ಮುಂಬೈ: ಭಾರತ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯಾ ರಹಾನೆ ಟ್ವಿಟರ್ನಲ್ಲಿ ನಡೆದ ಪ್ರಶ್ನೋತ್ತರಗಳ ಸಂದರ್ಭದಲ್ಲಿ ಅವರ ವೃತ್ತಿ ಜೀವನದ ಶ್ರೇಷ್ಠ ಇನ್ನಿಂಗ್ಸ್‌ಗಳನ್ನು ತಿಳಿಸಿದ್ದಾರೆ.
2014ರಲ್ಲಿ ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ಟೆಸ್ಟ್ನಲ್ಲಿ ಸಿಡಿಸಿದ 103 ರನ್ ಹಾಗೂ 2015ರ ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸಿಡಿಸಿದ 79 ರನ್ ಅವರ ವೃತ್ತಿ ಜೀವನದ ಅತ್ಯಂತ ಶ್ರೇಷ್ಠ ಇನ್ನಿಂಗ್ಸ್ಗಳು ಎಂದು ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಇಂಗ್ಲೆಂಡ್ ತಂಡದ ಅನುಭವಿ ಜೇಮ್ಸ್ ಆ್ಯಂಡರ್ಸನ್ ಅವರ ಬೌಲಿಂಗ್ಗೆ ಇಡೀ ತಂಡದ ಆಟಗಾರರು ರನ್ಗಳಿಸಲು ಪರದಾಡಿ ವಿಕೆಟ್ ಕಳೆದುಕೊಳ್ಳುತ್ತಿದ್ದರು. ಆದರೆ ಆ ಸಂದರ್ಭದಲ್ಲಿ ರಹಾನೆ ಆಕರ್ಷಕ ಶತಕಗಳಿಸಿದ್ದರು.
ರಹಾನೆ ಭುವನೇಶ್ವರ್ ಕುಮಾರ್ ಜೊತೆಗೂಡಿ 8ನೇ ವಿಕೆಟ್ಗೆ ಜೊತೆಯಾಟದಲ್ಲಿ 90 ರನ್ಗಳಿಸಿದ್ದರು. ಕೊನೆಗೆ ಭಾರತ ತಂಡ ಲಾರ್ಡ್ಸ್ನಲ್ಲಿ 28 ವರ್ಷಗಳ ಬಳಿಕ ಐತಿಹಾಸಿಕ ಟೆಸ್ಟ್ ಪಂದ್ಯ ಗೆದ್ದು ದಾಖಲೆ ಬರೆದಿತ್ತು.
ಒಂದು ವರ್ಷದ ನಂತರ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ವಿಶ್ವಕಪ್ನಲ್ಲಿ ದಕ್ಷಿಣ ಅಫ್ರಿಕಾ ವಿರುದ್ಧದ ಪಂದ್ಯದಲ್ಲಿ ಧವನ್ ಜೊತೆಗೂಡಿ 1256 ರನ್ಗಳ ಜೊತೆಯಾಟ ನಡೆಸಿದ್ದರು. ಆ ಪಂದ್ಯದಲ್ಲಿ ರಹಾನೆ 60 ಎಸೆತಗಳಿಗೆ 79 ರನ್. ಧವನ್ 137 ರನ್ಗಳಿಸಿದ್ದರು. ಭಾರತ 307 ರನ್ಗಳಿಸಿತ್ತು. ದಕ್ಷಿಣ ಆಫ್ರಿಕಾ ತಂಡ ಭಾರತ ತಂಡದ ಬೌಲರ್ಗಳ ದಾಳಿಗೆ ತತ್ತರಿಸಿ ಕೇವಲ 177 ರನ್ಗಳಿಗೆ ಆಲೌಟ್ ಆಗುವ ಮೂಲಕ ಭಾರತದ ವಿರುದ್ಧ 130 ರನ್ಗಳ ಸೋಲು ಕಂಡಿತ್ತು.
ರಹಾನೆ ಕೋವಿಡ್ 19 ವಿರುದ್ಧ ಹೋರಾಟಕ್ಕೆ 10 ಲಕ್ಷ ದೇಣಿಗೆ ನೀಡಿರುವ ರಹಾನೆ ಟ್ವಿಟರ್ನಲ್ಲಿ ಅಭಿಮಾನಿಗಳಿಗೆ ಜಾಗೃತಿ ಮೂಡಿಸಿದರು.