ETV Bharat / sports

ಬೈರ್ಸ್ಟೋವ್​ 97: ಪಂಜಾಬ್​ ವಿರುದ್ಧ 201 ರನ್​ಗಳ ಬೃಹತ್ ಮೊತ್ತ​ ದಾಖಲಿಸಿದ ಹೈದರಾಬಾದ್​

author img

By

Published : Oct 8, 2020, 9:38 PM IST

ಟಾಸ್​ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಹೈದರಾಬಾದ್ ಈ ಪಂದ್ಯದಲ್ಲಿ ಅದ್ಭುತ ಆರಂಭ ಪಡೆಯಿತು. ನಾಯಕ ವಾರ್ನರ್​(52) ಹಾಗೂ ಬೈರ್ಸ್ಟೋವ್​(97) ಮೊದಲ ವಿಕೆಟ್​ಗೆ 160 ರನ್​ಗಳ ಬೃಹತ್ ಮೊತ್ತದ ಜೊತೆಯಾಟ ನೀಡಿದರು.

ಸನ್​ರೈಸರ್ಸ್​ ಹೈದರಾಬಾದ್​
ಸನ್​ರೈಸರ್ಸ್​ ಹೈದರಾಬಾದ್​

ದುಬೈ: ಆರಂಭಿಕರಾದ ನಾಯಕ ಡೇವಿಡ್ ವಾರ್ನರ್​ ಹಾಗೂ ಜಾನಿ ಬೈರ್ಸ್ಟೋವ್ ಅವರ ಭರ್ಜರಿ ಅರ್ಧಶತಕಗಳ ನೆರವಿನಿಂದ ಸನ್​ರೈಸರ್ಸ್ ಹೈದರಾಬಾದ್​ ತಂಡ​, ಕಿಂಗ್ಸ್​ ಇಲೆವೆನ್ ಪಂಜಾಬ್​ ವಿರುದ್ಧ 201ರನ್​ಗಳ ಬೃಹತ್ ಮೊತ್ತ ಕಲೆ ಹಾಕಿದೆ.

ಟಾಸ್​ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಹೈದರಾಬಾದ್ ಈ ಪಂದ್ಯದಲ್ಲಿ ಅದ್ಭುತ ಆರಂಭ ಪಡೆಯಿತು. ನಾಯಕ ವಾರ್ನರ್​(52) ಹಾಗೂ ಬೈರ್ಸ್ಟೋವ್​(97) ಮೊದಲ ವಿಕೆಟ್​ಗೆ 160 ರನ್​ಗಳ ಬೃಹತ್ ಮೊತ್ತದ ಜೊತೆಯಾಟ ನೀಡಿದರು.

15 ಓವರ್​ಗಳವರೆಗೆ ವಿಕೆಟ್​ ನೀಡದೇ ಆಡಿದ್ದ ಈ ಜೋಡಿಯನ್ನು ಅಂಡರ್ 19 ಸ್ಟಾರ್​ ರವಿ ಬಿಷ್ಮೋಯ್ ಒಂದೇ ಓವರ್​ನಲ್ಲಿ ಪೆವಿಲಿಯನ್​ಗಟ್ಟಿದರು. ವಾರ್ನರ್​ 40 ಎಸೆತಗಳಲ್ಲಿ 5 ಬೌಂಡರಿ ಹಾಗೂ ಒಂದು ಸಿಕ್ಸರ್​ ಸಹಿತ 52 ರನ್​ಗಳಿಸಿದರೆ, ಬೈರ್ಸ್ಟೋವ್​ 55 ಎಸೆತಗಳಲ್ಲಿ 6 ಸಿಕ್ಸರ್​ ಹಾಗೂ 7 ಬೌಂಡರಿಗಳೊಂದಿಗೆ 97 ರನ್​ಗಳಿಸಿ ಔಟಾದರು.

ಇವರಿಬ್ಬರ ನಂತರ ಬಂದ ಮನೀಶ್ ಪಾಂಡೆ ಕೇವಲ 1 ರನ್​ಗಳಿಸಿ ಅರ್ಷ್​ದೀಪ್​ ಸಿಂಗ್ ಬೌಲಿಂಗ್​ನಲ್ಲಿ ಅವರಿಗೆ ಕ್ಯಾಚ್​ ನೀಡಿ ಔಟಾದರೆ, ಇವರ ಬೆನ್ನಲ್ಲೇ ಅಬ್ದುಲ್ ಸಮದ್​ 8 ರನ್​ಗಳಿಸಿ ಬಿಷ್ಣೋಯ್​ಗೆ ಮೂರನೇ ಬಲಿಯಾದರು. ಯುವ ಬ್ಯಾಟ್ಸ್​ಮನ್​ ಗರ್ಗ್​ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು.

BIG TOTAL! We finish with 201/6 on the scoreboard after the first innings.#SRHvKXIP #OrangeArmy #KeepRising pic.twitter.com/w0kwEi3rFo

— SunRisers Hyderabad (@SunRisers) October 8, 2020 " class="align-text-top noRightClick twitterSection" data=" ">

ಆದರೆ ಕೊನೆಯ 2 ಓವರ್​ಗಳಲ್ಲಿ ಅಬ್ಬರಿಸಿದ ಕೇನ್​ ವಿಲಿಯಮ್ಸನ್​ ಹಾಗೂ ಅಭಿಷೇಕ್ ಶರ್ಮಾ ತಂಡದ ಮೊತ್ತವನ್ನು 200 ರ ಗಡಿದಾಟಿಸಿದರು. ಅಭಿಷೇಕ್ 6 ಎಸೆತಗಳಲ್ಲಿ 12 ಹಾಗೂ ವಿಲಿಯಮ್ಸನ್​ 10 ಎಸೆತಗಳಲ್ಲಿ 20 ರನ್​ಗಳಿಸಿದರು.

