ETV Bharat / sports

ಐಪಿಎಲ್​2020: ಎಂಎಸ್​ ಧೋನಿ ಕಮ್​ಬ್ಯಾಕ್​ಗಾಗಿ ಕ್ರಿಕೆಟ್​ ಜಗತ್ತು ಕಾತರ - ಹೆಲಿಕಾಪ್ಟರ್​ ಶಾಟ್​

ದೀರ್ಘ ಸಮಯದ ಬಳಿಕ ಧೋನಿ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳುತ್ತಿರುವುದರಿಂದ ಇಂದಿನ ಪಂದ್ಯದಲ್ಲಿ ಅವರ ಮೇಲೆ ಎಲ್ಲರ ಕಣ್ಣಿರುತ್ತದೆ. ಸಾವಿರಾರು ಅಭಿಮಾನಿಗಳು ಈಗಾಗಲೆ ಧೋನಿ ಇಂದಿನ ಪಂದ್ಯದಲ್ಲಿ ಆರ್ಭಟಿಸಲಿ ಎಂದು ಆಶಿಸುತ್ತಿದ್ದಾರೆ.

ಎಂಎಸ್​ ಧೋನಿ ಕಮ್​ ಬ್ಯಾಕ್​
ಧೋನಿ ಐಪಿಎಲ್ 2020
author img

By

Published : Sep 19, 2020, 6:20 PM IST

ಅಬುಧಾಬಿ: ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್​ ಬದುಕಿಗೆ ನಿವೃತ್ತಿ ಘೋಷಿಸಿರುವ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ 14 ತಿಂಗಳ ನಂತರ ಚುಟುಕು ಕ್ರಿಕೆಟ್​ಗೆ ಮರಳುತ್ತಿದ್ದು, ಕೂಲ್​ ಕ್ಯಾಪ್ಟನ್​ರನ್ನು ಮೈದಾನದಲ್ಲಿ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಶನಿವಾರ ಧೋನಿ ನೇತೃತ್ವದ ಸಿಎಸ್​ಕೆ, ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ವಿರುದ್ಧ 13ನೇ ಆವೃತ್ತಿಯ ಐಪಿಎಲ್​ನಲ್ಲಿ ಸೆಣಸಾಡುತ್ತಿದೆ. ಕ್ರಿಕೆಟ್​ ಪ್ರಿಯರಿಗೆ ಐಪಿಎಲ್​ ಹಬ್ಬದಂತಿದ್ದರೆ, 2019ರ ವಿಶ್ವಕಪ್​ ನಂತರ ಮೈದಾನದಲ್ಲಿ ಘರ್ಜಿಸಲಿರುವ ಧೋನಿಯನ್ನು ಇಂದು ಸಾವಿರಾರು ಅಭಿಮಾನಿಗಳು ಕಣ್ತುಂಬಿಕೊಳ್ಳಲಿದ್ದಾರೆ.

ಧೋನಿ ಕಮ್​ಬ್ಯಾಕ್​ ಕುರಿತು ಪ್ರತಿಕ್ರಿಯಿಸಿರುವ ಸಿಎಸ್​ಕೆ ಕೋಚ್​ ಸ್ಟೆಪನ್ ಫ್ಲಮಿಂಗ್​, " ಇದರಲ್ಲಿ ಯಾವುದೇ ರೀತಿಯ ವ್ಯತ್ಯಾಸವಿರುವುದಿಲ್ಲ. ಅವರು(ಧೋನಿ) ಫಿಟ್​ ಆಗಿದ್ದು, ಮಾನಸಿಕವಾಗಿ ತುಂಬಾ ಸದೃಢರಾಗಿದ್ದಾರೆ" ಎಂದು ತಿಳಿಸಿದ್ದಾರೆ.

ಎಂಎಸ್ ಧೋನಿಯಂತಹ ಅನುಭವಿ ಮತ್ತು ಒಂದು ಕಾಲಕ್ಕೆ ಸೀಮಿತವಾಗಿರುವ ಕ್ರಿಕೆಟಿಗನಿಗೆ ದೀರ್ಘ ವಿರಾಮ ಸೂಕ್ತವಾಗಬಹುದು ಎಂದು ಫ್ಲೆಮಿಂಗ್ ಅಭಿಪ್ರಾಯಪಟ್ಟಿದ್ದಾರೆ. ತಾವೂ ಐಪಿಎಲ್ 2020ರಲ್ಲಿ​ ಧೋನಿಯ ಆಟವನ್ನು ನೋಡುವ ನಿರೀಕ್ಷೆಯಲ್ಲಿದ್ದೇನೆ ಎಂದು ಹೇಳಿದ್ದಾರೆ.

ಧೋನಿ ಹೊರೆತುಪಡಿಸಿದರೆ ತಂಡದಲ್ಲಿ ಬ್ರಾವೋ, ಆಸೀಸ್​ ಲೆಜೆಂಡ್​ ಶೇನ್ ವಾಟ್ಸನ್​ ಹಾಗೂ ಹರಿಣಗಳ ಮಾಜಿ ಸ್ಪಿನ್ನರ್​ ಇಮ್ರಾನ್​ ತಾಹೀರ್​ ಅಂತಹ ಮ್ಯಾಚ್​ ಟರ್ನರ್​ಗಳು ತಂಡದಲ್ಲಿದ್ದಾರೆ. ಅವರು ಒತ್ತಡವನ್ನು ನಿಭಾಯಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಫ್ಲಮಿಂಗ್​ ಹೇಳಿದ್ದಾರೆ.

ದೀರ್ಘ ಸಮಯದ ಬಳಿಕ ಧೋನಿ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳುತ್ತಿರುವುದರಿಂದ ಇಂದಿನ ಪಂದ್ಯದಲ್ಲಿ ಅವರ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಸಾವಿರಾರು ಅಭಿಮಾನಿಗಳು ಈಗಾಗಲೆ ಧೋನಿ ಇಂದಿನ ಪಂದ್ಯದಲ್ಲಿ ಆರ್ಭಟಿಸಲಿ ಎಂದು ಆಶಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.