ETV Bharat / sports

ಐಪಿಎಲ್ 2020: ರಾಜಸ್ಥಾನ್​ ರಾಯಲ್ಸ್​ ಗೆಲುವಿಗೆ ಬ್ರೇಕ್ ಹಾಕುವುದೇ ಕೆಕೆಆರ್​ - ಕೆಕೆಆರ್​ vs ಆರ್​ಆರ್​ ಪಂದ್ಯದ ಭವಿಷ್ಯ

ಎರಡು ಪಂದ್ಯಗಳಲ್ಲಿ ಸಂಜು ಸಾಮ್ಸನ್​, ಸ್ಟಿವ್​ ಸ್ಮಿತ್ ಅದ್ಭುತ ಪ್ರದರ್ಶನ ತೋರಿದ್ದರು. ಇವರಿಬ್ಬರ ಜೊತೆಗೆ ಕಳೆದ ಪಂದ್ಯದಲ್ಲಿ ತಂಡ ಸೇರಿಕೊಂಡಿರುವ ಜೋಸ್ ಬಟ್ಲರ್​ ಕೂಡ ಸ್ಫೋಟಕ ಬ್ಯಾಟ್ಸ್​ಮನ್​ ಆಗಿದ್ದು, ತಂಡದ ಬ್ಯಾಟಿಂಗ್​ ಲೈನ್​ ಅಪ್​​ ತುಂಬಾ ಸಮತೋಲನದಿಂದ ಕೂಡಿದೆ.

ರಾಜಸ್ಥಾನ್ ರಾಯಲ್ಸ್​ ಹಾಗೂ ಕೋಲ್ಕತ್ತಾ ನೈಟ್​ ರೈಡರ್ಸ್​

author img

By

Published : Sep 30, 2020, 4:13 PM IST

ದುಬೈ: ಟೂರ್ನಿಯಲ್ಲಿ ಸೋಲನ್ನೇ ಕಾಣದೇ ಮುನ್ನುಗ್ಗುತ್ತಿರುವ ರಾಜಸ್ಥಾನ್​ ರಾಯಲ್ಸ್​ ತಂಡ ಇಂದು ಬಲಿಷ್ಠ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ಸವಾಲನ್ನು ಎದುರಿಸುತ್ತಿದೆ.

ಸ್ಟಿವ್​ ಸ್ಮಿತ್ ನೇತೃತ್ವದ ರಾಜಸ್ಥಾನ್ ರಾಯಲ್ಸ್​ ತಂಡ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ಕಾಯ್ದಕೊಳ್ಳುತ್ತಾ ಸಾಗುತ್ತಿದೆ. ಮೊದಲ ಪಂದ್ಯದಲ್ಲಿ 216 ರನ್​ಗಳಿಸಿದ್ದ ಈ ತಂಡ ಎರಡನೇ ಪಂದ್ಯದಲ್ಲಿ ಬರೋಬ್ಬರಿ 224 ರನ್​ಗಳ ದಾಖಲೆಯ ಮೊತ್ತವನ್ನು ಬೆನ್ನತ್ತಿ ಜಯ ಸಾಧಿಸಿದೆ.

ಐಪಿಎಲ್ 2020
ರಾಜಸ್ಥಾನ್ ರಾಯಲ್ಸ್​

ಎರಡು ಪಂದ್ಯಗಳಲ್ಲಿ ಸಂಜು ಸಾಮ್ಸನ್​, ಸ್ಟಿವ್​ ಸ್ಮಿತ್ ಅದ್ಭುತ ಪ್ರದರ್ಶನ ತೋರಿದ್ದರು. ಇವರಿಬ್ಬರ ಜೊತೆಗೆ ಕಳೆದ ಪಂದ್ಯದಲ್ಲಿ ತಂಡ ಸೇರಿಕೊಂಡಿರುವ ಜೋಸ್ ಬಟ್ಲರ್​ ಕೂಡ ಸ್ಫೋಟಕ ಬ್ಯಾಟ್ಸ್​ಮನ್​ ಆಗಿದ್ದು, ತಂಡದ ಬ್ಯಾಟಿಂಗ್​ ಲೈನ್​ ಅಪ್​​ ತುಂಬಾ ಸಮತೋಲನದಿಂದ ಕೂಡಿದೆ.

