ಮುಂಬೈ: ಚಾರಿಟಿಗೋಸ್ಕರ ಐಪಿಎಲ್ಗೂ ಮುನ್ನ ನಡೆಯಬೇಕಿದ್ದ ಆಲ್ಸ್ಟಾರ್ ಪಂದ್ಯಕ್ಕೆ ಸಮಯ ಹೊಂದಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪಂದ್ಯವನ್ನು ಐಪಿಎಲ್ಗೂ ಮುನ್ನ ನಡೆಸುವ ಬದಲು, ಐಪಿಎಲ್ ನಂತರ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.
ಏಕೈಕ ಆಲ್ಸ್ಟಾರ್ ಪಂದ್ಯ ವಿಳಂಬವಾಗಿರುವ ಕಾರಣಗಳಿಂದಾಗಿ ನಿಗದಿತ ಸಮಯಕ್ಕೆ ನಡೆಸಲು ಸಾಧ್ಯವಾಗುತ್ತಿಲ್ಲ. ಆದರೆ 13ನೇ ಆವೃತ್ತಿಯ ಐಪಿಎಲ್ ಮುಗಿದ ನಂತರ ನಡೆಸಲಾಗುವುದು ಎಂದು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಖಚಿತ ಪಡಿಸಿದ್ದಾರೆ. ಐಪಿಎಲ್ ಮಾರ್ಚ್ 29 ರಂದು ಆರಂಭಗೊಳ್ಳಲಿದ್ದು, ಮೇ 24 ರಂದು ಕೊನೆಗೊಳ್ಳಲಿದೆ.
"ಇದು(ಆಲ್ಸ್ಟಾರ್) ಐಪಿಎಲ್ ಟೂರ್ನಿಯ ನಂತರ ನಡೆಯಲಿದೆ. ನಾವು ಟೂರ್ನಿಯಲ್ಲಿ ಆಟಗಾರರು ನೀಡುವ ಪ್ರದರ್ಶನದ ಮೇಲೆ ಎರಡು ತಂಡಗಳನ್ನ ಆಯ್ಕೆ ಮಾಡಲಾಗುವುದು" ಎಂದು ಪಟೇಲ್ಇಎಸ್ಪಿನ್ಗೆ ಮಾಹಿತಿ ನೀಡಿದ್ದಾರೆ.
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕಳೆದ ತಿಂಗಳು ದೇಣಿಗೆ ಸಂಗ್ರಹಕ್ಕಾಗಿ ಐಪಿಎಲ್ನ 8 ತಂಡಗಳಲ್ಲಿ ಭಾರತದ ದಕ್ಷಿಣ ಹಾಗೂ ಪಶ್ಚಿಮ ಭಾಗದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನ ಸೂಪರ್ ಕಿಂಗ್ಸ್ , ಮುಂಬೈ ಇಂಡಿಯನ್ಸ್, ಸನ್ರೈಸರ್ಸ್ ಹೈದರಾಬಾದ್ ಪ್ರಾಂಚೈಸಿಗಳಿಂದ ಒಂದು ತಂಡ, ಹಾಗೂ ಉತ್ತರ ಹಾಗೂ ಪೂರ್ವ ಭಾರತದ ಭಾಗದ ಪ್ರಾಂಚೈಸಿಗಳಾದ ಕೋಲ್ಕತ್ತಾ ನೈಟ್ ರೈಡರ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್, ಡೆಲ್ಲಿ ಕ್ಯಾಪಿಟಲ್ ರಾಜಸ್ಥಾನ್ ರಾಯಲ್ಸ್ ಪ್ರಾಂಚೈಸಿಗಳಿಂದ ಒಂದು ತಂಡ ಸಿದ್ದಪಡಿಸಿ ಆಲ್ಸ್ಟಾರ್ ಪಂದ್ಯ ಆಯೋಜನೆ ಮಾಡುವುದಾಗಿ ಘೋಷಣೆ ಮಾಡಿದ್ದರು.
ಮಾರ್ಚ್ 29ರಿಂದ 13ನೇ ಆವೃತ್ತಿ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ರನ್ನರ್ ಅಪ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಣಕ್ಕಿಳಿಯಲಿದೆ.