ETV Bharat / sports

ಕೋಟಿಗಟ್ಟಲೆ ಹಣ ಪಡೆದ ಪ್ರಸಿದ್ಧ ಆಟಗಾರರು ಮೌಲ್ಯಕ್ಕೆ ತಕ್ಕಂತೆ ಆಡುತ್ತಿದ್ದಾರೆಯೇ?

author img

By

Published : Oct 22, 2020, 5:41 PM IST

ಐಪಿಎಲ್‌ ಕ್ರಿಕೆಟ್​ನಲ್ಲಿ ಕೋಟಿ ಕೋಟಿ ಹಣ ಸುರಿದು ಆಟಗಾರರನ್ನು ಖರೀದಿಸಿದರೆ ಸಾಲದು. ಅಂತಿಮವಾಗಿ ಆಟಗಾರರು ಟೂರ್ನಿಯಲ್ಲಿ ಯಾವ ರೀತಿ ಪ್ರದರ್ಶನ ತೋರುತ್ತಾರೆ ಎಂಬುದೇ ಮಹತ್ವ ಪಡೆಯುತ್ತದೆ. 13ನೇ ಆವೃತ್ತಿಯಲ್ಲಿ ಈ ಅನುಭವ 2 ಬಾರಿಯ ಚಾಂಪಿಯನ್ ಕೋಲ್ಕತ್ತಾ ನೈಟ್​ ರೈಡರ್ಸ್​ಗೆ ದೊಡ್ಡ ಪಾಠ ಕಲಿಸಿದೆ ಎಂದರೆ ತಪ್ಪಾಗಲಾರದು.

ಐಪಿಎಲ್ 2020 ದುಬಾರಿ ಆಟಗಾರರು
ಐಪಿಎಲ್ 2020 ದುಬಾರಿ ಆಟಗಾರರು

ಹೈದರಾಬಾದ್​: ಮಿಲಿಯನ್ ಡಾಲರ್​ ಟೂರ್ನಿ ಐಪಿಎಲ್​ ಹರಾಜಿನಲ್ಲಿ ಆಟಗಾರರು ಕೋಟಿ ಕೋಟಿ ದುಡ್ಡು ಪಡೆದು ಕ್ರಿಕೆಟ್ ಜಗತ್ತನ್ನೇ ಅಚ್ಚರಿಗೊಳಿಸಿದ್ದಾರೆ. ತಮ್ಮ ಸ್ಟಾರ್​ ಪವರ್​ನಿಂದ ಇಷ್ಟು ರೊಕ್ಕ ಪಡೆದಿದ್ದ ಪ್ಲೇಯರ್ಸ್‌ ಇಂದು ತಮ್ಮ ಮೌಲ್ಯಕ್ಕೆ ತಕ್ಕ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ.

ಕ್ರಿಕೆಟ್​ನಲ್ಲಿ ಕೋಟ್ಯಂತರ ಹಣ ಸುರಿದು ಆಟಗಾರರನ್ನು ಖರೀದಿಸಿದರೆ ಸಾಲದು. ಅಂತಿಮವಾಗಿ ಆಟಗಾರರು ಟೂರ್ನಿಯಲ್ಲಿ ಯಾವ ರೀತಿ ಪ್ರದರ್ಶನ ತೋರುತ್ತಾರೆ ಎಂಬುದು ಮಹತ್ವ ಪಡೆಯುತ್ತದೆ. 13ನೇ ಆವೃತ್ತಿಯಲ್ಲಿ ಈ ಅನುಭವ 2 ಬಾರಿಯ ಚಾಂಪಿಯನ್ ಕೋಲ್ಕತ್ತಾ ನೈಟ್​ ರೈಡರ್ಸ್​ಗೆ ದೊಡ್ಡ ಪಾಠ ಕಲಿಸಿದೆ ಎಂದರೆ ತಪ್ಪಾಗಲಾರದು.

