ಕೋಲ್ಕತ್ತಾ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬಿಗ್ ಹಿಟ್ಟರ್ಗೆ ಮಣೆ ಹಾಕಿದ್ದು, ವೆಸ್ಟ್ ಇಂಡೀಸ್ನ ಸ್ಪೋಟಕ ಬ್ಯಾಟ್ಸ್ಮನ್ ಶಿಮ್ರಾನ್ ಹೆಟ್ಮಾಯರ್ಗೆ ಬರೋಬ್ಬರಿ 7.75 ಕೋಟಿ ರೂ ನೀಡಿ ಖರೀದಿಸಿದೆ.
ವಿಂಡೀಸ್ ಎಡಗೈ ಬ್ಯಾಟ್ಸ್ಮನ್ ಶಿಮ್ರಾನ್ ಹೆಟ್ಮಾಯರ್ಗೆ ಕಳೆದ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 4 ಕೋಟಿ ರೂ ನೀಡಿ ಖರೀದಿ ಮಾಡಿತ್ತು. ಆದರೆ ಕಳೆದ ಟೂರ್ನಿಯಲ್ಲಿ ಮಿನಿ ಕ್ರಿಸ್ ಗೇಲ್ ಸಂಪೂರ್ಣವಾಗಿ ವಿಫಲಗೊಂಡಿದ್ದರಿಂದ ತಂಡ ಅವರನ್ನ ಕೈಬಿಟ್ಟಿತ್ತು. ಇದೀಗ ಹರಾಜು ಪ್ರಕ್ರಿಯೆಯಲ್ಲಿ ಅವರನ್ನ ಡೆಲ್ಲಿ ಖರೀದಿ ಮಾಡಿದೆ. ತಾವು ಡೆಲ್ಲಿ ತಂಡಕ್ಕೆ ಹರಾಜುಗೊಳ್ಳುತ್ತಿದ್ದಂತೆ ಹೋಟೆಲ್ನಲ್ಲಿ ಹೆಟ್ಮಾಯರ್ ಕುಣಿದು ಕುಪ್ಪಳಿಸಿದ್ದು, ಡೆಲ್ಲಿ ಪ್ರಾಂಚೈಸಿ ಹಾಡು ಹಾಕಿ ಡ್ಯಾನ್ಸ್ ಮಾಡಿದ್ದಾರೆ. ಇದೇ ವಿಡಿಯೋ ತುಣಕನ್ನ ಡೆಲ್ಲಿ ಪ್ರಾಂಚೈಸಿ ತನ್ನ ಟ್ವೀಟರ್ನಲ್ಲಿ ಶೇರ್ ಮಾಡಿದ್ದಾರೆ.
-
Us: Hi, Mr. Shimron. Welcome to DC! Can you please share a message for our fans?
— Delhi Capitals (@DelhiCapitals) December 19, 2019 " class="align-text-top noRightClick twitterSection" data="
*1 minute later*@SHetmyer:#IPLAuction2020 #IPLAuction #ThisIsNewDelhi #DelhiCapitals pic.twitter.com/NrcjO03sJO
">Us: Hi, Mr. Shimron. Welcome to DC! Can you please share a message for our fans?
— Delhi Capitals (@DelhiCapitals) December 19, 2019
*1 minute later*@SHetmyer:#IPLAuction2020 #IPLAuction #ThisIsNewDelhi #DelhiCapitals pic.twitter.com/NrcjO03sJOUs: Hi, Mr. Shimron. Welcome to DC! Can you please share a message for our fans?
— Delhi Capitals (@DelhiCapitals) December 19, 2019
*1 minute later*@SHetmyer:#IPLAuction2020 #IPLAuction #ThisIsNewDelhi #DelhiCapitals pic.twitter.com/NrcjO03sJO
ಮೂಲ ಬೆಲೆ ಕೇವಲ 50 ಲಕ್ಷ ರೂ ಹೊಂದಿದ್ದ ವೆಸ್ಟ್ ಇಂಡೀಸ್ ಪ್ಲೇಯರ್ ಬರೋಬ್ಬರಿ ಇಷ್ಟೊಂದು ಹಣಕ್ಕೆ ಬಿಕರಿಯಾಗಿದ್ದು, ಈ ಸಲದ ಆವೃತ್ತಿಯಲ್ಲಿ ಅಬ್ಬರಿಸಲು ಸಜ್ಜುಗೊಳ್ಳಲಿದ್ದಾರೆ. ಇನ್ನು ಸದ್ಯ ಟೀಂ ಇಂಡಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಶಿಮ್ರಾನ್ ಸ್ಪೋಟಕ ಶತಕ ಸಿಡಿಸಿ ಮಿಂಚಿದ್ದರು.