ಮುಂಬೈ: ಭಾರತ ತಂಡ ಐಸಿಸಿ ಇವೆಂಟ್ಗಳಲ್ಲಿ ಪಾಲ್ಗೊಳ್ಳುವ ಮುನ್ನ ಉತ್ತಮ ಯೋಜನೆಗಳನ್ನು ರೂಪಿಸಿಕೊಳ್ಳುವ ಅಗತ್ಯವಿದೆ ಎಂದು ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಅಭಿಪ್ರಾಯ ಪಟ್ಟಿದ್ದಾರೆ. ನೀವು 2019 ವಿಶ್ವಕಪ್ ಗಮನಿಸಿ, ಅದು ತಂಡದ ಕೆಟ್ಟ ಯೋಜನೆಯಾಗಿತ್ತು. ನನ್ನ ಪ್ರಕಾರ್ ಉತ್ತಮ ಯೋಜನೆ ಮಾಡಿಕೊಳ್ಳಬಹುದಿತ್ತು ಎಂದು ಇರ್ಪಾನ್ ಪಠಾಣ್ ಭಾವಿಸಿದ್ದಾರೆ.
ಭಾರತ ತಂಡ 2013ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಐಸಿಸಿ ಚಾಂಪಿಯನ್ ಟ್ರೋಫಿ ಗೆದ್ದಿತ್ತು. ನಂತರ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. 2015 ಹಾಗೂ 2019ರ ಏಕದಿನ ವಿಶ್ವಕಪ್ನಲ್ಲಿ ಸೆಮಿಫೈನಲ್ ಹಾಗೂ 2016ರ ಟಿ-20 ವಿಶ್ವಕಪ್ನಲ್ಲಿ ಸೆಮಿಫೈನಲ್ನಲ್ಲಿ ಸೋಲು ಕಂಡರೆ, 2017ರ ಚಾಂಪಿಯನ್ ಟ್ರೋಫಿ ಫೈನಲ್ನಲ್ಲಿ ಪಾಕ್ ವಿರುದ್ಧ ಸೋಲು ಕಂಡಿತ್ತು.
ನೋಡಿ, ನೀವು ವಿಶ್ವಚಾಂಪಿಯನ್ ಆಗಲು ಸಂಪನ್ಮೂಲಗಳಿವೆ. ನಮ್ಮಲ್ಲಿ ಆಟಗಾರರಿದ್ದಾರೆ. ನಮಗೆ ಫಿಟ್ನೆಸ್ ಇದೆ, ನಮಗೆ ವಿಶ್ವ ಚಾಂಪಿಯನ್ ಆಗಲು ನಮಗೆ ಎಲ್ಲವೂ ಇದೆ. ಕೊರತೆ ಇದ್ದರೆ ವಿಶ್ವಕಪ್ಗೆ ಮುನ್ನ ನಮ್ಮ ನಾಲ್ಕನೇ ಕ್ರಮಾಂಕ ಬ್ಯಾಟ್ಸ್ಮನ್ ಇರಲಿಲ್ಲ. ನಾವು ಸರಿಯಾದ ಹನ್ನೊಂದರ ಬಳಗವನ್ನು ಹೊಂದಲು ಹೆಣಗಾಡುತ್ದಿದ್ದೇವೆ ಎಂದು ಪಠಾಣ್ ತಿಳಿಸಿದ್ದಾರೆ.
ವಿಶ್ವಕಪ್ನಂತಹ ಐಸಿಸಿ ಟೂರ್ನಿಗಳಿಗೆ ಹೋಗುವ ಮುನ್ನ ನಾವು ಉತ್ತಮ ಯೋಜನೆಯನ್ನು ರೂಪಿಸಿಕೊಂಡಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಭಾವಿಸುತ್ತೇನೆ. ನಮ್ಮಲ್ಲಿ ಉತ್ತಮ ಯೋಜನೆ ಇದ್ದರೆ ಚಾಂಪಿಯನ್ ಆಗಲು ನಮಗೆ ಎಲ್ಲ ಸಂಪನ್ಮೂಲಗಳಿವೆ ಎಂದು ಭಾರತ ತಂಡಕ್ಕೆ 120 ಏಕದಿನ ಮತ್ತು 29 ಟೆಸ್ಟ್ ಪಂದ್ಯಗಳನ್ನಾಡಿರುವ 35 ವರ್ಷ ವಯಸ್ಸಿನ ಆಟಗಾರ ಅಭಿಪ್ರಾಯಪಟ್ಟಿದ್ದಾರೆ.