ಐಪಿಎಲ್ 2020
ಐಪಿಎಲ್ 2020

ಕೆಕೆಆರ್​ ತಂಡ ಆಸ್ಟ್ರೇಲಿಯಾದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್​ರನ್ನು 2019ರ ಹರಾಜಿನಲ್ಲಿ ಬರೋಬ್ಬರಿ 15.5 ಕೋಟಿ ರೂ.ಗೆ ಖರೀದಿಸಿತ್ತು. ಈ ಮೂಲಕ 2017ರಲ್ಲಿ 14.5 ಕೋಟಿ ರೂ ನೀಡಿ ಬೆನ್​ ಸ್ಟೋಕ್ಸ್​ರನ್ನು ಖರೀದಿಸಿದ್ದ ಪುಣೆ ತಂಡವನ್ನು ಮೀರಿಸಿ, ವಿದೇಶಿ ಆಟಗಾರನನ್ನು ತಂಡಕ್ಕೆ ಸೇರಿಸಿಕೊಂಡಿತ್ತು.

ಆರಂಭದಲ್ಲಿ ಕಮ್ಮಿನ್ಸ್​​ ದುಬಾರಿ ಆಟಗಾರ ಎಂಬುದನ್ನು ಕೆಲವು ಕ್ರಿಕೆಟ್ ಪಂಡಿತರು ಒಪ್ಪಿಕೊಂಡಿದ್ದರು. ಏಕೆಂದರೆ, ಅವರು 2019ರಿಂದ ಟೆಸ್ಟ್​ ಕ್ರಿಕೆಟ್​ನಲ್ಲಿ ನಂಬರ್ ಒನ್ ಬೌಲರ್​ ಆಗಿದ್ದಾರೆ. ಜೊತೆಗೆ ಅವರು ಕೆಳ ಕ್ರಮಾಂಕದ ಬ್ಯಾಟ್ಸ್​ಮನ್​ ಕೂಡ. ಆದರೆ ಕೆಕೆಆರ್​ ಅವರ ಬ್ಯಾಟಿಂಗ್​ಗಿಂತಲೂ ಬೌಲಿಂಗ್‌ಗೆ ಪ್ರಾಮುಖ್ಯತೆ ನೀಡಿ ದುಬಾರಿ ಬೆಲೆ ನೀಡಿ ಖರೀದಿಸಿತ್ತು.

ಆದರೆ ಟೂರ್ನಿಯಲ್ಲಿ 10 ಪಂದ್ಯಗಳನ್ನಾಡಿರುವ ಕಮ್ಮಿನ್ಸ್​ ಕೇವಲ 3 ವಿಕೆಟ್ ಪಡೆದಿದ್ದಾರೆ. ಅವರ ಮೌಲ್ಯಕ್ಕೆ ತಕ್ಕಂತಹ ಪ್ರದರ್ಶನ ಬಂದಿರುವುದು ಬ್ಯಾಟ್ ಮೂಲಕ. ಅದು 27 ವರ್ಷದ ಈ ಆಟಗಾರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಔಟಾಗದೆ 53 ರನ್​ ಗಳಿಸಿದರು. ಇದೀಗ ಟೂರ್ನಿಯಲ್ಲಿ ಕೇವಲ 4 ಪಂದ್ಯಗಳು ಮಾತ್ರ ಉಳಿದಿವೆ. ಇದರಲ್ಲಿ ಕಮ್ಮಿನ್ಸ್ ವೇಗದ ಬೌಲರ್​ ಆಗಿ ಬದಲಾಗಬೇಕಿದೆ. ಇಲ್ಲದಿದ್ದರೆ ಕೆಕೆಆರ್​ ಖಂಡಿತ ಮುಂದಾದರೂ ಜಾಗರೂಕರಾಗಬೇಕಾಗುತ್ತದೆ ಎನ್ನಲಾಗುತ್ತಿದೆ.

