ETV Bharat / sports

ಐಪಿಎಲ್​ ಫೈನಲ್​ ಪಂದ್ಯದ ದಿನಾಂಕ ಬದಲಾವಣೆ ಸಾಧ್ಯತೆ? - ಆಗಸ್ಟ್​ 2ರಂದು ಐಪಿಎಲ್​ ಸಭೆ

ಐಪಿಎಲ್​ ಆಡಳಿತ ಮಂಡಳಿ ನವೆಂಬರ್​ 10ಕ್ಕೆ ಮುಂದೂಡಿ ದೀಪಾವಳಿಯ ವಾರವನ್ನು ಬಳಸಿಕೊಳ್ಳುಲು ಈ ನಿರ್ಧಾರ ಮಾಡುತ್ತಿದೆ ಎನ್ನಲಾಗಿದೆ.

ಐಪಿಎಲ್ 2020
ಐಪಿಎಲ್ 2020
author img

By

Published : Jul 30, 2020, 1:03 PM IST

ಮುಂಬೈ: ನವೆಂಬರ್​ 8ರಂದು ನಡೆಯಬೇಕಿದ್ದ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯ ನವೆಂಬರ್ 10ಕ್ಕೆ ಮುಂದೂಡಿಕೆಯಾಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ಈಗಾಗಲೇ ಐಪಿಎಲ್​ ದಿನಾಂಕ ಘೋಷಣೆಯಾದಾಗ ಬಿಸಿಸಿಐ ನಿರ್ಧಾರಕ್ಕೆ ಸ್ಟಾರ್​ ಇಂಡಿಯಾ ಬೇಸರ ವ್ಯಕ್ತಪಡಿಸಿತ್ತು. ದೀಪಾವಳಿಗೆ ವಾರಾಂತ್ಯದಲ್ಲಿ ಟೂರ್ನಿ ಮುಗಿದಿದ್ದರೆ ಹೆಚ್ಚಿನ ವೀಕ್ಷಣೆ ಆಗುತ್ತಿತ್ತು ಎಂದು ತಿಳಿಸಿತ್ತು. ಐಪಿಎಲ್​ ಆಡಳಿತ ಮಂಡಳಿ ನವೆಂಬರ್​ 10ಕ್ಕೆ ಮುಂದೂಡಿ ದೀಪಾವಳಿಯ ವಾರವನ್ನು ಬಳಸಿಕೊಳ್ಳುಲು ಈ ನಿರ್ಧಾರ ಮಾಡುತ್ತಿದೆ ಎನ್ನಲಾಗಿದೆ. ಈ ಕುರಿತು ಐಪಿಎಲ್ ಆಡಳಿತ ಮಂಡಳಿ ಆಗಸ್ಟ್​ 2ರಂದು ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ಫೈನಲ್ ಪಂದ್ಯ 2 ದಿನ ವಿಳಂಬವಾದರೆ ಕೊಹ್ಲಿ ಪಡೆ ಐಪಿಎಲ್ ಮುಗಿಯುತ್ತಿದ್ದಂತೆ ಭಾರತಕ್ಕೆ ಬಾರದೆ ನೇರವಾಗಿ ಆಸ್ಟ್ರೇಲಿಯ ಪ್ರವಾಸ ಕೈಗೊಳ್ಳಬೇಕಾಗುತ್ತದೆ.

ಪಸ್ತುತ ವೇಳಾಪಟ್ಟಿಯ ಪ್ರಕಾರ ಐಪಿಎಲ್ ಸೆಪ್ಟೆಂಬರ್ 19ರಿಂದ ನವೆಂಬರ್ 8ರ ತನಕ ಗೊತ್ತು ಮಾಡಲಾಗಿದೆ. ಆದರೆ ಕೇಂದ್ರ ಸರ್ಕಾರ ಇನ್ನೂ ಯುಎಇನಲ್ಲಿ ಐಪಿಎಲ್​ ಆಯೋಜಿಸಲು ಅನುಮತಿ ನೀಡದ ಕಾರಣ ಐಪಿಎಲ್ ಆಡಳಿತ ಮಂಡಳಿ ಸಂಪೂರ್ಣ ವೇಳಾಪಟ್ಟಿಯನ್ನು ಘೋಷಣೆ ಮಾಡಿಲ್ಲ. ಅದಕ್ಕಾಗಿಯೇ ಆಗಸ್ಟ್​ 2ರಂದು ಸಭೆ ನಡೆಯಲಿದ್ದು, ಈ ಬಗ್ಗೆ ಅಲ್ಲಿ ಚರ್ಚೆ ಮಡೆಯಲಿದೆ. ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್​ ಶಾ ಕೂಡ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.