ನವದೆಹಲಿ: ಅಮೆರಿಕದಲ್ಲಿ ಕರಿಯ ಜನಾಂಗದ ವ್ಯಕ್ತಿಯೊಬ್ಬ ಪೊಲೀಸರಿಂದ ಹತ್ಯೆಯಾದ ನಂತರ ವರ್ಣಭೇದದ ವಿರುದ್ಧ ಧನಿ ಎತ್ತಿದ್ದ ಕ್ರಿಕೆಟಿಗ ಡರೇನ್ ಸಾಮಿ ಐಪಿಎಲ್ನಲ್ಲಿ ನನ್ನನ್ನು ಕಲು(ಕರಿಯ) ಎಂದು ಕರೆಯಲಾಗುತ್ತಿತ್ತು ಎಂದು ಆರೋಪಿಸಿ ಕ್ಷಮೆ ಕೇಳುವಂತೆ ಆಗ್ರಹಿಸಿದ್ದರು.
ಇದಾದ ಬಳಿಕ ಇಶಾಂತ್ ಸಾಮಿ ಸೇರಿದಂತೆ ಇತರ ಆಟಗಾರರಿರುವ ಒಂದು ಪೋಸ್ಟ್ ವೈರಲ್ ಆಗಿತ್ತು ಅದರಲ್ಲಿ ಸಾಮಿಯನ್ನು ಇಸಾಂತ್ ಕಲು ಎಂದು ಕರೆದಿದ್ದದ್ದು ಸ್ಪಷ್ಟವಾಗಿತ್ತು. ಇದೀಗ ಇಶಾಂತ್ ಶರ್ಮಾ ಡರೇನ್ ಸಾಮಿಗೆ ಕರೆಮಾಡಿ ಕ್ಷಮೆ ಕೋರಿದ್ದಾರೆ ಎಂದು ತಿಳಿದುಬಂದಿದೆ.
" ಇಶಾಂತ್ ನನಗೆ ಕರೆಮಾಡಿ ಕಲು(ಕರಿಯ) ಎಂದಿದ್ದಕ್ಕೆ ಕ್ಷಮೆ ಕೋರಿದ್ದಾರೆ. ಅವರು ಹಾಗೆ ಕರೆಯುವುದರ ಹಿಂದೆ ದುರದ್ದೇಶವಿರಲಿಲ್ಲ ಎಂದೆನಿಸುತ್ತಿದೆ. ಕಪ್ಪು ವರ್ಣಿಯರನ್ನು ಗೌರವಿಸುವ ಹಾಗೂ ಸಮಾನತೆಯಿಂದ ಕಾಣುವ ಅವಶ್ಯಕತೆ ಇಂದಿನ ಸಮಾಜದಲ್ಲಿದೆ. ಅದೇ ನನ್ನ ಆರೋಪದ ಉದ್ದೇಶವಾಗಿತ್ತು. ಇಲ್ಲಿಗೆ ಈ ವಿಚಾರವನ್ನು ಬಿಡುತ್ತಿದ್ದೇನೆ" ಎಂದು ಸಾಮಿ ತಿಳಿಸಿದ್ದಾರೆ.
ಇಶಾಂತ್ ಮೇಲೆ ನನಗೆ ಯಾವುದೇ ಕೋಪವಿಲ್ಲ. ಅವರನ್ನು ಭೇಟಿ ಮಾಡಿದ ವೇಳೆ ಅಪ್ಪಿಕೊಳ್ಳುವುದಾಗಿ, ಹಾಗೂ ಆತ ನನ್ನ ಸಹೋದರನಿದ್ದಂತೆ ಎಂದು ಹೇಳಿದ್ದಾರೆ.
ಇನ್ನು ಆಟಗಾರ , ಕೋಚ್, ಮೆಂಟರ್ ಅಥವಾ ಯಾವುದಾದರೂ ಪಾತ್ರದಲ್ಲಿ ಭಾರತಕ್ಕೆ ಬರುವ ಹಂಬಲವನ್ನು ಸಾಮಿ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಹಲವಾರು ಮಧುರ ನೆನಪುಗಳಿವೆ. ಇಶಾಂತ್ ಮನೆಯಲ್ಲಿ ನಾವೆಲ್ಲರೂ ಇರುವ ಒಂದು ಫೋಟೋವಿದೆ. ಅದರಲ್ಲಿ ನಾವೆಲ್ಲರೂ ಸಹೋದರರು ಎಂದು ಬರೆದಿದೆ. ಅದಕ್ಕೆ ನಾನು ಸಹಿ ಮಾಡಿದ್ದೇನೆ. ಈ ವಿಚಾರವನ್ನು ಮುಂದಕ್ಕೆ ಎಳೆದೊಯ್ಯಲು ನಾನು ಬಯಸುವುದಿಲ್ಲ ಎಂದು ಸಾಮಿ ಐಪಿಎಲ್ನ ವರ್ಣಭೇದ ವಿವಾದವನ್ನು ನಿಲ್ಲಿಸುವುದಾಗಿ ಹೇಳಿಕೊಂಡಿದ್ದಾರೆ.