ETV Bharat / sports

ಕೋವಿಡ್​ ಪ್ರೋಟೋಕಾಲ್​ ಮುರಿಯುವ ಧೈರ್ಯ ಮಾಡ್ಬೇಡಿ: ಪ್ಲೇಯರ್ಸ್​ಗೆ ಬಿಸಿಸಿಐ ಎಚ್ಚರಿಕೆ - ಭಾರತೀಯ ಕ್ರಿಕೆಟ್ ಮಂಡಳಿ

13ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್​ ಲೀಗ್​​ ಯುಎಇನಲ್ಲಿ ಸೆಪ್ಟೆಂಬರ್​ 19ರಿಂದ ಆರಂಭಗೊಳ್ಳಲಿದ್ದು, ಇದರ ಮಧ್ಯೆ ಎಲ್ಲ ಪ್ಲೇಯರ್ಸ್​ಗೆ ಬಿಸಿಸಿಐ ಖಡಕ್​ ಸೂಚನೆ ನೀಡಿದೆ.

IPL 13
IPL 13
author img

By

Published : Aug 20, 2020, 9:16 PM IST

ಹೈದರಾಬಾದ್​: ಕಳೆದ ಕೆಲ ದಿನಗಳಿಂದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ಕೊರೊನಾ ವೈರಸ್​ ಹಾವಳಿ ಹೆಚ್ಚಾಗುತ್ತಿದೆ. ಇದರ ಮಧ್ಯೆ ಸೆಪ್ಟೆಂಬರ್​​ 19ರಿಂದ 13ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್​ ಲೀಗ್​​ ಆರಂಭಗೊಳ್ಳಲಿದೆ.

CSK Team
ಚೆನ್ನೈ ಸೂಪರ್​ ಕಿಂಗ್ಸ್​​​ ತಂಡದ ಸದಸ್ಯರು

ಹೀಗಾಗಿ ಭಾರತೀಯ ಕ್ರಿಕೆಟ್​ ಮಂಡಳಿ ಎಲ್ಲ ಫ್ರಾಂಚೈಸಿಗಳ ಪ್ಲೇಯರ್ಸ್‌ಗೆ ಎಚ್ಚರಿಕೆ​ ನೀಡಿದ್ದು, ಯಾವುದೇ ಕಾರಣಕ್ಕೂ ಕೋವಿಡ್​ ಪ್ರೋಟೋಕಾಲ್​ ಮುರಿಯುವ ಧೈರ್ಯ ಮಾಡಬೇಡಿ ಎಂದಿದೆ.

ಐಪಿಎಲ್‌ಗೋಸ್ಕರ ಈಗಾಗಲೇ ಕೆಲವು ತಂಡಗಳು ಈಗಾಗಲೇ ದುಬೈಗೆ ಪ್ರಯಾಣ ಬೆಳೆಸಿದ್ದು, ಮುಂದಿನ ಕೆಲ ದಿನಗಳಲ್ಲಿ ಉಳಿದ ತಂಡಗಳು ಅಲ್ಲಿಗೆ ತೆರಳಲಿವೆ.

IPL
ಇಂಡಿಯನ್​​ ಪ್ರೀಮಿಯರ್​ ಲೀಗ್​

ಐಪಿಎಲ್​​ನಲ್ಲಿ ಭಾಗಿಯಾಗುತ್ತಿರುವ ಆಟಗಾರರು ಕಾಳಜಿ ವಹಿಸುವಂತೆ ಈಗಾಗಲೇ ಫ್ರಾಂಚೈಸಿಗಳ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇದರ ಜತೆಗೆ ಎಲ್ಲ ಪ್ಲೇಯರ್ಸ್​, ಕೋಚ್​​, ಸಹಾಯಕ ಸಿಬ್ಬಂದಿ ಹಾಗೂ ತಂಡದ ಮಾಲೀಕರು ಯಾವುದೇ ಕಾರಣಕ್ಕೂ ಪ್ರೋಟೋಕಾಲ್​ ಬ್ರೇಕ್​ ಮಾಡದಂತೆ ತಿಳಿಸಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.

mumbai indians
ಮುಂಬೈ ಇಂಡಿಯನ್ಸ್​ ಪ್ಲೇಯರ್ಸ್​​

ಪಂದ್ಯಗಳಿಲ್ಲದ ವೇಳೆ ಬೇರೆ ಬೇರೆ ಸ್ಥಳಗಳಲ್ಲಿ ಓಡಾಟ ಮಾಡುವುದಕ್ಕೆ ಸಂಪೂರ್ಣವಾಗಿ ನಿರ್ಬಂಧ ಹೇರಲಾಗಿದೆ. ಬಿಸಿಸಿಐ ಹೊರಡಿಸಿರುವ ಮಾರ್ಗಸೂಚಿಯನ್ನು ಎಲ್ಲರೂ ಪಾಲಿಸಬೇಕು. ಕಳೆದ ತಿಂಗಳು ಇಂಗ್ಲೆಂಡ್​ ತಂಡದ ವೇಗಿ ಜೋಫ್ರಾ ಆರ್ಚರ್​ ಪ್ರೋಟೋಕಾಲ್​ ಬ್ರೇಕ್​ ಮಾಡಿದ್ದರಿಂದ ಎರಡನೇ ಟೆಸ್ಟ್​​ನಿಂದ ಅವರನ್ನು ಕೈಬಿಟ್ಟು ಕ್ವಾರಂಟೈನ್​ ಮಾಡಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.