ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಮಹೇಂದ್ರ ಸಿಂಗ್ ಧೋನಿ 200ನೇ ಮ್ಯಾಚ್ ಆಡಿ ವಿಶೇಷ ದಾಖಲೆ ನಿರ್ಮಾಣ ಮಾಡಿದ್ದಾರೆ. ರಾಜಸ್ಥಾನ ರಾಯಲ್ಸ್ ಪರ ಕಣಕ್ಕಿಳಿದ ಧೋನಿ ಈ ವಿಶೇಷ ರೆಕಾರ್ಡ್ ತಮ್ಮದಾಗಿಸಿಕೊಂಡಿದ್ದಾರೆ.
ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಪಂದ್ಯಗಳನ್ನಾಡಿರುವ ಕ್ರಿಕೆಟಿಗ ಎಂಬ ಶ್ರೇಯಕ್ಕೆ ಪಾತ್ರರಾಗಿರುವ ಧೋನಿ ಸಿಎಸ್ಕೆ ಪರ 169 ಪಂದ್ಯ ಹಾಗೂ ಪುಣೆ ತಂಡದ ಪರ 30 ಪಂದ್ಯಗಳನ್ನಾಡಿದ್ದಾರೆ.
ಅಭಿಮಾನಿಗೆ ಜರ್ಸಿ ಗಿಫ್ಟ್ ನೀಡಿದ ಧೋನಿ!
ನಿನ್ನೆಯ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟ್ಸಮನ್ ಜೋಸ್ ಬಟ್ಲರ್ 48 ಎಸೆತಗಳಲ್ಲಿ 70 ರನ್ಗಳಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು. ಇದರ ಜತೆಗೆ ಮಹೇಂದ್ರ ಸಿಂಗ್ ಧೋನಿ ತಾವು ಹಾಕಿಕೊಂಡಿದ್ದ 200ನೇ ಪಂದ್ಯದ ಐಪಿಎಲ್ ಜರ್ಸಿ ಬಟ್ಲರ್ಗೆ ನೀಡಿದ್ದರಿಂದ ಅವರ ದಿನ ಮತ್ತಷ್ಟು ವಿಶೇಷವಾಗಿತ್ತು.
-
Jos pure joy. #Yellove 🦁💛 pic.twitter.com/x99ADsOshi
— Chennai Super Kings (@ChennaiIPL) October 20, 2020 " class="align-text-top noRightClick twitterSection" data="
">Jos pure joy. #Yellove 🦁💛 pic.twitter.com/x99ADsOshi
— Chennai Super Kings (@ChennaiIPL) October 20, 2020Jos pure joy. #Yellove 🦁💛 pic.twitter.com/x99ADsOshi
— Chennai Super Kings (@ChennaiIPL) October 20, 2020
ಮಹೇಂದ್ರ ಸಿಂಗ್ ಧೋನಿ ಅವರ ಅಪ್ಪಟ ಅಭಿಮಾನಿಯಾಗಿರುವ ಜೋಸ್ ಬಟ್ಲರ್, ನಿನ್ನೆಯ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಪಡೆದುಕೊಂಡರು. ಇದರ ಜತೆಗೆ ಅವರಿಗೆ ಧೋನಿ ತಮ್ಮ 200ನೇ ಐಪಿಎಲ್ ಪಂದ್ಯದ ಜರ್ಸಿ ನೀಡಿದರು.
ಇನ್ನು 200ನೇ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಹೇಳಿಕೊಳ್ಳುವಂತಹ ಸಾಧನೆ ಏನು ಮಾಡಲಿಲ್ಲ. ತಾವು ಎದುರಿಸಿದ 28 ಎಸೆತಗಳಲ್ಲಿ ಕೇವಲ 28ರನ್ಗಳಿಕೆ ಮಾಡಿದರು.