ETV Bharat / sports

ಡೇರ್‌ ಡೆವಿಲ್‌ ಕಪಿಲ್‌ ದೇವ್​ರ ಈ ದಾಖಲೆ ಪುಡಿಗಟ್ಟಿದ ಇಶಾಂತ್ ಶರ್ಮಾ..

ಇಲ್ಲಿನ ಸಬಿನ ಪಾರ್ಕ್​ ಮೈದಾನದಲ್ಲಿ ನಡೆಯುತ್ತಿರು ಟೆಸ್ಟ್​ ಪಂದ್ಯದಲ್ಲಿ ಇಶಾಂತ್ ಶರ್ಮಾ ಅವರು ಉಪಖಂಡದ ಹೊರಗೆ 156ನೇ ವಿಕೆಟ್​ ಪಡೆದಿದ್ದಾರೆ. ಈ ಹಿಂದೆ ಭಾರತಕ್ಕೆ ಮೊದಲ ವಿಶ್ವಕಪ್​ ಗೆದ್ದುಕೊಟ್ಟ ಮಾಜಿ ನಾಯಕ ಕಪಿಲ್‌ ದೇವ್ ಅವರು 155 ವಿಕೆಟ್​ ಪಡೆದಿದ್ದರು. ಶಿಮ್ರಾನ್ ಹಿಟ್ಮಿಯರ್ ಅವರ ಕ್ಲೀನ್​ ಬೋಲ್ಡ್​ ಮಾಡುವ ಮೂಲಕ ವಿದೇಶಿ ಪಿಚ್​ಗಳಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ಭಾರತೀಯ ಆಟಗಾರ ಎಂಬ ಕಪಿಲ್​ ದೇವ್​ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ತಮ್ಮ ಹೆಸರಿಗೆ ಬದಲಾಯಿಸಿಕೊಂಡರು.

ಸಾಂದರ್ಭಿಕ ಚಿತ್ರ
author img

By

Published : Sep 1, 2019, 11:47 PM IST

ಕಿಂಗ್​ಸ್ಟನ್​: ಭಾರತ ಮತ್ತು ವೆಸ್ಟ್​ ಇಂಡೀಸ್​ ಮಧ್ಯೆ ನಡೆಯುತ್ತಿರುವ 2ನೇ ಟೆಸ್ಟ್​ನ 3ನೇ ದಿನದ ಪಂದ್ಯದಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.

ಇಲ್ಲಿನ ಸಬಿನ ಪಾರ್ಕ್​ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್​ ಪಂದ್ಯದಲ್ಲಿ ಇಶಾಂತ್ ಅವರು ಉಪಖಂಡ ಹೊರಗೆ 156ನೇ ವಿಕೆಟ್​ ಪಡೆದಿದ್ದಾರೆ. ಈ ಹಿಂದೆ ಭಾರತಕ್ಕೆ ಮೊದಲ ವಿಶ್ವಕಪ್​ ಗೆದ್ದುಕೊಟ್ಟ ಮಾಜಿ ನಾಯಕ ಕಪಿಲ್‌ ದೇವ್ ಅವರು 155 ವಿಕೆಟ್​ ಪಡೆದಿದ್ದರು. ಶಿಮ್ರಾನ್ ಹಿಟ್ಮಿಯರ್ ಅವರ ಕ್ಲೀನ್​ ಬೋಲ್ಡ್​ ಮಾಡುವ ಮೂಲಕ ವಿದೇಶಿ ಪಿಚ್​ಗಳಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ಭಾರತೀಯ ಆಟಗಾರ ಎಂಬ ಕಪಿಲ್​ ಅವರ ಹೆಸರಿಲ್ಲದ್ದ ದಾಖಲೆಯನ್ನು ತಮ್ಮ ಹೆಸರಿಗೆ ಬದಲಾಯಿಸಿಕೊಂಡರು.

ಹೊರ ರಾಷ್ಟ್ರಗಳ ಮೈದಾನದಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ಭಾರತೀಯ ಬಾಲರ್ ಎಂಬ ಹೆಗ್ಗಳಿಕೆ ಜಂಬೋ ಖ್ಯಾತಿಯ ಭಾರತದ ಸರ್ವಶ್ರೇಷ್ಠ ಮಾಜಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಹೆಸರಿನಲ್ಲಿದೆ. ವಿದೇಶಿ ನೆಲದಲ್ಲಿ ಕುಂಬ್ಳೆ 200 ವಿಕೆಟ್​ಗಳನ್ನು ಪಡೆದಿದ್ದಾರೆ. ಭಾರತ ಕ್ರಿಕೆಟ್ ತಂಡದ ಬಲಗೈ ವೇಗಿ ಇಶಾಂತ್ ಶರ್ಮಾ ಬೌಲಿಂಗ್‌ಗೂ ಸೈ ಎನಿಸಿಕೊಂಡು ನಿನ್ನೆ ತಮ್ಮ 92ನೇ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕ ಸಾಧನೆ ಮಾಡಿದ ಹಿರಿಮೆಗೆ ಪಾತ್ರವಾಗಿದ್ದರು. ಇಂದು ಮತ್ತೊಂದು ದಾಖಲೆ ಬರೆದಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.