ಅಬುಧಾಬಿ: ಕೋಲ್ಕತ್ತಾ ನೈಟರ್ ರೈಡರ್ಸ್ ತಂಡ ಸಂಘಟಿತ ಬೌಲಿಂಗ್ ದಾಳಿಯ ನೆರವಿನಿಂದ ರಾಜಸ್ಥಾನ ರಾಯಲ್ಸ್ ವಿರುದ್ಧ 37 ರನ್ಗಳ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 174 ರನ್ಗಳಿಸಿತ್ತು . ಆರಂಭಿಕ ಬ್ಯಾಟ್ಸ್ಮನ್ ಶುಬ್ಮನ್ ಗಿಲ್ 47, ಇಯಾನ್ ಮಾರ್ಗನ್ 34, ರಸೆಲ್ 24 ಹಾಗೂ ನಿತೀಶ್ ರಾಣಾ ಅವರ 22 ರನ್ಗಳಿಸಿದ್ದರು.
ರಾಜಸ್ಥಾನ ರಾಯಲ್ಸ್ ಪರ ಜೋಫ್ರಾ ಆರ್ಚರ್ 18 ರನ್ ನೀಡಿ 2 ವಿಕೆಟ್ ಪಡೆದರೆ, ಟಾಮ್ ಕರ್ರನ್, ಉನಾದ್ಕಟ್, ತೆವಾಟಿಯಾ ಹಾಗೂ ರಜಪೂತ್ ತಲಾ ಒಂದು ವಿಕೆಟ್ ಪಡೆದರು.
175 ರನ್ಗಳ ಟಾರ್ಗೆಟ್ ಬೆನ್ನತ್ತಿದ ರಾಜಸ್ಥಾನ 2ನೇ ಓವರ್ನಲ್ಲೇ ನಾಯಕ ಸ್ಮಿತ್(3) ವಿಕೆಟ್ ಕಳೆದುಕೊಡು ಆಘಾತ ಅನುಭವಿಸಿತು. ನಂತರ ಬಂದ ಕಳೆದೆರಡು ಪಂದ್ಯಗಳಲ್ಲಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಸಂಜು ಸಾಮ್ಸನ್ ಕೂಡ 8 ರನ್ಗಳಿಸಿ ಔಟಾದರು.
-
That's that from Match 12 as the @KKRiders win by 37 runs and register their second win of the season.#Dream11IPL #RRvKKR pic.twitter.com/WkssQH4pvD
— IndianPremierLeague (@IPL) September 30, 2020 " class="align-text-top noRightClick twitterSection" data="
">That's that from Match 12 as the @KKRiders win by 37 runs and register their second win of the season.#Dream11IPL #RRvKKR pic.twitter.com/WkssQH4pvD
— IndianPremierLeague (@IPL) September 30, 2020That's that from Match 12 as the @KKRiders win by 37 runs and register their second win of the season.#Dream11IPL #RRvKKR pic.twitter.com/WkssQH4pvD
— IndianPremierLeague (@IPL) September 30, 2020
ಜೋಸ್ ಬಟ್ಲರ್ 16 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ ಒಂದು ಬೌಂಡರಿ ಸಹಿತ 21 ರನ್ಗಳಿಸಿ ಶಿವಂ ಮಾವಿಗೆ ವಿಕೆಟ್ ಒಪ್ಪಿಸಿದರು. ನಂತರ ಚೇತರಿಸಿಕೊಳ್ಳದ ರಾಜಸ್ಥಾನ ತಂಡ ಕೆಕೆಆರ್ ಬೌಲರ್ಗಳ ಮುಂದೆ ಮಂಡಿಯೂರಿತು. ಅನುಭವಿ ರಾಬಿನ್ ಉತ್ತಪ್ಪ (2), ಪರಾಗ್(1) ಒಂದೇ ಓವರ್ನಲ್ಲಿ ನಾಗರಕೋಟಿಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಕಳೆದ ಪಂದ್ಯದ ಹೀರೋ ತೆವಾಟಿಯಾ (14), ಜೋಫ್ರಾ ಆರ್ಚರ್(6), ಗೋಪಾಲ್(5), ಉನಾದ್ಕಟ್ (9) ಬಂದ ದಾರಿಯಲ್ಲೇ ವಾಪಸ್ ನಡೆದರು.
88ಕ್ಕೆ 8 ವಿಕೆಟ್ ಕಳೆದುಕೊಂಡು 100ರೊಳಗೆ ಆಲೌಟ್ ಆಗುವ ಆತಂಕದಲ್ಲಿದ್ದ ರಾಜಸ್ಥಾನ ತಂಡಕ್ಕೆ ಸಿಡಿಲಬ್ಬರದ ಅರ್ಧಶತಕ ಸಿಡಿಸುವ ಮೂಲಕ ಟಾಮ್ ಕರ್ರನ್ ಅಲ್ಪಮೊತ್ತಕ್ಕೆ ಕುಸಿಯುವುದರಿಂದ ಪಾರು ಮಾಡಿದರು. ಅವರು 36 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 2 ಬೌಂಡರಿ ಸಹಿತ 54 ರನ್ಗಳಿಸಿ ಸೋಲಿನ ಅಂತರವನ್ನು ತಗ್ಗಿಸಿದರು.
ಒಟ್ಟಾರೆ 20 ಓವರ್ಗಳಲ್ಲಿ ರಾಜಸ್ಥಾನ 9 ವಿಕೆಟ್ ವಿಕೆಟ್ ಕಳೆದುಕೊಂಡು 137 ರನ್ಗಳಿಸಲಷ್ಟೇ ಶಕ್ತವಾಗಿ 37 ರನ್ಗಳ ಸೋಲನುಭವಿಸಿತು. ಅಂಕಪಟ್ಟಿಯಲ್ಲೂ ಮೊದಲನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಕುಸಿಯಿತು. ಕೆಕೆಆರ್ ಈ ಗೆಲುವಿನೊಂದಿಗೆ 2 ನೇ ಸ್ಥಾನಕ್ಕೆ ಬಡ್ತಿ ಪಡೆಯಿತು.
ಕೋಲ್ಕತ್ತಾ ನೈಟ್ ರೈಡರ್ಸ್ ಪರ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಯುವ ಬೌಲರ್ಗಳಾದ ಶಿವಂ ಮಾವಿ 20ಕ್ಕೆ 2, ಕಮಲೇಶ್ ನಾಗರಕೋಟಿ 13ಕ್ಕೆ 2, ವರುಣ ಚಕ್ರವರ್ತಿ 25ಕ್ಕೆ 2 ವಿಕೆಟ್ ಪಡೆದರೆ, ಅನುಭವಿಗಳಾದ ಪ್ಯಾಟ್ ಕಮ್ಮಿನ್ಸ್ 13 ಕ್ಕೆ 1, ನರೈನ್ 40ಕ್ಕೆ 1 ಹಾಗೂ ಕುಲ್ದೀಪ್ ಯಾದವ್ 20ಕ್ಕೆ 1 ವಿಕೆಟ್ ಪಡೆದು ಕೆಕೆಆರ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಬಟ್ಲರ್ ಹಾಗೂ ಸಂಜು ಸಾಮ್ಸನ್ ವಿಕೆಟ್ ಪಡೆದ ಶಿವಂ ಮಾವಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.