ಆಲ್​ರೌಂಡರ್​ಗಳ ವಿಭಾಗದಲ್ಲಿ ರಾಹುಲ್ ತೆವಾಟಿಯಾ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಇವರ ಜೊತೆಗೆ ಜೋಫ್ರಾ ಆರ್ಚರ್​ ಬೌಲಿಂಗ್ ಜೊತೆಗೆ ಬ್ಯಾಟಿಂಗ್​ನಲ್ಲೂ ಯಾವುದೇ ಬ್ಯಾಟ್ಸ್​ಮನ್​ಗಿಂತ ಕಡಿಮೆಯೇನಿಲ್ಲ ಎಂಬುದು ಸಾಬೀತಾಗಿದೆ. ಇವರ ಜೊತೆಗೆ ಉಳಿದ ಬೌಲರ್​ಗಳು ರನ್​ಗತಿಗೆ ಕಡಿವಾಣ ಹಾಕಿದರೆ ತಂಡಕ್ಕೆ 3ನೇ ಗೆಲುವು ಕೂಡ ದೊಡ್ಡದೇನಲ್ಲ. ಹಾಗಾಗಿ ಈ ಪಂದ್ಯದಲ್ಲೂ ಆರ್​ ಆರ್​ ತಂಡದಲ್ಲಿ ಹೆಚ್ಚು ಬದಲಾವಣೆಗೆ ಮುಂದಾಗುವುದು ಅನುಮಾನವಾಗಿದೆ.

ಐಪಿಎಲ್ 2020
ರಾಜಸ್ಥಾನ್ ರಾಯಲ್ಸ್​ ಹಾಗೂ ಕೋಲ್ಕತ್ತಾ ನೈಟ್​ ರೈಡರ್ಸ್​

ಇನ್ನು ಮೊದಲ ಪಂದ್ಯದಲ್ಲಿ ನೀರಸ ಪ್ರದರ್ಶನ ತೋರಿ ಮುಂಬೈ ವಿರುದ್ಧ 49 ರನ್​ಗಳ ಸೋಲು ಕಂಡಿದ್ದ ಕೆಕೆಆರ್​ನ ಎರಡನೇ ಪಂದ್ಯದಲ್ಲಿ ಸನ್​ರೈಸರ್ಸ್​ ವಿರುದ್ಧ 7 ವಿಕೆಟ್​ಗಳ ಗೆಲುವು ಸಾಧಿಸಿ ಉತ್ತಮ ರೀತಿಯಲ್ಲಿ ಕಮ್​ಬ್ಯಾಕ್​ ಮಾಡಿತ್ತು.

ಆರಂಭಿಕ ಆಟಗಾರ ಶುಬ್ಮನ್ ಗಿಲ್​ 70 ರನ್​ಸಿಡಿಸಿ ತಂಡಕ್ಕೆ ಜಯ ತಂದುಕೊಟ್ಟಿದ್ದರು. ಇನ್ನು ತಂಡದಲ್ಲಿ ಬಲ ಮತ್ತು ಎಡ ಬ್ಯಾಟಿಂಗ್ ಸಂಯೋಜನೆ ಉತ್ತಮವಾಗಿದೆ. ಮಾರ್ಗನ್​ ಕಳೆದ ಪಂದ್ಯದಲ್ಲಿ ಲಯಕ್ಕೆ ಮರಳಿದ್ದು, ಕೆಕೆಆರ್​ಗೆ ಸುಲಭ ಗೆಲುವು ತಂದುಕೊಟ್ಟಿದ್ದರು. ಇನ್ನು ತಂಡದಲ್ಲಿ ನಿತೀಶ್ ರಾಣಾ, ಕಾರ್ತಿಕ್​ ಜೊತೆಗೆ ಸ್ಫೋಟಕ ಆಟಗಾರರಾದ ರಸೆಲ್​ ಹಾಗೂ ನರೈನ್ ಅವರಂತಹ ಆಲ್​ರೌಂಡರ್​ ಇರುವುದರಿಂದ ತಂಡ ಟೂರ್ನಿಯಲ್ಲೇ ಬಲಿಷ್ಠ ತಂಡವಾಗಿದೆ.

