ನವದೆಹಲಿ: ಕೊರೊನಾ ವೈರಸ್ ಸೋಂಕಿನಿಂದಾಗಿ ಮುಂದಿನ ದಿನಗಳಲ್ಲಿ ನಡೆಯಲಿರುವ ಯಾವುದೇ ಕ್ರೀಡೆಗಳು ಅಭಿಮಾನಿಗಳಿಲ್ಲದೆ ನಡೆಸಬೇಕಾಗುತ್ತದೆ ಎಂದು ಸರ್ಕಾರಿ ಅಧಿಕಾರಿಗಳು ಬಿಸಿಸಿಐಗೆ ತಿಳಿಸಿದ್ದಾರೆ.
![closed-door league,ಅಭಿಮಾನಿಗಳಿಲ್ಲದೇ ಐಪಿಎಲ್ ನಡೆಸಲು ಓಕೆ ಎಂದ ತಂಡಗಳು](https://etvbharatimages.akamaized.net/etvbharat/prod-images/dmipl11809_1203newsroom_1584011171_62.jpg)
2020ರ ಐಪಿಎಲ್ ಟೂರ್ನಿಯನ್ನು ಅಭಿಮಾನಿಗಳಿಲ್ಲದೆ ನಡೆಸಲು ಎಲ್ಲಾ ತಂಡಗಳು ಒಪ್ಪಿಗೆ ನೀಡಿವೆ. ಆದರೆ ಟೂರ್ನಿಯ ಆರಂಭದಲ್ಲೇ ವಿದೇಶಿ ಆಟಗಾರರು ಆಡಲು ಅವಕಾಶ ನೀಡಬೇಕು ಎಂಬುದು ತಂಡಗಳ ಒತ್ತಾಯವಾಗಿದೆ.
![closed-door league,ಅಭಿಮಾನಿಗಳಿಲ್ಲದೇ ಐಪಿಎಲ್ ನಡೆಸಲು ಓಕೆ ಎಂದ ತಂಡಗಳು](https://etvbharatimages.akamaized.net/etvbharat/prod-images/l174_21671580367593_1203newsroom_1584011171_490.webp)
ಮಾಧ್ಯಮಗಳೊಂದಿಗೆ ಮಾತನಾಡಿದ ಫ್ರಾಂಚೈಸಿಗಳ ಅಧಿಕಾರಿಯೊಬ್ಬರು, ಸರ್ಕಾರವು ತನ್ನ ನಿಲುವನ್ನು ಸ್ಪಷ್ಟಪಡಿಸುತ್ತಿರುವುದರಿಂದ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ವೈರಸ್ ಅನ್ನು ಸಾಂಕ್ರಾಮಿಕ (ಮಾರಕ) ಎಂದು ಘೋಷಿಸಿದೆ. ಹೀಗಾಗಿ ಅಭಿಮಾನಿಗಳಿಲ್ಲದೆ ಪಂದ್ಯವನ್ನು ಆಡುವುದನ್ನು ಬಿಟ್ಟು ಬೇರೆ ಆಯ್ಕೆಗಳಿಲ್ಲ ಎಂದಿದ್ದಾರೆ.
![closed-door league,ಅಭಿಮಾನಿಗಳಿಲ್ಲದೇ ಐಪಿಎಲ್ ನಡೆಸಲು ಓಕೆ ಎಂದ ತಂಡಗಳು](https://etvbharatimages.akamaized.net/etvbharat/prod-images/whatsapp-image-2020-03-12-at-34436-pm_1203newsroom_1584011171_2.jpeg)
ಈ ವರ್ಷ ಐಪಿಎಲ್ ನಡೆಯಬೇಕಾದರೆ ಅಭಿಮಾನಿಗಳಿಲ್ಲದೆ ಟೂರ್ನಿಯನ್ನು ನಡೆಸುವುದು ಬಿಟ್ಟು ಬೇರೆ ಆಯ್ಕೆಗಳಿಲ್ಲ. ಕ್ರಿಕೆಟ್ ಪ್ರಿಯರು ಮನೆಯಲ್ಲೇ ಕುಳಿತು ಪಂದ್ಯ ವೀಕ್ಷಿಸಬಹುದು. ಆದರೆ, ಐಪಿಎಲ್ ಕಳೆಗುಂದಬಾರದು ಎಂಬ ಕಾರಣಕ್ಕೆ ವಿದೇಶಿ ಆಟಗಾರರಿಗೆ ಆಡಲು ಅನುಮತಿ ನೀಡಬೇಕು. ಈ ಬಗ್ಗೆ ಬಿಸಿಸಿಐ, ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡಸಿ ಏಪ್ರಿಲ್ 15ರ ಒಳಗೆ, ಅಂದರೆ ಟೂರ್ನಿ ಆರಂಭದಲ್ಲೇ ವಿದೇಶಿ ಆಟಗಾರ ಆಗಮನಕ್ಕೆ ಅನುಮತಿ ಪಡೆಯಬೇಕು ಎಂದಿದ್ದಾರೆ.
ಈಗಾಗಲೇ ಕೇಂದ್ರ ಸರ್ಕಾರ ವಿದೇಶಿಗರ ವೀಸಾ ಮೇಲೆ ಏಪ್ರಿಲ್ 15ರವರೆಗೆ ನಿರ್ಬಂಧ ಹೇರಿರುವ ಕಾರಣ ಟೂರ್ನಿ ಆರಂಭದ ಪಂದ್ಯಗಳಲ್ಲಿ ವಿದೇಶಿ ಆಟಗಾರರ ಆಗಮನಕ್ಕೆ ತೊಂದರೆ ಉಂಟಾಗಿದೆ.