ETV Bharat / sports

ಕಿವೀಸ್​ ಆಲ್​ರೌಂಡರ್​ ಜೆಮೀಸನ್​ರನ್ನು ಬರೋಬ್ಬರಿ 15 ಕೋಟಿ ರೂ. ನೀಡಿ ಖರೀದಿಸಿದ ಆರ್​ಸಿಬಿ

author img

By

Published : Feb 18, 2021, 7:13 PM IST

ಕೇವಲ 75 ಲಕ್ಷ ಮೂಲ ಬೆಲೆಯಿದ್ದ ಜೆಮೀಸನ್​ರನ್ನು ಖರೀದಿಸಲು ಡೆಲ್ಲಿ ಕ್ಯಾಪಿಟಲ್ಸ್​, ಪಂಜಾಬ್​ ಕಿಂಗ್ಸ್​, ಬೆಂಗಳೂರು ತಂಡಗಳು ಭಾರಿ ಪೈಪೋಟಿ ನಡೆಸಿದವು. ಆದರೆ ಕೊನೆಯಲ್ಲಿ ಪ್ರಸ್ತುತ ಹರಾಜಿನಲ್ಲಿ 2ನೇ ಗರಿಷ್ಠ ಮೊತ್ತಕ್ಕೆ ಆರ್​ಸಿಬಿ ಪಾಲಾದರು.

ಕೈಲ್ ಜೆಮೀಸನ್
ಕೈಲ್ ಜೆಮೀಸನ್

ಚೆನ್ನೈ: ನ್ಯೂಜಿಲ್ಯಾಂಡ್​ ತಂಡದ ಆಲ್​ರೌಂಡರ್​ ಕೈಲ್ ಜೆಮೀಸನ್​ಗೆ​ ಗುರುವಾರ ನಡೆದ ಮಿನಿ ಹರಾಜಿನಲ್ಲಿ ಬರೋಬ್ಬರಿ 15 ಕೋಟಿ ರೂ. ನೀಡಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಫ್ರಾಂಚೈಸಿ ಖರೀದಿಸಿದೆ.

ಕೇವಲ 75 ಲಕ್ಷ ಮೂಲ ಬೆಲೆಯಿದ್ದ ಜೆಮೀಸನ್​ರನ್ನು ಖರೀದಿಸಲು ಡೆಲ್ಲಿ ಕ್ಯಾಪಿಟಲ್ಸ್​, ಪಂಜಾಬ್​ ಕಿಂಗ್ಸ್​, ಬೆಂಗಳೂರು ತಂಡಗಳು ಭಾರಿ ಪೈಪೋಟಿ ನಡೆಸಿದವು. ಆದರೆ, ಕೊನೆಯಲ್ಲಿ ಪ್ರಸ್ತುತ ಹರಾಜಿನಲ್ಲಿ 2ನೇ ಗರಿಷ್ಠ ಮೊತ್ತಕ್ಕೆ ಆರ್​ಸಿಬಿ ಪಾಲಾದರು.

ಇದಕ್ಕೂ ಮೊದಲು ಅರ್​ಸಿಬಿ, ಗ್ಲೇನ್​ ಮ್ಯಾಕ್ಸ್​ವೆಲ್​ ಅವರನ್ನು 14.25 ಕೋಟಿ ರೂ. ನೀಡಿ ಖರೀದಿಸಿತ್ತು.

ದಕ್ಷಿಣ ಆಫ್ರಿಕಾದ ಆಲ್​ರೌಂಡರ್​ ಕ್ರಿಸ್ ಮೋರಿಸ್​ 16.25 ಕೋಟಿಗೆ ಬಿಕರಿಯಾಗುವ ಮೂಲಕ ಐಪಿಎಲ್ ಇತಿಹಾಸದಲ್ಲಿ ದಾಖಲೆ ಬರೆದರು. ಈ ಹಿಂದೆ ಭಾರತ ತಂಡದ ಆಲ್​ರೌಂಡರ್ ಯುವರಾಜ್ ಸಿಂಗ್​ 16 ಕೋಟಿ ರೂ. ಪಡೆದಿದ್ದು ಗರಿಷ್ಠ ಬೆಲೆಯಾಗಿತ್ತು. ಇವರನ್ನು ಬಿಟ್ಟರೆ ಪಂಜಾಬ್​ ತಂಡ ಆಸೀಸ್ ಯುವ ಬೌಲರ್​ಗಳಾದ​ ಜೇ ರಿಚರ್ಡ್ಸನ್​ ಮತ್ತು ರಿಲೇ ಮೆರಿಡಿತ್​ರನ್ನು ಕ್ರಮವಾಗಿ 14 ಮತ್ತು 8 ಕೋಟಿ ರೂ. ನೀಡಿ ಖರೀದಿಸಿತು.

ಇದನ್ನು ಓದಿ:ಐಪಿಎಲ್​ ಹರಾಜಿನಲ್ಲಿ ವಿದೇಶಿ ಪ್ಲೇಯರ್ಸ್​ಗೆ ಬಂಪರ್​... ಕೋಟಿ ಕೋಟಿ ರೂ.ಗೆ ಬಿಕರಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.