ETV Bharat / sports

ಇದು ಬೆಕ್ಕು ಮತ್ತು ಇಲಿ ಆಟ ಎಂದ ಡಿ ವಿಲಿಯರ್ಸ್: ಮಿಸ್ಟರ್​ 360 ಈ ಮಾತು ಹೇಳಿದ್ಯಾಕೆ​ ? - ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಎಬಿ ಡಿವಿಲಿಯರ್ಸ್

ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಎಬಿ ಡಿವಿಲಿಯರ್ಸ್​ ಮತ್ತೊಮ್ಮೆ ತಂಡಕ್ಕೆ ಆಧಾರಸ್ತಂಭವಾಗಿದ್ದು, ರಾಜಸ್ಥಾನ ರಾಯಲ್ಸ್​ ವಿರುದ್ಧ ಆರ್​​ಸಿಬಿ ಗೆಲುವು ಸಾಧಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ.

De Villiers
De Villiers
author img

By

Published : Oct 18, 2020, 7:25 AM IST

Updated : Oct 18, 2020, 7:47 AM IST

ದುಬೈ: ಇಂಡಿಯನ್​​ ಪ್ರೀಮಿಯರ್​ ಲೀಗ್​ನ ನಿನ್ನೆಯ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಗೆಲುವು ದಾಖಲು ಮಾಡಿದ್ದು, ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಮುಂದುವರೆದಿದೆ. ತಂಡ ಸಂಕಷ್ಟದಲ್ಲಿದ್ದ ವೇಳೇ ಕೇವಲ 22 ಎಸೆತಗಳಲ್ಲಿ 6ಸಿಕ್ಸರ್​, 1ಬೌಂಡರಿ ಸೇರಿ ಅಜೇಯ 55ರನ್​ಗಳಿಕೆ ಮಾಡಿ ತಂಡಕ್ಕೆ ಆಸರೆಯಾದರು.

ಆರ್​​ಸಿಬಿ ತಂಡಕ್ಕೆ ಕೊನೆಯ ಎರಡು ಓವರ್​​ಗಳಲ್ಲಿ 35ರನ್​​ಗಳ ಅಗತ್ಯವಿದ್ದ ವೇಳೆ, ಅಂತಿಮ ಓವರ್​​ನಲ್ಲಿ ಎಬಿಡಿ ಮೂರು ಸಿಕ್ಸರ್​​ ಸಿಡಿಸಿ ತಂಡ ಗೆಲುವು ಸಾಧಿಸುವಂತೆ ಮಾಡಿದ್ದಾರೆ. ಇದೇ ವಿಚಾರವಾಗಿ ಮಾತನಾಡಿರುವ ಡಿವಿಲಿಯರ್ಸ್​​​​​ ರನ್​​ ಚೇಸಿಂಗ್​ ವೇಳೆ ನಾನು ಕೂಡ ಇತರ ಆಟಗಾರನಂತೆ ತುಂಬಾ ಒತ್ತಡಕ್ಕೊಳಗಾಗುತ್ತೇನೆ ಎಂದಿದ್ದಾರೆ.

De Villiers
ಆರ್​ಆರ್​ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ ಎಬಿಡಿ

ನಾವು ಯೋಜನೆ ರೂಪಿಸಿದ​ ರೀತಿಯಲ್ಲಿ ಬೌಲಿಂಗ್​ ಮಾಡಿದೇವು. ಆದರೂ ಕೆಲ ರನ್​​ ಸೋರಿಕೆಯಾದವು.15 - 20 ರನ್​ ಹೆಚ್ಚು ನೀಡಿದ್ದರಿಂದ ಚೇಸಿಂಗ್​ ವೇಳೆ ಸ್ವಲ್ಪ ಮಟ್ಟದ ಕಷ್ಟವಾಯಿತು ಎಂದಿರುವ ಎಬಿಡಿ, ಇದನ್ನ ಬೆನ್ನಟ್ಟುವಾಗ ನಮಗೂ ಕಷ್ಟವಾಯಿತು ಎಂದಿದ್ದಾರೆ.

ನಿನ್ನೆಯ ಪಂದ್ಯದಲ್ಲಿ ಜಯದೇವ್​ ಉನ್ಕಾದತ್​ ಎಸೆದ 19ನೇ ಓವರ್​​ನಲ್ಲಿ 25ರನ್​ ಬಿಟ್ಟುಕೊಟ್ಟರು.ಹೀಗಾಗಿ ಕೊನೆಯ ಓವರ್​ನಲ್ಲಿ ತಂಡಕ್ಕೆ 10ರನ್​ ಅವಶ್ಯಕತೆ ಇದ್ದಾಗ ಎಬಿಡಿ ಸುಲಭವಾಗಿ ಗಳಿಕೆ ಮಾಡಿದರು. ನಾನು ಯಾವಾಗಲೂ ಬೌಲರ್​​ಗಳನ್ನ ಗೌರವಿಸುತ್ತೇನೆ. ಅವರು ನನಗೆ ಚೆನ್ನಾಗಿ ಬೌಲಿಂಗ್​ ಮಾಡಿದ್ರೆ, ಮೇಲುಗೈ ಸಾಧಿಸುಸುತ್ತಾರೆ. ಉನಾದ್ಕತ್​ ಬೌಲಿಂಗ್ ಮಾಡುವಾಗ ನಾನು ಲೆಗ್​ ಸೈಡ್​​ ಹೊಡೆಬೇಕೆಂದು ಅಂದುಕೊಂಡಿದ್ದೇನು. ಆದರೆ ಅದೃಷ್ಟವಶಾತ್​ ನಾನು ಹೊಡೆದ ಚೆಂಡು ಸಿಕ್ಸರ್​ ಹೋಯ್ತು ಎಂದಿದ್ದಾರೆ.

ನಾನು ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡಲು ಬಯಸುತ್ತೇನೆ. ಒಳ್ಳೆಯ ಕಾರಣಕ್ಕಾಗಿ ನಾನು ಇಲ್ಲಿದ್ದೇನೆ ಎಂಬುದನ್ನ ಮಾಲೀಕರು ಹಾಗೂ ಆರ್​ಸಿಬಿ ಕುಟುಂಬಕ್ಕೆ, ಅಭಿಮಾನಿಗಳಿಗೆ ತೋರಿಸಬೇಕು. ಹಿಂದಿನ ಪಂದ್ಯದಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನನ್ನಿಂದ ಮೂಡಿ ಬಂದಿರಲಿಲ್ಲ ಎಂದು ಎಬಿಡಿ ಇದೇ ವೇಳೆ ಹೇಳಿಕೊಂಡಿದ್ದಾರೆ. ಇದು ಬೆಕ್ಕು ಮತ್ತು ಇಲಿ ಆಟ ಎಂದು ಡಿವಿಲಿಯರ್ಸ್​ ತಿಳಿಸಿದ್ದಾರೆ. ಆರ್​​ಸಿಬಿ ಮುಂದಿನ ಪಂದ್ಯದಲ್ಲಿ ಬುಧವಾರ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ಸೆಣಸಾಟ ನಡೆಸಲಿದೆ.

Last Updated : Oct 18, 2020, 7:47 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.