ETV Bharat / sports

3ನೇ ಪಂದ್ಯಕ್ಕೂ ಮುನ್ನ ಪಾಕ್​ಗೆ ಆಘಾತ : ಸ್ಟಾರ್ ಆಲ್​ರೌಂಡರ್​ ಪ್ರವಾಸದಿಂದಲೇ ಔಟ್​! - ಶದಾಬ್ ಖಾನ್​ಗೆ ಗಾಯ

ವಿಶ್ರಾಂತಿ ಅಗತ್ಯವಿರುವುದರಿಂದ ಶದಾಬ್ ಖಾನ್ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಪಾಕ್‌ ತಂಡದ ಭಾಗವಾಗುವುದರ ಬಗ್ಗೆ ಯಾವುದೇ ಖಚಿತ ಮಾಹಿತಿಯಿಲ್ಲ. ಪ್ರಸ್ತುತ ಸರಣಿಯಲ್ಲಿ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದಿವೆ. ಏಪ್ರಿಲ್ 7ರಂದು ಕೊನೆಯ ಹಾಗೂ ಸರಣಿ ನಿರ್ಣಾಯಕ ಪಂದ್ಯ ನಡೆಯಲಿದೆ..

ಶದಾಬ್ ಖಾನ್
ಶದಾಬ್ ಖಾನ್
author img

By

Published : Apr 5, 2021, 9:41 PM IST

ಜೋಹನ್ಸ್​ ಬರ್ಗ್ ​: ಪಾಕಿಸ್ತಾನ ಆಲ್​ರೌಂಡರ್​ ಶದಾಬ್​ ಖಾನ್ ಪಾದದ ನೋವಿನಿಂದ ಬಳಲುತ್ತಿದ್ದಾರೆ. ಪ್ರವಾಸ ಕೊನೆಯ ಏಕದಿನ ಮತ್ತು ಟಿ20 ಸರಣಿಗೆ ಅಲಭ್ಯರಾಗಿದ್ದಾರೆಂದು ಪಿಸಿಬಿ ಪ್ರಕಟಣೆ ಹೊರಡಿಸಿದೆ. ಮೊದಲ ಏಕದಿನ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಶದಾಬ್​ 2ನೇ ಪಂದ್ಯದ ವೇಳೆ ಗಾಯದ ಸಮಸ್ಯೆ ಎದುರಿಸಿದ್ದರು.

"ಭಾನುವಾರ ನಡೆದ 2ನೇ ಪಂದ್ಯದ ನಂತರ ನಡೆಸಿದ ಎಕ್ಸ್‌ರೇನಲ್ಲಿ ಯಾವುದೇ ಸ್ಥಳಾಂತರ ಅಥವಾ ಮುರಿತ ಕಂಡು ಬಂದಿಲ್ಲದಿದ್ದರೂ, ಕಾಲು ಬೆರಳುಗಳ ಜಾಯಿಂಟ್​ಗಳಿಗೆ ತೊಂದರೆಯಾಗಿರುವುದು ಕಂಡು ಬಂದಿದೆ. ಹಾಗಾಗಿ, ಈ ಗಾಯದಿಂದ ಚೇತರಿಸಿಕೊಳ್ಳಲು ಶದಾಬ್‌ಗೆ ನಾಲ್ಕು ವಾರಗಳು ಬೇಕಾಗಿದೆ" ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್​ ಮಾಹಿತಿ ನೀಡಿದೆ.

ವಿಶ್ರಾಂತಿ ಅಗತ್ಯವಿರುವುದರಿಂದ ಶದಾಬ್ ಖಾನ್ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಪಾಕ್‌ ತಂಡದ ಭಾಗವಾಗುವುದರ ಬಗ್ಗೆ ಯಾವುದೇ ಖಚಿತ ಮಾಹಿತಿಯಿಲ್ಲ. ಪ್ರಸ್ತುತ ಸರಣಿಯಲ್ಲಿ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದಿವೆ. ಏಪ್ರಿಲ್ 7ರಂದು ಕೊನೆಯ ಹಾಗೂ ಸರಣಿ ನಿರ್ಣಾಯಕ ಪಂದ್ಯ ನಡೆಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.