೂರ್ನಿಯಿಂದಲೇ ಹೊರಬಿದ್ದಿದ್ದರು. ಹೈದರಾಬಾದ್ ತಂಡ ಜೇಸನ್ ಹೋಲ್ಡರ್ರನ್ನು ಅವರ ಬದಲು ತಂಡಕ್ಕೆ ಸೇರಿಸಿಕೊಂಡಿತ್ತು. ಇದೀಗ ಈ ವರ್ಷವೂ ಮಾರ್ಷ್ ಶ್ರೀಮಂತ ಲೀಗ್ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ ಜೇಸನ್ ರಾಯ್ರನ್ನು ಅವರ ಮೂಲಬೆಲೆ 2 ಕೋಟಿ ರೂಗಳಿಗೆ ಒಪ್ಪಂದ ಮಾಡಿಕೊಂಡಿದೆ. 2017ರಲ್ಲಿ ಐಪಿಎಲ್ಗೆ ಪದಾರ್ಪಣೆ ಮಾಡಿದ್ದ ಜೇಸನ್ ರಾಯ್ ಗುಜರಾತ್ ಲಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ಪರ ಒಟ್ಟು 8 ಪಂದ್ಯಗಳನ್ನಾಡಿದ ಒಂದು ಅರ್ಧಶತಕದ ಸಹಿತ 179 ರನ್ಗಳಿಸಿದ್ದಾರೆ.
-
Due to personal reasons, Mitchell Marsh will be opting out of #IPL2021.
— SunRisers Hyderabad (@SunRisers) March 31, 2021 " class="align-text-top noRightClick twitterSection" data="
We would like to welcome @JasonRoy20 to the #SRHFamily! 🧡#OrangeOrNothing #OrangeArmy pic.twitter.com/grTMkVUns4
">Due to personal reasons, Mitchell Marsh will be opting out of #IPL2021.
— SunRisers Hyderabad (@SunRisers) March 31, 2021
We would like to welcome @JasonRoy20 to the #SRHFamily! 🧡#OrangeOrNothing #OrangeArmy pic.twitter.com/grTMkVUns4Due to personal reasons, Mitchell Marsh will be opting out of #IPL2021.
— SunRisers Hyderabad (@SunRisers) March 31, 2021
We would like to welcome @JasonRoy20 to the #SRHFamily! 🧡#OrangeOrNothing #OrangeArmy pic.twitter.com/grTMkVUns4
ಈಗಾಗಲೆ ಇಂಗ್ಲೆಂಡ್ ಓಪನರ್ ಜಾನಿ ಬೈರ್ಸ್ಟೋವ್ ಅವರನ್ನು ಎಸ್ಆರ್ಹೆಚ್ ಹೊಂದಿದೆ. ಆದರೆ ಅವರು ಭಾರತದ ವಿರುದ್ಧದ ಕೊನೆಯ ಏಕದಿನ ಪಂದ್ಯದ ವೇಳೆ ಗಾಯಗೊಂಡಿದ್ದರು. ಹಾಗಾಗಿ ಹೆಚ್ಚುವರಿ ಆರಂಭಿಕನಾಗಿ ಜೇಸನ್ರಾಯ್ರನ್ನು ತಂಡಕ್ಕೆ ಸೇರಿಕೊಂಡಿದೆ. ನಾಯಕ ಡೇವಿಡ್ ವಾರ್ನರ್, ವೃದ್ಧಿಮಾನ್ ಸಹಾ ಕೂಡ ಆರಂಭಿಕ ಸ್ಥಾನದಲ್ಲಿ ಆಡುವ ಆಟಗಾರರಾಗಿದ್ದಾರೆ. ರಾಯ್ 2020ರ ಐಪಿಎಲ್ ಆವೃತ್ತಿಯಲ್ಲಿ ವೈಯಕ್ತಿಕ ಕಾರಣ ನೀಡಿ ಹೊರಬಂದಿದ್ದರು, ಇವರ ಬದಲಿಗೆ ಡೆಲ್ಲಿ ಆಸೀಸ್ ಆಲ್ರೌಂಡರ್ ಡೇನಿಯಲ್ ಸ್ಯಾಮ್ರನ್ನು ತಂಡಕ್ಕೆ ಸೇರಿಸಿಕೊಂಡಿತ್ತು.
ಇದನ್ನೂ ಓದಿ: ಪಾಕಿಸ್ತಾನ ಬಿಟ್ಟು 120 ರಾಷ್ಟ್ರಗಳಲ್ಲಿ ಪ್ರಸಾರವಾಗಲಿದೆ 2021ರ ಐಪಿಎಲ್