ETV Bharat / sports

ಆಸೀಸ್​ ಕ್ರಿಕೆಟಿಗರಿಗೆ ಕೊಹ್ಲಿ ಹಾಗೂ ಟೀಮ್ ಇಂಡಿಯಾ ಆಟಗಾರರನ್ನು ಕಂಡರೆ ಭಯ: ಕಾರಣ ಬಿಚ್ಚಿಟ್ಟ ಕ್ಲಾರ್ಕ್​

author img

By

Published : Apr 8, 2020, 8:49 AM IST

ವಿರಾಟ್​ ಕೊಹ್ಲಿ ಅಥವಾ ಭಾರತೀಯರನ್ನು ಕೆಣಕಿದರೆ ಎಲ್ಲಿ ತಮ್ಮ ಐಪಿಎಲ್​ ಭವಿಷ್ಯ ಕಮರುವುದೋ ಎಂಬ ಆತಂಕದಲ್ಲಿ ಆಸೀಸ್​ ಆಟಗಾರರು ಚಿಂತೆ ಮಾಡುತ್ತಿದ್ದಾರೆ ಎಂದು ಕ್ಲಾರ್ಕ್​ ಸ್ಪಷ್ಟನೇ ನೀಡಿದ್ದಾರೆ.

ಮೈಕಲ್​ ಕ್ಲಾರ್ಕ್​
ಮೈಕಲ್​ ಕ್ಲಾರ್ಕ್​

ಮೆಲ್ಬೋರ್ನ್​: ಇಡೀ ವಿಶ್ವವನ್ನೇ ಒಂದು ಕಾಲದಲ್ಲಿ ಆಳುತ್ತಿದ್ದ ಆಸ್ಟ್ರೇಲಿಯಾ ತಂಡದ ಆಟಗಾರರು ಪ್ರಸ್ತುತ ಮಂಕಾಗಿದ್ದು ಸ್ಲೆಡ್ಜಿಂಗ್​ ಮಾಡುವುದನ್ನೇ ಬಿಟ್ಟಿದ್ದಾರೆ.

ಒಂದು ಕಾಲದಲ್ಲಿ ಸ್ಲೆಡ್ಜಿಂಗ್​ ಅನ್ನು ತಂಡದ ಭಾಗವನ್ನಾಗಿ ಮಾಡಿಕೊಂಡಿದ್ದ ಆಸ್ಟ್ರೇಲಿಯಾ ತಂಡದ ಆಟಗಾರರು ಭಾರತ ತಂಡದ ಆಟಗಾರರು ಹಾಗೂ ನಾಯಕ ವಿರಾಟ್​ ಕೊಹ್ಲಿ ಎಂದರೆ ಭಯ ಪಡುತ್ತಿರಿದ್ದಾರೆ. ಇದಕ್ಕೆಲ್ಲಾ ಕಾರಣ ಐಪಿಎಲ್​ ಹಾಗೂ ಐಪಿಎಲ್​ನಿಂದ ಬರುತ್ತಿರುವ ಕೋಟ್ಯಾಂತರ ರೂಪಾಯಿ ಹಣ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕಲ್​ ಕ್ಲಾರ್ಕ್​ ಅಭಿಪ್ರಾಯಪಟ್ಟಿದ್ದಾರೆ.

