ನವದೆಹಲಿ: ಜೋಶ್ ಹೆಜಲ್ವುಡ್ ಐಪಿಎಲ್ನಿಂದ ಹೊರಗುಳಿದಿದ್ದು, ಸಿಎಸ್ಕೆ ಚಿಂತೆ ಮಾಡುವ ಅಗತ್ಯವಿಲ್ಲ. ಏಕೆಂದರೆ ಅವರ ಸ್ಥಾನ ತುಂಬಬಲ್ಲ ಲುಂಗಿ ಎಂಗಿಡಿ ಇದ್ದಾರೆ ಎಂದು ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಹೇಳಿದ್ದಾರೆ.
"ಹೆಜಲ್ವುಡ್ ಇದ್ದಿದ್ದರೆ ಸಿಎಸ್ಕೆ ಬೌಲಿಂಗ್ ಯೂನಿಟ್ ಅದ್ಭುತವಾಗಿರುತ್ತಿತ್ತು. ಆದರೆ ಒಬ್ಬ ವ್ಯಕ್ತಿ ತಂಡವನ್ನು ಮಾಡುವುದಿಲ್ಲ. ಲುಂಗಿ ಎಂಗಿಡಿ ಹೊರ ಹೋಗಿರುವ ಆಸ್ಟ್ರೇಲಿಯನ್ ಜಾಗವನ್ನು ತುಂಬಬಲ್ಲರು. ಸಿಎಸ್ಕೆ ಈವರ್ಷ ಬಲಿಷ್ಠವಾಗಿ ಕಾಣುತ್ತಿದೆ " ಎಂದು ಹಾಗ್ ಟ್ವೀಟ್ ಮಾಡಿದ್ದಾರೆ.
-
CSK had a brilliant bowling line up with Hazlewood in it, but one man doesn't make a team, Ngidi will fill that void with the Australian pulling out. #CSK looking fairly strong this year. #IPL2021
— Brad Hogg (@Brad_Hogg) April 1, 2021 " class="align-text-top noRightClick twitterSection" data="
">CSK had a brilliant bowling line up with Hazlewood in it, but one man doesn't make a team, Ngidi will fill that void with the Australian pulling out. #CSK looking fairly strong this year. #IPL2021
— Brad Hogg (@Brad_Hogg) April 1, 2021CSK had a brilliant bowling line up with Hazlewood in it, but one man doesn't make a team, Ngidi will fill that void with the Australian pulling out. #CSK looking fairly strong this year. #IPL2021
— Brad Hogg (@Brad_Hogg) April 1, 2021
ಇಂದು ಐಪಿಎಲ್ನಲ್ಲಾಡುವ ಆಸ್ಟ್ರೇಲಿಯಾ ಆಟಗಾರರ ಜೊತೆಗೆ ಅವರು ಭಾರತಕ್ಕೆ ಪ್ರಯಾಣಿಸಬೇಕಿತ್ತು. ಆದರೆ ವೇಗದ ಬೌಲರ್ ಈ ವರ್ಷದ ಐಪಿಎಲ್ ಸಮಯವನ್ನು ತಮ್ಮ ಕುಟುಂಬದ ಜೊತೆಗೆ ಕಳೆಯಲು ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಕಳೆದ 10 ತಿಂಗಳಿನಿಂದ ಬಯೋಬಬಲ್ ಮತ್ತು ಕ್ವಾರಂಟೈನ್ನಲ್ಲಿ ಕಳೆದಿದ್ದೇನೆ. ಆದ್ದರಿಂದ ಈ ವರ್ಷದ ಐಪಿಎಲ್ನಿಂದ ಹೊರಗುಳಿಯಲು ನಿರ್ಧರಿಸಿದ್ದೇನೆ. ಮುಂದಿನ 2 ತಿಂಗಳು ಮನೆಯಲ್ಲಿ ಕಳೆಯಲು ಬಯಸುತ್ತೇನೆ. ಮುಂದೆ ವೆಸ್ಟ್ ಇಂಡೀಸ್ ವಿರುದ್ಧ ದೀರ್ಘವಾದ ವಿಂಟರ್ ಟೂರ್, ಬಾಂಗ್ಲಾದೇಶದ ವಿರುದ್ಧ ಟಿ20 ಪ್ರವಾಸವಿದೆ. ಹಾಗಾಗಿ ಈ ಸಮಯವನ್ನು ಮನಸ್ಸನ್ನು ಹಗುರವಾಗಿಟ್ಟಿಕೊಳ್ಳಲು ಬಯಸುತ್ತೇನೆ ಎಂದು ಕಾರಣ ನೀಡಿದ್ದಾರೆ.
2020ರ ಐಪಿಎಲ್ನಲ್ಲಿ ಹೆಜಲ್ವುಡ್ ಕೇವಲ 3 ಪಂದ್ಯಗಳನ್ನಾಡಿದ್ದಾರೆ. ಅಲ್ಲದೆ ಈ ವರ್ಷ ಮೊಯಿನ್ ಅಲಿ, ಬ್ರಾವೋ, ಸ್ಯಾಮ್ ಕರ್ರನ್ ಮತ್ತು ಲುಂಗಿ ಎಂಗಿಡಿ ಬೌಲಿಂಗ್ ವಿಭಾಗದಲ್ಲಿ ಸ್ಪರ್ಧೆಗಿರುವುದರಿಂದ ಹೆಜಲ್ವುಡ್ಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆಯಿತ್ತು.