ಅಬುಧಾಬಿ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಗುರುವಾರ ಅಬುಧಾಬಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸೆಣಸಾಡಲಿದೆ. ನಿರ್ಣಾಯಕ ಎನಿಸಿರುವ ಈ ಪಂದ್ಯದಲ್ಲಿ ಮೇಲುಗೈ ಸಾಧಿಸಬೇಕಾದರೆ ಪಂಜಾಬ್ ನಾಯಕ ಕೆಎಲ್ ರಾಹುಲ್ರ ಮೇಲೆ ಹಿಡಿತ ಸಾಧಿಸುವುದು ನಮಗೆ ಅನಿವಾರ್ಯವಾಗಿದ ಎಂದು ಮುಂಬೈ ಇಂಡಿಯನ್ಸ್ ಬೌಲಿಂಗ್ ಕೋಚ್ ಶೇನ್ ಬಾಂಡ್ ಅಭಿಪ್ರಾಯ ಪಟ್ಟಿದ್ದಾರೆ.
" ಕೆಎಲ್ ರಾಹುಲ್ ಒಬ್ಬ ಅದ್ಭುತ ಆಟಗಾರ. ಅವರು ಈ ಹಿಂದಿನ ಪಂದ್ಯಗಳಲ್ಲಿ ನಮ್ಮ ವಿರುದ್ಧ ರನ್ಗಳಿಸಿದ್ದಾರೆ. ಆತ ಡೈನಮಿಕ್ ಆಟಗಾರ ಎಂದು ನಮಗೆ ತಿಳಿದಿದೆ. ಅವರು ಹೆಚ್ಚು ರನ್ಗಳನ್ನು ನೆಲದಲ್ಲೇ ಹೊಡೆದು ಗಳಿಸುತ್ತಾರೆ. ಹಾಗೆಯೇ ಅವರು ಕ್ರೀಸ್ನಲ್ಲಿ ನೆಲೆಯೂರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ ಎಂಬುದು ಸಹ ನಮಗೆ ತಿಳಿದಿದೆ. ಆದ್ದರಿಂದ ಅವರು ನಮ್ಮ ವಿರುದ್ಧ ಸೆಟ್ಲ್ ಆಗಲು ಸಮಯ ತೆಗೆದುಕೊಳ್ಳುವ ವೇಳೆ ನಾವು ಅವರ ಮೇಲೆ ಒತ್ತಡ ಏರುವುದಕ್ಕೆ ಉತ್ತಮ ಅವಕಾಶ ದೊರೆಯುತ್ತದೆ" ಎಂದು ಬಾಂಡ್ ಹೇಳಿದ್ದಾರೆ.
ನಾವು ಅತ್ಯುತ್ತಮ ಗುಣಮಟ್ಟದ ಬೌಲಿಂಗ್ ದಾಳಿಯನ್ನು ಹೊಂದಿದ್ದೇವೆ. ಆದ್ದರಿಂದ ರಾಹುಲ್ರನ್ನು ಒತ್ತಡಕ್ಕೆ ಒಳಗಾಗುವಂತೆ ಮಾಡಬಹುದು. ನಮ್ಮ ಬ್ಯಾಟಿಂಗ್ ಮೇಲೂ ವಿಶ್ವಾಸವಿದೆ. ಈಗಾಗಲೇ ಇದೇ ಕ್ರೀಡಾಂಗಣದಲ್ಲಿ ಎರಡು ಪಂದ್ಯಗಳನ್ನಾಡಿರುವುದರಿಂದ ನಮಗೆ ಇಲ್ಲಿನ ಪರಿಸ್ಥಿತಿಗಳ ಬಗ್ಗೆ ಚೆನ್ನಾಗಿ ತಿಳಿದಿದೆ ಎಂದು ಅವರು ಹೇಳಿದ್ದಾರೆ.
ಕೆಲ್ ರಾಹುಲ್ ಐಪಿಎಲ್ನಲ್ಲಿ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಅವರು ಕಳೆದರು ಇನ್ನಿಂಗ್ಸ್ಗಳಲ್ಲಿ 132 ಹಾಗೂ 69 ರನ್ಗಳಿಸಿದ್ದಾರೆ. ಗುರುವಾರ ನಡೆಯುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧವೂ ತಮ್ಮ ಬ್ಯಾಟಿಂಗ್ ಪರಾಕ್ರಮ ಮೆರೆಯಲಿದ್ದಾರೆಯೇ ಎಂದು ಕಾದು ನೋಡಬೇಕಿದೆ.
ಮುಂಬೈ ಇಂಡಿಯನ್ಸ್ ಆಡಿರುವ ಮೂರು ಪಂದ್ಯಗಳಲ್ಲಿ 2 ಸೋಲು ಹಾಗೂ ಒಂದು ಗೆಲುವು ಪಡೆದಿದೆ. ಪಂಜಾಬ್ ಕೂಡ 2 ಸೋಲು ಹಾಗೂ ಒಂದು ಗೆಲುವು ಪಡೆದಿದೆ. ಆದರೆ ಸೋತಿರುವ ಎರಡು ಪಂದ್ಯಗಳಲ್ಲೂ ಪ್ರಬಲ ಪೈಪೋಟಿ ನೀಡಿದೆ.