ETV Bharat / sports

ಅರ್ಜುನ ಪ್ರಶಸ್ತಿ ಪಡೆದ ಮೇಲೆ ಜವಾಬ್ದಾರಿ ಹೆಚ್ಚಾಗಿದೆ: ದೀಪ್ತಿ ಶರ್ಮಾ

ನಾನು ಆರಂಭದಿಂದಲೇ ಬಹಳ ಶ್ರಮಪಟ್ಟಿದ್ದೇನೆ. ನನಗೆ ನನ್ನ ಕುಟುಂಬವೂ ಸಹ ನನಗೆ ಬೆಂಬಲ ನೀಡಿದೆ. ನಾನು ಈ ದಿನಕ್ಕಾಗಿ ಕಾಯುತ್ತಿದ್ದೆ ಮತ್ತು ಇಂದು ನಾನು ಬಯಸಿದ್ದನ್ನು ಸ್ವೀಕರಿಸಿದ್ದೇನೆ. ಇದು ನನಗೆ ಬಹಳ ಹೆಮ್ಮೆಯ ಕ್ಷಣವಾಗಿದೆ ಎಂದು ಕ್ರಿಕೆಟರ್ ದೀಪ್ತಿ ಶರ್ಮಾ ಭಾನುವಾರ ತಿಳಿಸಿದ್ದಾರೆ.

ಅರ್ಜುನ ಪ್ರಶಸ್ತಿ
ದೀಪ್ತಿ ಶರ್ಮಾ
author img

By

Published : Aug 30, 2020, 6:03 PM IST

ನವದೆಹಲಿ: ಶನಿವಾರ ಅರ್ಜುನ ಪ್ರಶಸ್ತಿ ಪಡೆದ ಭಾರತೀಯ ಮಹಿಳಾ ಕ್ರಿಕೆಟರ್​ ದೀಪ್ತಿ ಶರ್ಮಾ, ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದವರ ಪಟ್ಟಿಯಲ್ಲಿ ತಮ್ಮ ಹೆಸರು ಇರಬೇಕೆಂಬುದು ನನ್ನ ಕನಸಾಗಿತ್ತು ಎಂದು ಹೇಳಿದ್ದಾರೆ. ಇನ್ನು ಪ್ರಶಸ್ತಿ ಸ್ವೀಕರಿಸಿದ ನಂತರ ದೇಶಕ್ಕಾಗಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕೆಂಬ ಜವಾಬ್ದಾರಿ ಕೂಡ ಹೆಚ್ಚಾಗಿದೆ ಎಂದಿದ್ದಾರೆ.

ನಾನು ಆರಂಭದಿಂದಲೇ ಬಹಳ ಶ್ರಮಪಟ್ಟಿದ್ದೇನೆ. ನನಗೆ ನನ್ನ ಕುಟುಂಬವೂ ಸಹ ನನಗೆ ಬೆಂಬಲ ನೀಡಿದೆ. ನಾನು ಈ ದಿನಕ್ಕಾಗಿ ಕಾಯುತ್ತಿದ್ದೆ ಮತ್ತು ಇಂದು ನಾನು ಬಯಸಿದ್ದನ್ನು ಸ್ವೀಕರಿಸಿದ್ದೇನೆ. ಇದು ನನಗೆ ಬಹಳ ಹೆಮ್ಮೆಯ ಕ್ಷಣವಾಗಿದೆ ಎಂದು ಅವರು ತಿಳಿಸಿದ್ದಾರೆ.

ದೀಪ್ತಿ ಶರ್ಮಾ
ದೀಪ್ತಿ ಶರ್ಮಾ

ನನ್ನ ಹೆಸರು ಈ ಪ್ರಶಸ್ತಿ ಪಡೆದವರ ಪಟ್ಟಿಯಲ್ಲಿರಬೇಕೆಂಬುದು ನನ್ನ ಕನಸಾಗಿತ್ತು. ಇದೀಗ ಪ್ರಶಸ್ತಿ ಸ್ವೀಕರಿಸಿದ್ದೇನೆ. ಇದರಿಂದ ದೇಶಕ್ಕೆ ಇನ್ನೂ ಉತ್ತಮ ಸಾಧನೆ ಮಾಡಲು ಎಲ್ಲಾ ಆಟಗಾರರಿಗೂ ಜವಾಬ್ದಾರಿ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.

ದೀಪ್ತಿ ಶರ್ಮಾ 54 ಏಕದಿನ, 48 ಟಿ20 ಪಂದ್ಯಗಳನ್ನಾಡಿದ್ದಾರೆ. ಅವರು ODI ನಲ್ಲಿ 64 ವಿಕೆಟ್​ ಹಾಗೂ 1417 ರನ್​, ಟಿ20ಯಲ್ಲಿ 423 ರನ್​ ಹಾಗೂ 53 ವಿಕೆಟ್​ ಪಡೆದಿದ್ದಾರೆ.

ಕೊರೊನಾ ವೈರಸ್​ ಸಾಂಕ್ರಾಮಿಕ ರೋಗವಿರುವುದರಿಂದ ಪ್ರಸ್ತುತ ಎಲ್ಲಾ 74 ಕ್ರೀಡಾಪಟುಗಳಿಗೂ ವರ್ಚುವಲ್​ ಆಗಿ ರಾಷ್ಟ್ರೀಯ ಕ್ರೀಡಾ ದಿನದಂದು ಪ್ರಶಸ್ತಿ ಪ್ರಮಾಣ ಪತ್ರವನ್ನು ನೀಡಲಾಗಿದೆ. ಇನ್ನು ಪಾರಿತೋಷಕವನ್ನು ಪರಿಸ್ಥಿತಿ ಸರಿಯಾದ ಮೇಲೆ ಮತ್ತೊಂದು ಕಾರ್ಯಕ್ರಮದಲ್ಲೇ ಸ್ವತಃ ರಾಷ್ಟ್ರಪತಿಗಳೇ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.