ಇವರ ಆಸ್ಟ್ರೇಲಿಯಾ ತಂಡದ ಸಹ ಆಟಗಾರ ಗ್ಲೆನ್ ಮ್ಯಾಕ್ಸ್​ವೆಲ್ ಅವರದ್ದೂ ಇದೇ ಕತೆ. ಮ್ಯಾಕ್ಸ್​ವೆಲ್​ರನ್ನು ಪಂಜಾಬ್ ತಂಡ ಬರೋಬ್ಬರಿ 10.75 ಕೋಟಿ ರೂ.ಗಳಿಗೆ ಹರಾಜಿನಲ್ಲಿ ಕೊಂಡುಕೊಂಡಿತ್ತು. ಆದರೆ ಅವರಿಂದ ತಂಡಕ್ಕೆ ವಿಶೇಷವಾದ ಇನ್ನಿಂಗ್ಸ್​ ಬಂದಿಲ್ಲ. ಆದರೆ ತಂಡದ ನಾಯಕ ರಾಹುಲ್ ಮಾತ್ರ ಅವರನ್ನು ಬೆಂಬಲಿಸುತ್ತಿದ್ದಾರೆ.

ಮ್ಯಾಕ್ಸ್​ವೆಲ್​ ಇಡೀ ಟೂರ್ನಿಯಲ್ಲಿ ಕಳೆದ ಪಂದ್ಯದಲ್ಲಿ ಮಾತ್ರ 32 ರನ್​ಗಳಿಸಿ ಡೆಲ್ಲಿ ವಿರುದ್ಧ ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದರು. ಈ ಫಾರ್ಮ್​ ಅನ್ನು ಅವರು ಮುಂದುವರಿಸಿದರೆ ಪಡೆದ ಹಣಕ್ಕೆ ಪ್ರತಿಫಲ ನೀಡಿದಂತಾಗುತ್ತದೆ.

ವೆಸ್ಟ್ ಇಂಡೀಸ್​ನ ಶಿಮ್ರಾನ್ ಹೆಟ್ಮೈರ್​ರನ್ನು 7.75 ಕೋಟಿ ರೂ ನೀಡಿ ಖರೀದಿಸಿದೆ. ಆದರೆ ಅವರನ್ನು ತಂಡವೇ ಸರಿಯಾದ ಕ್ರಮಾಂಕದಲ್ಲಿ ಬಳಸಿಕೊಳ್ಳಲು ವಿಫಲವಾಗುತ್ತಿದೆ. ಮೊದಲೆರಡು ಪಂದ್ಯಗಳ ನಂತರ ಹೆಟ್ಮೈರ್​ರನ್ನು ಕೆಳ ಕ್ರಮಾಂಕಕ್ಕೆ ಹಿಂಬಡ್ತಿ ನೀಡಿದೆ. ಇಡೀ ಟೂರ್ನಿಯಲ್ಲಿ ಅವರಿಂದ ಇನ್ನೂ ಒಂದು ಅರ್ಧಶತಕದ ಆಟ ಕಂಡುಬಂದಿಲ್ಲ. ಆದರೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೇವಲ 24 ಎಸೆತಗಳಲ್ಲಿ 45 ರನ್​ಗಳಿಸಿದ್ದರು. ಹೆಟ್ಮೈರ್ ಟೂರ್ನಿಯಲ್ಲಿ 25ರ ಸರಾಸರಿ, 150ರ ಸ್ಟ್ರೈಕ್​ರೇಟ್​ನಲ್ಲಿ ಕೇವಲ 101 ರನ್​ಗಳಿಸಿದ್ದಾರೆ.

