ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ನ 13 ನೇ ಆವೃತ್ತಿಯ 21 ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ಟಾಸ್ ಗೆದ್ದ ಕೆಕೆಆರ್ ನಾಯಕ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ದಿನೇಶ್ ಕಾರ್ತಿಕ್ ನೇತೃತ್ವದ ಕೆಕೆಆರ್ ತಂಡ ಆಡಿರುವ 4 ಪಂದ್ಯಗಳಲ್ಲಿ 2 ಪಂದ್ಯಗಳನ್ನು ಸೋತಿದ್ದರೆ, 2 ಪಂದ್ಯದಲ್ಲಿ ಜಯಗಳಿಸಿದೆ. ಇತ್ತ ಸತತ ಸೋಲುಗಳಿಂದ ಕಂಗೆಟ್ಟಿದ್ದ ಸಿಎಸ್ಕೆ ಕಳೆದ ಪಂದ್ಯದಲ್ಲಿ 10 ವಿಕೆಟ್ಗಳ ಅಂತರದಿಂದ ಜಯ ಸಾಧಿಸಿದ್ದು, ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.
ಚೆನ್ನೈ ತಂಡ ಈ ಪಂದ್ಯದಲ್ಲಿ ಒಂದು ಬದಲಾವಣೆ ಮಾಡಿಕೊಂಡಿದೆ. ಪಿಯೂಷ್ ಚಾವ್ಲಾ ಬದಲು ಆಲ್ರೌಂಡರ್ ಕರ್ನ್ ಶರ್ಮಾರನ್ನು ಸೇರ್ಪಡೆಗೊಳಿಸಿದೆ. ಕೆಕೆಆರ್ ತಂಡ ಕಳೆದ ಪಂದ್ಯದಲ್ಲಿದ್ದ ತಂಡವನ್ನೇ ಆಡಿಸುತ್ತಿದೆ.
-
#KKR have won the toss and they will bat first against #CSK.#Dream11IPL pic.twitter.com/7iDHNesmDv
— IndianPremierLeague (@IPL) October 7, 2020 " class="align-text-top noRightClick twitterSection" data="
">#KKR have won the toss and they will bat first against #CSK.#Dream11IPL pic.twitter.com/7iDHNesmDv
— IndianPremierLeague (@IPL) October 7, 2020#KKR have won the toss and they will bat first against #CSK.#Dream11IPL pic.twitter.com/7iDHNesmDv
— IndianPremierLeague (@IPL) October 7, 2020
ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು 23 ಬಾರಿ ಮುಖಾಮುಖಿಯಾಗಿದ್ದು, 8 ಪಂದ್ಯಗಳಲ್ಲಿ ಕೆಕೆಆರ್ ಜಯದ ನಗೆ ಬೀರಿದ್ರೆ, 14 ಪಂದ್ಯಗಳಲ್ಲಿ ಸಿಎಸ್ಕೆ ಗೆಲುವು ಸಾಧಿಸಿದೆ. ಒಂದು ಪಂದ್ಯ ಯಾವುದೇ ಫಲಿತಾಂಶ ಕಂಡಿಲ್ಲ.
ಚೆನ್ನೈ ಸೂಪರ್ ಕಿಂಗ್ಸ್: ಎಂಎಸ್ ಧೋನಿ (ನಾಯಕ), ಶೇನ್ ವಾಟ್ಸನ್, ಫಾಫ್ ಡು ಪ್ಲೆಸಿ, ಅಂಬಾಟಿ ರಾಯುಡು, ಕೇದಾರ್ ಜಾಧವ್, ರವೀಂದ್ರ ಜಡೇಜಾ, ಸ್ಯಾಮ್ ಕರ್ರನ್, ಡ್ವೇನ್ ಬ್ರಾವೊ, ದೀಪಕ್ ಚಹರ್, ಶಾರ್ದೂಲ್ ಠಾಕೂರ್, ಕರ್ನ್ ಶರ್ಮಾ
ಕೊಲ್ಕತ್ತಾ ನೈಟ್ ರೈಡರ್ಸ್: ದಿನೇಶ್ ಕಾರ್ತಿಕ್(ನಾಯಕ) ಸುನೀಲ್ ನರೇನ್, ಶುಭ್‌ಮನ್ ಗಿಲ್, ನಿತೀಶ್ ರಾಣಾ, ಇಯಾನ್ ಮೋರ್ಗನ್, ಆಂಡ್ರೆ ರಸೆಲ್, ರಾಹುಲ್ ತ್ರಿಪಾಠಿ, ಪ್ಯಾಟ್ ಕಮಿನ್ಸ್, ಕಮಲೇಶ್ ನಾಗರಕೋಟಿ, ಶಿವಂ ಮಾವಿ, ವರುಣ್ ಚಕ್ರವರ್ತಿ