ETV Bharat / sports

ಭಾರತ - ಇಂಗ್ಲೆಂಡ್​ ಟೆಸ್ಟ್​ ಸರಣಿ.. ತಂಡವನ್ನು ಕೋವಿಡ್​ ಟೆಸ್ಟ್​ಗೆ ಒಳಪಡಿಸಿದ ಬಿಸಿಸಿಐ - ಭಾರತ ಇಂಗ್ಲೆಂಡ್​ ಟೆಸ್ಟ್​ ಸರಣಿ ಸುದ್ದಿ

ಭಾರತ ಮತ್ತು ಇಂಗ್ಲೆಂಡ್​ ನಡುವಿನ ಟೆಸ್ಟ್​ ಆರಂಭಕ್ಕೂ ಮುನ್ನ ಭಾರತ ತಂಡದ ಕ್ರಿಕೆಟ್​ ಆಟಗಾರರಿಗೆ ಕೋವಿಡ್​ ಟೆಸ್ಟ್​ ಒಳಪಡಿಸಿದೆ.

IND vs ENG  ENG vs IND  BCCI  BCCI latest news  Indian Cricket Team  BCCI allows families during hard quarantine  Indian players clear first of 3 COVID 19 tests,  ಭಾರತ ಇಂಗ್ಲೆಂಡ್​ ಟೆಸ್ಟ್​ ಸರಣಿ  ಭಾರತ ಇಂಗ್ಲೆಂಡ್​ ಟೆಸ್ಟ್​ ಸರಣಿ ಸುದ್ದಿ  ತಂಡವನ್ನು ಕೋವಿಡ್​ ಟೆಸ್ಟ್​ಗೆ ಒಳಪಡಿಸಿದ ಬಿಸಿಸಿಐ
ಸಂಗ್ರಹ ಚಿತ್ರ
author img

By

Published : Jan 29, 2021, 11:02 AM IST

ಚೆನ್ನೈ: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿ ಫೆಬ್ರವರಿ 5 ರಿಂದ ಪ್ರಾರಂಭವಾಗಲಿದೆ. ಇದಕ್ಕೂ ಮೊದಲು ಭಾರತೀಯ ಕ್ರಿಕೆಟ್​ ಆಟಗಾರರು ಕೋವಿಡ್​ ಟೆಸ್ಟ್​ಗೆ ಒಳಗಾದರು.

ಇಂಗ್ಲೆಂಡ್ ವಿರುದ್ಧ ಮುಂಬರುವ ಟೆಸ್ಟ್ ಸರಣಿಯ ಮೊದಲು ಫೆಬ್ರವರಿ 2ರಿಂದ ಅಭ್ಯಾಸವನ್ನು ಪ್ರಾರಂಭಿಸಲಿರುವ ಟೀಮ್ ಇಂಡಿಯಾ ಇನ್ನೂ ಎರಡು ಕೋವಿಡ್​ ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ. ಈಗ ಎಲ್ಲ ಆಟಗಾರರಿಗೆ ನಡೆಸಿರುವ ಆರ್​ಟಿ ಪಿಸಿಆರ್​ ಕೋವಿಡ್​ ಟೆಸ್ಟ್​ ವರದಿ ನೆಗೆಟಿವ್​ ಬಂದಿದೆ.

ಭಾರತೀಯ ಕ್ರಿಕೆಟ್​ ತಂಡ ಈಗಾಗಲೇ ಚೆನ್ನೈ ತಲುಪಿದ್ದು, ಎರಡೂ ತಂಡಗಳು ಲೀಲಾ ಪ್ಯಾಲೇಸ್ ಹೋಟೆಲ್‌ನಲ್ಲಿ ಉಳಿದುಕೊಂಡಿವೆ.

ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧಿಕಾರಿಯೊಬ್ಬರು ಗೌಪ್ಯತೆಯ ಸ್ಥಿತಿಯ ಕುರಿತು ಮಾತನಾಡಿ, ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಐಪಿಎಲ್ ಬಯೋ ಬಬಲ್‌ನಂತೆಯೇ ಇದೆ. ನಮ್ಮ ಆಟಗಾರರು ಈಗಾಗಲೇ ಆರ್‌ಟಿ ಪಿಸಿಆರ್ ಪರೀಕ್ಷೆಗೊಳಪಟ್ಟಿದ್ದಾರೆ. ಇದಾದ ಬಳಿಕ ಮತ್ತೆರೆಡು ಕೋವಿಡ್​ ಪರೀಕ್ಷೆಗೆ ಒಳಪಡಬೇಕಾಗಿದೆ. ಈಗ ಸದ್ಯ ಆಟಗಾರರೆಲ್ಲರೂ ತಮ್ಮ- ತಮ್ಮ ಕೊಠಡಿಯಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಹೇಳಿದ್ದಾರೆ.

ಆಟಗಾರರು ತಮ್ಮ ಕುಟುಂಬಗಳನ್ನು ತಮ್ಮೊಂದಿಗೆ ಇಟ್ಟುಕೊಳ್ಳಲು ಬಿಸಿಸಿಐ ಅವಕಾಶ ಮಾಡಿಕೊಟ್ಟಿದೆ. ಏಕೆಂದರೆ ಅವರು ಐಸೋಲೇಷನ್​ ಸಮಯದಲ್ಲಿ ಏಕಾಂತವಾಗಿ ಉಳಿಯಬೇಕಾಗಬಹುದು. ಹೀಗಾಗಿ ಕುಟುಂಬಗಳನ್ನು ಅವರ ಜೊತೆ ಇರಲು ಅವಕಾಶ ಮಾಡಿಕೊಡಲಾಗಿದೆ.

ಹೋಟಲ್​ಗೆ ಉಪನಾಯಕ ಅಜಿಂಕ್ಯ ರಹಾನೆ, ಹಿರಿಯ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ, ವಿಕೆಟ್‌ಕೀಪರ್ ವೃದ್ಧಿಮಾನ್ ಸಹಾ ಮತ್ತು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಕುಟುಂಬಗಳೊಂದಿಗೆ ಆಗಮಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.