ಕಿಂಗ್ಸ್ ಇಲೆವೆನ್ ಪಂಜಾಬ್ ಪರ ರವಿಬಿಷ್ಣೋಯ್ 3 ವಿಕೆಟ್​, ಅರ್ಷ್​ದೀಪ್​ 2 ಹಾಗೂ ಶಮಿ ಒಂದು ವಿಕೆಟ್ ಪಡೆದರು.

ದುಬೈ: ಆರಂಭಿಕರಾದ ನಾಯಕ ಡೇವಿಡ್ ವಾರ್ನರ್​ ಹಾಗೂ ಜಾನಿ ಬೈರ್ಸ್ಟೋವ್ ಅವರ ಭರ್ಜರಿ ಅರ್ಧಶತಕಗಳ ನೆರವಿನಿಂದ ಸನ್​ರೈಸರ್ಸ್ ಹೈದರಾಬಾದ್​ ತಂಡ​, ಕಿಂಗ್ಸ್​ ಇಲೆವೆನ್ ಪಂಜಾಬ್​ ವಿರುದ್ಧ 201ರನ್​ಗಳ ಬೃಹತ್ ಮೊತ್ತ ಕಲೆ ಹಾಕಿದೆ.

ಟಾಸ್​ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಹೈದರಾಬಾದ್ ಈ ಪಂದ್ಯದಲ್ಲಿ ಅದ್ಭುತ ಆರಂಭ ಪಡೆಯಿತು. ನಾಯಕ ವಾರ್ನರ್​(52) ಹಾಗೂ ಬೈರ್ಸ್ಟೋವ್​(97) ಮೊದಲ ವಿಕೆಟ್​ಗೆ 160 ರನ್​ಗಳ ಬೃಹತ್ ಮೊತ್ತದ ಜೊತೆಯಾಟ ನೀಡಿದರು.

15 ಓವರ್​ಗಳವರೆಗೆ ವಿಕೆಟ್​ ನೀಡದೇ ಆಡಿದ್ದ ಈ ಜೋಡಿಯನ್ನು ಅಂಡರ್ 19 ಸ್ಟಾರ್​ ರವಿ ಬಿಷ್ಮೋಯ್ ಒಂದೇ ಓವರ್​ನಲ್ಲಿ ಪೆವಿಲಿಯನ್​ಗಟ್ಟಿದರು. ವಾರ್ನರ್​ 40 ಎಸೆತಗಳಲ್ಲಿ 5 ಬೌಂಡರಿ ಹಾಗೂ ಒಂದು ಸಿಕ್ಸರ್​ ಸಹಿತ 52 ರನ್​ಗಳಿಸಿದರೆ, ಬೈರ್ಸ್ಟೋವ್​ 55 ಎಸೆತಗಳಲ್ಲಿ 6 ಸಿಕ್ಸರ್​ ಹಾಗೂ 7 ಬೌಂಡರಿಗಳೊಂದಿಗೆ 97 ರನ್​ಗಳಿಸಿ ಔಟಾದರು.

ಇವರಿಬ್ಬರ ನಂತರ ಬಂದ ಮನೀಶ್ ಪಾಂಡೆ ಕೇವಲ 1 ರನ್​ಗಳಿಸಿ ಅರ್ಷ್​ದೀಪ್​ ಸಿಂಗ್ ಬೌಲಿಂಗ್​ನಲ್ಲಿ ಅವರಿಗೆ ಕ್ಯಾಚ್​ ನೀಡಿ ಔಟಾದರೆ, ಇವರ ಬೆನ್ನಲ್ಲೇ ಅಬ್ದುಲ್ ಸಮದ್​ 8 ರನ್​ಗಳಿಸಿ ಬಿಷ್ಣೋಯ್​ಗೆ ಮೂರನೇ ಬಲಿಯಾದರು. ಯುವ ಬ್ಯಾಟ್ಸ್​ಮನ್​ ಗರ್ಗ್​ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು.

ಆದರೆ ಕೊನೆಯ 2 ಓವರ್​ಗಳಲ್ಲಿ ಅಬ್ಬರಿಸಿದ ಕೇನ್​ ವಿಲಿಯಮ್ಸನ್​ ಹಾಗೂ ಅಭಿಷೇಕ್ ಶರ್ಮಾ ತಂಡದ ಮೊತ್ತವನ್ನು 200 ರ ಗಡಿದಾಟಿಸಿದರು. ಅಭಿಷೇಕ್ 6 ಎಸೆತಗಳಲ್ಲಿ 12 ಹಾಗೂ ವಿಲಿಯಮ್ಸನ್​ 10 ಎಸೆತಗಳಲ್ಲಿ 20 ರನ್​ಗಳಿಸಿದರು.

ಕಿಂಗ್ಸ್ ಇಲೆವೆನ್ ಪಂಜಾಬ್ ಪರ ರವಿಬಿಷ್ಣೋಯ್ 3 ವಿಕೆಟ್​, ಅರ್ಷ್​ದೀಪ್​ 2 ಹಾಗೂ ಶಮಿ ಒಂದು ವಿಕೆಟ್ ಪಡೆದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.