8 ಕೋಟಿ ರೂ ನೀಡಿ ನಥನ್ ಕೌಲ್ಟರ್ ನೈಲ್ ಖರೀದಿಸಿರುವ ಹಾಲಿ ಚಾಂಪಿಯನ್ ಮುಂಬೈ, ಅವರನ್ನು ಮೊದಲ 7 ಪಂದ್ಯಗಳಿಂದ ಬೆಂಚ್​ ಕಾಯುವಂತೆ ಮಾಡಿತ್ತು. ಆದರೆ ಇತ್ತೀಚಿನ 2 ಪಂದ್ಯಗಳಲ್ಲಿ ಅವರು ತಂಡಕ್ಕೆ ಬಂದರಾದರೂ 2 ಪಂದ್ಯಗಳಲ್ಲಿ 51ಕ್ಕೆ 1 ಹಾಗೂ 33ರನ್​ ನೀಡಿ ಯಾವುದೇ ವಿಕೆಟ್ ಪಡೆದಿರಲಿಲ್ಲ. ಅವರ ಬೌಲಿಂಗ್​ನಲ್ಲಿ ಮೊನಚು ಕಾಣುತ್ತಿಲ್ಲವಾದ್ದರಿಂದ ಮುಂದಿನ ದಿನಗಳಲ್ಲಿ ಮುಂಬೈ ನೈಲ್​ರೊಂದಿಗೆ ಅಂಟಿಕೊಳ್ಳುತ್ತದೆಯೇ ಅಥವಾ ಮತ್ತೆ ಜೇಮ್ಸ್ ಪ್ಯಾಟಿನ್​ಸನ್​ರನ್ನು ಬಳಿಸಿಕೊಳ್ಳಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

ಕಿಂಗ್ಸ್​ ಇಲೆವೆನ್ ಪಂಜಾಬ್​ ತಂಡ 50 ಲಕ್ಷ ರೂ ಮೂಲಬೆಲೆಯಿದ್ದ ವಿಂಡೀಸ್​ ಬೌಲರ್​ ಶೆಲ್ಡಾನ್ ಕಾಟ್ರೆಲ್​ರನ್ನು ಬರೋಬ್ಬರಿ 8.5 ಕೋಟಿ ರೂ ನೀಡಿ ಖರೀದಿಸಿದೆ. ಆದರೆ ಅವರೂ ಕೂಡ ತಾವೂ ಪಡೆದಿರುವ ಮೌಲ್ಯಕ್ಕೆ ತಕ್ಕ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ.

ಆದರೆ ಇಡೀ ಟೂರ್ನಿಯಲ್ಲಿ ಅಚ್ಚರಿಯ ಬೆಲೆ ಪಡೆದರೂ ತಂಡಕ್ಕೆ ಉತ್ತಮ ಪ್ರದರ್ಶನದ ಮೂಲಕ ನೆರವಾಗಿರುವ ಆಟಗಾರನೆಂದರೆ ಕ್ರಿಸ್ ಮೋರಿಸ್​ ಮಾತ್ರ. ಅವರು 10 ಕೋಟಿ ರೂ ಪಡೆದಿದ್ದರೂ, ಟೂರ್ನಿಯಲ್ಲಿ ಸಿಎಸ್​ಕೆ ವಿರುದ್ಧ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದು, ರಾಜಸ್ಥಾನ್​ ವಿರುದ್ಧ ವಿರುದ್ಧ 4 ವಿಕೆಟ್ ಪಡೆದಿದ್ದರು. ನಿನ್ನೆಯ ಪಂದ್ಯದಲ್ಲಿ ಕೇವಲ 16 ರನ್​ ನೀಡಿ ಒಳ್ಳೆಯ ಎಕಾನಮಿ ಕಾಪಾಡಿಕೊಂಡಿದ್ದಾರೆ. ಆರ್​ಸಿಬಿಯ ದುಬಾರಿ ಖರೀದಿಯಾಗಿದ್ದರೂ ಅದಕ್ಕೆ ತಕ್ಕಂತೆ ಪ್ರದರ್ಶನ ನೀಡುವಲ್ಲಿ ಸಫಲರಾಗಿದ್ದಾರೆ.

ಈ ಟೂರ್ನಿಯ ಮೂಲಕ ಸ್ಟಾರ್​ಗಿರಿಯನ್ನು ನೋಡಿ ಆಟಗಾರರನ್ನು ಖರೀದಿಸಿದರೆ ಏನಾಗುತ್ತದೆ ಎಂದು ಫ್ರಾಂಚೈಸಿಗಳಿಗೆ ಈ ಮೇಲಿನ ಆಟಗಾರರ ಪ್ರದರ್ಶನದಿಂದ ಒಂದು ದೊಡ್ಡ ಪಾಠವಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.