ಮುಂಬೈ: ಕಮ್ ಬ್ಯಾಕ್ ಹೀರೋ ಸುರೇಶ್ ರೈನಾ ಅಬ್ಬರದ ಅರ್ಧಶತಕದ ನೆರವಿನಿಂದ ಐಪಿಎಲ್ನ 2ನೇ ಲೀಗ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಡೆಲ್ಲಿ ತಂಡಕ್ಕೆ ಗೆಲ್ಲಲು 188 ರನ್ಗಳ ಸ್ಪರ್ಧಾತ್ಮಕ ಟಾರ್ಗೆಟ್ ನೀಡಿದೆ.
ಟಾಸ್ ಸೋತ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ಇಳಿದು ಕೇವಲ 7 ರನ್ಗಳಾಗುವಷ್ಟರಲ್ಲಿ ಆರಭಿಕರಾದ ಫಾಫ್ ಡು ಪ್ಲೆಸಿಸ್ ಮತ್ತು ರುತುರಾಜ್ ಗಾಯಕ್ವಾಡ್ ವಿಕೆಟ್ ಕಳೆದುಕೊಂಡಿತು.
ಆದರೆ 3ನೇ ವಿಕೆಟ್ ಜೊತೆಯಾಟದಲ್ಲಿ ಒಂದಾದ ಮೊಯೀನ್ ಅಲಿ ಮತ್ತು ಸುರೇಶ್ ರೈನಾ 53 ರನ್ಗಳ ಜೊತೆಯಾಟ ನೀಡಿದರು. 24 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ಗಳ ಸಹಿತ 36 ರನ್ಗಳಿಸಿದ್ದ ಮೊಯೀನ್ ಅಲಿ, ಅಶ್ವಿನ್ ಓವರ್ನಲ್ಲಿ ಬ್ಯಾಕ್ ಬ್ಯಾಕ್ ಸಿಕ್ಸರ್ ಬಾರಿಸಿ, ನಂತರದ ಎಸೆತದಲ್ಲೇ ಕ್ಯಾಚ್ ಔಟ್ ಆದರು. ನಂತರ ಬಂದ ರಾಯುಡು 16 ಎಸೆತಗಳಲ್ಲಿ 23 ರನ್ಗಳಿಸಿ ಔಟಾದರು.
-
Chris Woakes bowls a fine 20th over but @ChennaiIPL still get to 188-7. Stay tuned as @DelhiCapitals will soon begin their chase.
— IndianPremierLeague (@IPL) April 10, 2021 " class="align-text-top noRightClick twitterSection" data="
Follow the game - https://t.co/JzEquks8qB #CSKvDC #VIVOIPL pic.twitter.com/mQgncWtZ3E
">Chris Woakes bowls a fine 20th over but @ChennaiIPL still get to 188-7. Stay tuned as @DelhiCapitals will soon begin their chase.
— IndianPremierLeague (@IPL) April 10, 2021
Follow the game - https://t.co/JzEquks8qB #CSKvDC #VIVOIPL pic.twitter.com/mQgncWtZ3EChris Woakes bowls a fine 20th over but @ChennaiIPL still get to 188-7. Stay tuned as @DelhiCapitals will soon begin their chase.
— IndianPremierLeague (@IPL) April 10, 2021
Follow the game - https://t.co/JzEquks8qB #CSKvDC #VIVOIPL pic.twitter.com/mQgncWtZ3E
ಆದರೆ ತನ್ನ ಅಬ್ಬರದ ಬ್ಯಾಟಿಂಗ್ ಮುಂದುವರಿಸಿದ ರೈನಾ 32 ಎಸೆತಗಳಲ್ಲೇ ಅರ್ಧಶತಕ ಪೂರೈಸಿದರು. ಅವರು 36 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 3 ಬೌಂಡರಿಗಳ ನೆರವಿನಿಂದ 54ರನ್ಗಳಿಸಿ ರನ್ಔಟ್ ಆದರು. ಇವರ ಬೆನ್ನಲ್ಲೇ ನಾಯಕ ಧೋನಿ ಕೇವಲ 2 ಎಸೆತಗಳನ್ನೆದುರಿಸಿ ಅವೇಶ್ ಖಾನ್ ಬೌಲಿಂಗ್ನಲ್ಲಿ ಬೌಲ್ಡ್ ಆದರು.
ಕೊನೆಯಲ್ಲಿ ಅಬ್ಬರಿಸಿದ ಜಡೇಜಾ ಮತ್ತು ಸ್ಯಾಮ್ ಕರ್ರನ್ ಕೇವಲ 27 ಎಸೆತಗಳಲ್ಲಿ 51 ರನ್ ಸೇರಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಕೊನೆಗೆ ಸಿಎಸ್ಕೆ ತನ್ನ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 188 ರನ್ಗಳಿಸಿತು.
ಇದನ್ನು ಓದಿ: ಕರ್ರನ್ಗಾಗಿ ಅದ್ಭುತ ಫಾರ್ಮ್ನಲ್ಲಿರುವ ಸ್ಮಿತ್ ಕಡಗಣನೆ... ಆಶ್ಚರ್ಯ ವ್ಯಕ್ತಪಡಿಸಿದ ನೆಟ್ಟಿಗರು!