ಆಸ್ಟ್ರೇಲಿಯಾ- ಭಾರತೀಯ ಕ್ರಿಕೆಟಿಗರು
ಆಸ್ಟ್ರೇಲಿಯಾ- ಭಾರತೀಯ ಕ್ರಿಕೆಟಿಗರು

ಕೆಲವು ವರ್ಷಗಳ ಹಿಂದೆ ಎರುಡು ರಾಷ್ಟ್ರಗಳು ಎದುರುಬದುರಾದಾಗ ಪಂದ್ಯಗಳು ರೋಚಕವಾಗಿರುತ್ತಿದ್ದವು. ಅಲ್ಲದೆ ಆಸೀಸ್​ ಆಟಗಾರರು ಸ್ಲೆಡ್ಜಿಂಗ್​ ಮಾಡಿ ಭಾರತೀಯರನ್ನು ಕೆಣಕುತ್ತಿದ್ದರು. ಆದರೆ ಐಪಿಎಲ್​ ಮಿಲಿಯನ್​ ಡಾಲರ್​ ಒಪ್ಪಂದ ಮಾಡಿಕೊಂಡ ಮೇಲೆ ಆಸೀಸ್​ ಆಟಗಾರರು ಮೃದುಭಾವನೆ ತಳೆದಿದ್ದಾರೆ. ವಿರಾಟ್​ ಕೊಹ್ಲಿ ಅಥವಾ ಭಾರತೀಯರನ್ನು ಕೆಣಕಿದರೆ ಎಲ್ಲಿ ತಮ್ಮ ಐಪಿಎಲ್​ ಭವಿಷ್ಯ ಕಮರುವುದೋ ಎಂಬ ಆತಂಕದಲ್ಲಿ ಆಸೀಸ್​ ಆಟಗಾರರು ಚಿಂತನೆ ಮಾಡುತ್ತಿದ್ದಾರೆ ಎಂದು ಕ್ಲಾರ್ಕ್​ ಸ್ಪಷ್ಟನೇ ನೀಡಿದ್ದಾರೆ.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ

ಮೈದಾನದಲ್ಲಿ ಆಕ್ರಮಣಕಾರಿಯಾಗಿ ವರ್ತಿಸುವ ಆಸ್ಟ್ರೇಲಿಯಾದ ಕೆಲವು ಆಟಗಾರರು ಐಪಿಎಲ್​ನಲ್ಲಿ ಅತಿ ಹೆಚ್ಚು ಹಣ ಪಡೆದಿರುವ ಟಾಪ್​ 10 ಲಿಸ್ಟ್​ನಲ್ಲಿದ್ದಾರೆ. ಇದೇ ಕಾರಣದಿಂದ ಆಸೀಸ್​ ಆಟಗಾರರು ಕೊಹ್ಲಿಯನ್ನು ಎಂದಿಗೂ ಸ್ಲೆಡ್ಜಿಂಗ್​ ಮಾಡುವುದಿಲ್ಲ ಎಂದಿದ್ದಾರೆ.

2019 ಡಿಸೆಂಬರ್​ನಲ್ಲಿ ನಡೆದ ಹರಾಜಿನಲ್ಲಿ ವೇಗಿ ಪ್ಯಾಟ್​ ಕಮ್ಮಿನ್ಸ್​ 15.5 ಕೋಟಿ, ಗ್ಲೆನ್​ ಮ್ಯಾಕ್ಸ್​ವೆಲ್​ 10.75 ಕೋಟಿ, ನಾಥನ್​ ಕೌಲ್ಟರ್​ಲೈನ್​ 8 ಕೋಟಿ, ನಾಯಕ ಆ್ಯರೋನ್​ ಫಿಂಚ್​ 4.4 ಕೋಟಿ ಮೊತ್ತಕ್ಕೆ ಹರಾಜಾಗಿದ್ದಾರೆ. ಕೇವಲ ನಾಲ್ಕುವಾರ ನಡೆಯುವ ಈ ಟೂರ್ನಿಯಲ್ಲಿ ಹಣ ಪಡೆಯುವ ಉದ್ದೇಶದಿಂದ ಆಸ್ಟ್ರೇಲಿಯಾ ಆಟಗಾರರು ಕೊಹ್ಲಿ ಹಾಗೂ ಭಾರತೀಯರನ್ನು ಕೆಣಕುವ ಗೋಜಿಗೆ ಹೋಗುತ್ತಿಲ್ಲ ಎಂಬುದು ಕ್ಲಾರ್ಕ್​ ಅಭಿಪ್ರಾಯವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.