ETV Bharat / sports

ಮಹಿಳೆಯರ ವಿಶ್ವಕಪ್​: ಸೆಮಿಫೈನಲ್​ಗೂ ಮುನ್ನ ಹಾಲಿ ಚಾಂಪಿಯನ್​ ಆಸ್ಟ್ರೇಲಿಯಾಗೆ ಆಘಾತ - ಹಾಲಿ ಚಾಂಪಿಯನ್​ ಆಸ್ಟ್ರೇಲಿಯಾ

ಕಿವೀಸ್​ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್​ ನಡೆಸಿದ್ದ ಪೆರ್ರಿ ಫೀಲ್ಡಿಂಗ್​ ವೇಳೆ ಸ್ನಾಯು ಸೆಳೆತಕ್ಕೊಳಗಾಗಿ ಪಂದ್ಯದಿಂದ ಅರ್ಧದಲ್ಲೇ ಹೊರ ನಡೆದಿದ್ದರು

Australian all rounder perry
ಎಲಿಸ್​ ಪೆರ್ರಿ
author img

By

Published : Mar 2, 2020, 8:30 PM IST

ಮೆಲ್ಬೋರ್ನ್​: ನ್ಯೂಜಿಲ್ಯಾಂಡ್​ ವಿರುದ್ಧದ ಕೊನೆಯ ಲೀಗ್​ ಪಂದ್ಯದ ವೇಳೆ ಮಂಡಿರಜ್ಜು ಗಾಯಕ್ಕೆ ತುತ್ತಾಗಿರುವ ಆಸ್ಟ್ರೇಲಿಯಾದ ಸ್ಟಾರ್​ ಆಲ್​ರೌಂಡರ್​ ಎಲೆಸ್​ ಪೆರ್ರಿ ಸೆಮಿಫೈನಲ್​ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ.

ಕಿವೀಸ್​ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್​ ನಡೆಸಿದ್ದ ಪೆರ್ರಿ ಫೀಲ್ಡಿಂಗ್​ ವೇಳೆ ಸ್ನಾಯು ಸೆಳೆತಕ್ಕೊಳಗಾಗಿ ಪಂದ್ಯದಿಂದ ಅರ್ಧದಲ್ಲೇ ಹೊರ ನಡೆದಿದ್ದರು. ಆದರೆ ಈ ಪಂದ್ಯವನ್ನು ಆಸೀಸ್​ 4 ರನ್​ಗಳಿಂದ ಗೆದ್ದು ಸೆಮಿಫೈನಲ್​ ಪ್ರವೇಶಿಸಿವಲ್ಲಿ ಯಶಸ್ವಿಯಾಗಿತ್ತು.

ಗಾಯಗೊಂಡು ಮೈದಾನದಲ್ಲೇ ಕುಸಿದು ಬಿದ್ದಿದ್ದ ಪೆರ್ರಿ ಸೆಮಿಫೈನಲ್​ನಲ್ಲಿ ಕಣಕ್ಕಿಳಿಯುವ ಸಾಧ್ಯತೆ ಕಡಿಮೆ ಎಂದಿ ಕ್ರಿಕೆಟ್ ಆಸ್ಟ್ರೇಲಿಯಾ ವೆಬ್​ಸೈಟ್​ ವರದಿ ಮಾಡಿದೆ. ಗಾಯಕ್ಕೊಳಗಾಗುವ ಮುನ್ನ ಪೆರ್ರಿ 15 ಎಸೆತಗಳಲ್ಲಿ 21 ರನ್​ ಹಾಗೂ 2 ಓವರ್​ ಬೌಲಿಂಗ್ ಕೂಡ ಮಾಡಿದ್ದರು.

ಪೆರ್ರಿ ಅವರು ಮಹಿಳೆಯರ ಬಿಗ್​ಬ್ಯಾಶ್​ನಲ್ಲಿ ಫೀಲ್ಡಿಂಗ್ ವೇಳೆ ಬಲ ಬುಜದ ಗಾಯಕ್ಕೆ ತುತ್ತಾಗಿ ಟೂರ್ನಿಯಿಂದಲೇ ಹೊರಬಿದ್ದಿದ್ದರು. ನಂತರ ಫಿಟ್​ನೆಸ್​ ಪರೀಕ್ಷೆಯಲ್ಲಿ ಪಾಸ್​ ಮಾಡಿ ರಾಷ್ಟ್ರೀಯ ತಂಡಕ್ಕೆ ಮರಳಿದ್ದರು. ಇದೀಗ ಮತ್ತೆ ಗಾಯಗೊಂಡಿರುವುದು ನಿಜಕ್ಕೂ ಹಾಲಿ ಚಾಂಪಿಯನ್ನರಿಗೆ ಭಾರಿ ಆಘಾತವಾಗಿದೆ. ಪೆರ್ರಿ ಬದಲು ಡೆಲಿಸಾ ಕಿಮ್ಮನ್ಸ್​ 11ರ ಬಳಗ ಸೇರಿಕೊಳ್ಳುವ ಸಾಧ್ಯತೆ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.