ಆದರೆ, ಕಳೆದ ಎರಡು ಪಂದ್ಯಗಳಲ್ಲೂ ನರೈನ್​ ರನ್​ಗಳಿಸದೇ ಇರುವುದು ತಂಡಕ್ಕೆ ಹಿನ್ನಡೆಯುಂಟಾಗಿದೆ. ಈ ಪಂದ್ಯದಲ್ಲಾದರೂ ಲಯ ಕಂಡುಕೊಳ್ಳಲಿದ್ದಾರಾ ಎಂದು ಕಾದು ನೋಡಬೇಕಿದೆ.

ಪ್ಯಾಟ್​ ಕಮ್ಮಿನ್ಸ್​ ನೇತೃತ್ವದ ಬೌಲಿಂಗ್ ಬಳಗದ ಬಗ್ಗೆ ಯಾವುದೇ ಸಮಸ್ಯೆಯಿಲ್ಲ ಎನ್ನುವುದು ಕಳೆದ ಪಂದ್ಯದಲ್ಲಿ ಸಾಬೀತಾಗಿದೆ. ಕಮ್ಮಿನ್ಸ್​ ಜೊತೆಗೆ ಶಿವಂ ಮಾವಿ, ಕಮಲೇಶ್ ನಾಗರಕೋಟಿ ವೇಗದ ಬೌಲಿಂಗ್​ ವಿಭಾಗದಲ್ಲಿದ್ದರೆ, ವಿಶ್ವಶ್ರೇಷ್ಠ ಸ್ಪಿನ್ನರ್​ಗಳಲ್ಲಿ ಒಬ್ಬರಾದ ನರೈನ್ ಜೊತೆಗೆ ಭಾರತೀಯ ರಿಸ್ಟ್​ ಸ್ಪಿನ್ನರ್​ ಕುಲ್ದೀಪ್ ಯಾದವ್ ಹಾಗೂ ವರುಣ್ ಚಕ್ರವರ್ತಿ​ ಕೂಡ ತಮ್ಮ ಮ್ಯಾಜಿಕ್ ತೋರಿಸಲು ಸಿದ್ದರಿದ್ದಾರೆ.

ಐಪಿಎಲ್ 2020
ಕೋಲ್ಕತ್ತಾ ನೈಟ್​ ರೈಡರ್ಸ್​

ರಾಜಸ್ಥಾನ್ ರಾಯಲ್ಸ್​ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್​ ಐಪಿಎಲ್​ನಲ್ಲಿ ಒಟ್ಟು 20 ಬಾರಿ ಮುಖಾಮುಖಿಯಾಗಿವೆ. ವಿಶೇಷವೆಂದರೆ 2 ತಂಡಗಳೂ ತಲಾ 10 ರಲ್ಲಿ ಜಯ ಸಾಧಿಸಿವೆ. ಇಂದಿನ ಪಂದ್ಯ ಗೆದ್ದ ತಂಡ ಮುನ್ನಡೆ ಸಾಧಿಸಲಿದೆ.

ಸಂಭಾವ್ಯ ತಂಡಗಳು

ರಾಜಸ್ಥಾನ್ ರಾಯಲ್ಸ್ : ಜೋಸ್ ಬಟ್ಲರ್, ಸ್ಟೀವ್ ಸ್ಮಿತ್, ಸಂಜು ಸ್ಯಾಮ್ಸನ್, ರಾಬಿನ್ ಉತ್ತಪ್ಪ, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಟಾಮ್ ಕರ್ರನ್, ಶ್ರೇಯಸ್ ಗೋಪಾಲ್, ಜಯದೇವ್ ಉನಾದ್ಕಟ್, ಜೋಫ್ರಾ ಆರ್ಚರ್, ಅಂಕಿತ್ ರಾಜ್‌ಪೂತ್

ಕೊಲ್ಕತ್ತಾ ನೈಟ್ ರೈಡರ್ಸ್: ಶುಬ್ಮನ್ ಗಿಲ್, ಸುನಿಲ್ ನರೈನ್, ನಿತೀಶ್ ರಾಣಾ, ದಿನೇಶ್ ಕಾರ್ತಿಕ್, ಇಯಾನ್ ಮಾರ್ಗಾನ್, ಆಂಡ್ರೆ ರಸ್ಸೆಲ್, ಪ್ಯಾಟ್ ಕಮ್ಮಿನ್ಸ್, ಕಮಲೇಶ್ ನಾಗರ್ಕೋಟಿ, ವರುಣ್ ಚಕ್ರವರ್ತಿ, ಶಿವಂ ಮಾವಿ, ಕುಲದೀಪ್ ಯಾದವ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.