ಮುಂಬೈ: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಳ್ಳಲು ಕೇವಲ ಮೂರು ದಿನಗಳ ಕಾಲ ಬಾಕಿ ಉಳಿದಿದ್ದು, ಈಗಾಗಲೇ ಎಲ್ಲ ಪ್ರಾಂಚೈಸಿಗಳು ಸಖತ್ ಆಗಿ ತಯಾರಿ ನಡೆಸ್ತಿವೆ. ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಹ ಇದರಿಂದ ಹೊರತಾಗಿಲ್ಲ.
-
Glenn Maxwell’s Day Out @Gmaxi_32 came. Maxwell reverse swept. And Maxwell had fun. Watch The Big Show and Kyle Jamieson at their first practice session for #RCB ahead of #IPL2021.#PlayBold #WeAreChallengers pic.twitter.com/naMXQcAROQ
— Royal Challengers Bangalore (@RCBTweets) April 6, 2021 " class="align-text-top noRightClick twitterSection" data="
">Glenn Maxwell’s Day Out @Gmaxi_32 came. Maxwell reverse swept. And Maxwell had fun. Watch The Big Show and Kyle Jamieson at their first practice session for #RCB ahead of #IPL2021.#PlayBold #WeAreChallengers pic.twitter.com/naMXQcAROQ
— Royal Challengers Bangalore (@RCBTweets) April 6, 2021Glenn Maxwell’s Day Out @Gmaxi_32 came. Maxwell reverse swept. And Maxwell had fun. Watch The Big Show and Kyle Jamieson at their first practice session for #RCB ahead of #IPL2021.#PlayBold #WeAreChallengers pic.twitter.com/naMXQcAROQ
— Royal Challengers Bangalore (@RCBTweets) April 6, 2021
ಕಳೆದ 13 ಆವೃತ್ತಿಗಳಿಂದಲೂ ಪ್ರಶಸ್ತಿ ಗೆಲ್ಲಲ್ಲು ವಿಫಲಗೊಂಡಿರುವ ವಿರಾಟ್ ನೇತೃತ್ವದ ಆರ್ಸಿಬಿ ಈ ಸಲ ಆ ಬರ ತೀರಿಸಿಕೊಳ್ಳುವ ತವಕದಲ್ಲಿದ್ದು, ಅದಕ್ಕೆ ಆಸ್ಟ್ರೇಲಿಯಾದ ಗ್ಲೇನ್ ಮ್ಯಾಕ್ಸ್ವೆಲ್ ಆನೆ ಬಲ ತುಂಬುವ ಸಾಧ್ಯತೆ ಇದೆ. ಬರೋಬ್ಬರಿ 14.25 ಕೋಟಿ ರೂ.ಗೆ ಆರ್ಸಿಬಿ ಬಳಗ ಸೇರಿರುವ ಮ್ಯಾಕ್ಸ್ವೆಲ್ ಈಗಾಗಲೇ ತಯಾರಿ ನಡೆಸ್ತಿದ್ದು, ಆರ್ಸಿಬಿ ಜರ್ಸಿ ಹಾಕಿಕೊಂಡು ಅಭ್ಯಾಸ ಆರಂಭಿಸಿದ್ದಾರೆ. ಇದರ ಫೋಟೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ಶೇರ್ ಮಾಡಿ ಕೊಂಡಿದೆ.
ಇದನ್ನೂ ಓದಿ: ನಾಯಕತ್ವ ಜವಾಬ್ದಾರಿ ಪಂತ್ಗೆ ಚೆನ್ನಾಗಿ ಹೊಂದಿಕೊಳ್ಳಲಿದೆ: ಪಾಂಟಿಂಗ್ ಭರವಸೆ
2014ರಲ್ಲಿ ಪಂಜಾಬ್ ತಂಡ ಸೇರಿದ್ದ ಈ ಪ್ಲೇಯರ್ 16 ಪಂದ್ಯಗಳಿಂದ 552 ರನ್ಗಳಿಕೆ ಮಾಡಿದ್ದರು. ಒಟ್ಟು 82 ಐಪಿಎಲ್ ಪಂದ್ಯಗಳನ್ನಾಡಿರುವ ಮ್ಯಾಕ್ಸ್ವೆಲ್ 1,505 ರನ್ಗಳಿಕೆ ಮಾಡಿದ್ದಾರೆ. ಆದರೆ, ಕಳೆದ ಆವೃತ್ತಿಯಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದ್ದ ಇವರು 13 ಪಂದ್ಯಗಳಿಂದ ಕೇವಲ 108 ರನ್ಗಳಿಸಿದ್ದರು. ಜತೆಗೆ ಒಂದೇ ಒಂದು ಸಿಕ್ಸರ್ ಸಹ ಸಿಡಿಸಿರಲಿಲ್ಲ. ಹೀಗಾಗಿ ಪಂಜಾಬ್ ಕೈಬಿಟ್ಟಿತ್ತು. ಇವರ ಮೇಲೆ ಕಣ್ಣಿಟ್ಟಿದ್ದ ಆರ್ಸಿಬಿ ತಂಡಕ್ಕೆ ಸೇರಿಸಿಕೊಂಡಿದ್ದು, ಇದೀಗ ಮಿಂಚು ಹರಿಸುವ ವಿಶ್ವಾಸದಲ್ಲಿದ್ದಾರೆ.
-
What better way to start a Tuesday than seeing Maxi in RCB colours? 😍#PlayBold #WeAreChallengers #IPL2021 pic.twitter.com/acGavqauD4
— Royal Challengers Bangalore (@RCBTweets) April 6, 2021 " class="align-text-top noRightClick twitterSection" data="
">What better way to start a Tuesday than seeing Maxi in RCB colours? 😍#PlayBold #WeAreChallengers #IPL2021 pic.twitter.com/acGavqauD4
— Royal Challengers Bangalore (@RCBTweets) April 6, 2021What better way to start a Tuesday than seeing Maxi in RCB colours? 😍#PlayBold #WeAreChallengers #IPL2021 pic.twitter.com/acGavqauD4
— Royal Challengers Bangalore (@RCBTweets) April 6, 2021
ಏಪ್ರಿಲ್ 9ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯವನ್ನಾಡುವ ಮೂಲಕ ಅಭಿಯಾನ ಆರಂಭ ಮಾಡಲಿದೆ. ತಂಡದಲ್ಲಿ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ದೇವದತ್ ಪಡಿಕ್ಕಲ್, ನವದೀಪ್ ಸೈನಿ, ಪವನ್ ನೇಗಿ, ವಾಷಿಂಗ್ಟನ್ ಸುಂದರ್, ಚಹಾಲ್, ಮೊಹಮ್ಮದ್ ಸಿರಾಜ್ ಸೇರಿದಂತೆ ಅನೇಕ ಪ್ಲೇಯರ್ಸ್ ಇದ್ದಾರೆ.