ETV Bharat / sports

IPL ಸ್ಥಳ ಪರಿಶೀಲನೆ: ಯುಎಇಗೆ ಹಾರಲಿದೆ ಬಿಸಿಸಿಐ ತಂಡ - BCCI team to arrive in UAE later this month

ಚೀನಾದ ವಿವೋ ಕಂಪನಿಯಿಂದ ತೆರವಾಗಿರುವ ಶೀರ್ಷಿಕೆ (Title) ಪ್ರಾಯೋಜಕತ್ವಕ್ಕೆ ಬಿಸಿಸಿಐ ಈಗಾಗಲೇ ಟೆಂಡರ್​ ಕರೆದಿದೆ. ಜಿಯೋ ಅಮೇಜಾನ್​, ಬೈಜುಸ್​, ಟಾಟ್​ ಗ್ರೂಪ್ಸ್​, ಅದಾನಿ ಹಾಗೂ ಪತಂಜಲಿ ಸಂಸ್ಥೆಗಳು ಐಪಿಎಲ್​ ಪ್ರಾಯೋಜಕತ್ವ ಪಡೆಯಲು ಆಸಕ್ತಿ ತೋರಿವೆ. ಆಗಸ್ಟ್​ 18ರಂದು ಅಂತಿಮ​ ಬಿಡ್​ ನಡೆಯಲಿದೆ ಎಂದು ತಿಳಿದು ಬಂದಿದೆ.

ಐಪಿಎಲ್​ 2020
ಐಪಿಎಲ್​ 2020
author img

By

Published : Aug 11, 2020, 5:22 PM IST

ದುಬೈ: 13ನೇ ಆವೃತ್ತಿಯ ಐಪಿಎಲ್​ ಆಯೋಜನೆಗೆ ಸಿದ್ಧವಾಗಿರುವ ಯುಎಇನ ಎಲ್ಲಾ ಮೂರು ಸ್ಥಳಗಳಲ್ಲಿನ ಸೌಲಭ್ಯಗಳ ಸಮೀಕ್ಷೆಗಾಗಿ ಆಗಸ್ಟ್​ ಮೂರನೇ ವಾರ ಯುಎಇಗೆ ಬಿಸಿಸಿಐನ ಉನ್ನತ ದರ್ಜೆಯ ತಂಡ ಭೇಟಿ ನೀಡಲಿದೆ.

ಗಲ್ಫ್​ ಟೈಮ್ಸ್​ನ ವರದಿಯ ಪ್ರಕಾರ, ದುಬೈಗೆ ತೆರಳಲಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ತಂಡದಲ್ಲಿ ಐಪಿಎಲ್​ ಅಧ್ಯಕ್ಷ ಬ್ರಿಜೇಶ್​ ಪಟೇಲ್​, ಬಿಸಿಸಿಐನ ಮಧ್ಯಂತರ ಸಿಇಒ ಹೇಮಂಗ್​ ಅಮೀನ್​ ಮತ್ತು ಐಪಿಎಲ್​ನ ಸಿಒಒ ಇದ್ದಾರೆ. ಈ ವೇಳೆ ಆರು ದಿನಗಳ ಕಾಲ ಹೋಟೆಲ್‌ನಲ್ಲಿ ಕ್ವಾರಂಟೈನ್ ಆಗಲಿದ್ದು, ನಂತರ ತಮ್ಮ ಕಾರ್ಯ ಚಟುವಟಿಕೆ ಆರಂಭಿಸಲಿದ್ದಾರೆ ಎಂಬ ಮಾಹಿತಿ ದೊರೆತಿದೆ.

ಶೀರ್ಷಿಕೆ  ಪ್ರಾಯೋಜಕತ್ವಕ್ಕಾಗಿ ಪೈಪೋಟಿಯಲ್ಲಿರುವ ಕಂಪನಿಗಳು
ಶೀರ್ಷಿಕೆ ಪ್ರಾಯೋಜಕತ್ವ ಪಡೆಯಲು ಪೈಪೋಟಿಯಲ್ಲಿರುವ ಕಂಪನಿಗಳು

ಭಾರತದಲ್ಲಿ ಕೋವಿಡ್​-19 ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಪ್ರಸಕ್ತ ವರ್ಷದ ಐಪಿಎಲ್​ ಟೂರ್ನಿಯನ್ನು ಯುಎಇನಲ್ಲಿ ಆಯೋಜಿಸಲು ಬಿಸಿಸಿಐಗೆ ಗ್ರೀನ್ ಸಿಗ್ನಲ್​ ನೀಡಿದೆ.

ಈಗಾಗಲೆ ಬಿಸಿಸಿಐ ವಿವೋದಿಂದ ತೆರವಾಗಿರುವ ಶೀರ್ಷಿಕೆ ಪ್ರಾಯೋಜಕತ್ವಕ್ಕೂ ಟೆಂಡರ್​ ಕರೆದಿದೆ. ಜಿಯೋ ಅಮೇಜಾನ್​, ಬೈಜುಸ್​, ಟಾಟ್​ ಗ್ರೂಪ್ಸ್​ , ಅದಾನಿ ಗ್ರೂಪ್ಸ್​ ಹಾಗೂ ಪತಂಜಲಿ ಐಪಿಎಲ್​ ಪ್ರಾಯೋಜಕತ್ವ ಪಡೆಯಲು ಆಸಕ್ತಿ ತೋರಿಸುತ್ತಿವೆ. ಆಗಸ್ಟ್​ 18ರಂದು ಫೈನಲ್​ ಬಿಡ್​ ನಡೆಯಲಿದೆ ಎಂದು ತಿಳಿದುಬಂದಿದೆ.

ಈ ಸಲದ​ ಟೂರ್ನಿ ಅಬುದಾಬಿ, ಶಾರ್ಜಾ ಹಾಗೂ ದುಬೈನಲ್ಲಿ ಸೆಪ್ಟೆಂಬರ್​ 19ರಿಂದ ನವೆಂಬರ್​ 10ರವರೆಗೆ ನಡೆಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.