ನವದೆಹಲಿ : ಭಾರತ ತಂಡ ಆಸ್ಟ್ರೇಲಿಯಾ ನೆಲದಲ್ಲಿ ಆಸೀಸ್ ತಂಡವನ್ನು 2-1ರಲ್ಲಿ ಮಣಿಸಿ ಬಾರ್ಡರ್ ಗವಾಸ್ಕರ್ ಸರಣಿ ಗೆದ್ದಿದೆ. ಅದರಲ್ಲಿ ಆಸೀಸ್ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ಬ್ರಿಸ್ಬೇನ್ನ ಗಬ್ಬಾದಲ್ಲಿ ಕಾಂಗರೂಗಳನ್ನು ಮಣಿಸಿ ಇತಿಹಾಸ ಬರೆದ ಟೀಂ ಇಂಡಿಯಾಗೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಭಿನಂದಿಸಿದ್ದಾರೆ.
ಮಂಗಳವಾರ ಗಬ್ಬಾದಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಮತ್ತು ಶುಭಮನ್ ಗಿಲ್ ಆಟ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 3 ವಿಕೆಟ್ಗಳ ರೋಚಕ ಜಯ ಸಾಧಿಸಿತ್ತು.
"ಬ್ರಿಸ್ಬೇನ್‌ನಲ್ಲಿ ನಿಮ್ಮ ಐತಿಹಾಸಿಕ ಮತ್ತು ಭವ್ಯವಾದ ವಿಜಯೋತ್ಸವವನ್ನು ಲಕ್ಷಾಂತರ ಭಾರತೀಯರಂತೆ ನಾನು ಕೂಡ ಸಂಭ್ರಮಿಸುತ್ತೇನೆ ಮತ್ತು ತುಂಬಾ ಹೆಮ್ಮೆ ಪಡುತ್ತೇನೆ. ಬಲಿಷ್ಠ ಆಸ್ಟ್ರೇಲಿಯಾ ತಂಡದ ವಿರುದ್ಧ ನಿಮ್ಮ ಸಾಧನೆ ಭಾರತಕ್ಕೆ ವೈಭವವನ್ನು ತಂದುಕೊಟ್ಟಿದೆ. ಅಲ್ಲದೆ ಟೀಂ ಇಂಡಿಯಾ ಆಟಗಾರರ ಅದ್ಭುತ ಗುಣಮಟ್ಟದ ಪ್ರದರ್ಶನ ಇಡೀ ವಿಶ್ವದ ಗಮನ ಸೆಳೆದಿದೆ" ಎಂದು ಸೋನಿಯಾ ಗಾಂಧಿ ಬಿಸಿಸಿಐಗೆ ಪತ್ರ ಬರೆದು ಅಭಿನಂದಿಸಿದ್ದಾರೆ.
ಆಸ್ಟ್ರೇಲಿಯಾವು 30 ವರ್ಷಗಳಿಂದ ಟೆಸ್ಟ್ ಪಂದ್ಯವನ್ನು ಕಳೆದುಕೊಂಡಿಲ್ಲದ ಬ್ರಿಸ್ಬೇನ್‌ನಲ್ಲಿ ಭಾರತೀಯ ತಂಡದ ಸಾಧನೆ ಅಮೋಘವಾಗಿದೆ. ಅಲ್ಲಿ ಕ್ವಾರಂಟೈನ್, ಜನಾಂಗೀಯ ನಿಂದನೆಯಂತಹ ಕಠಿಣ ಪರಿಸ್ಥಿತಿಗಳನ್ನು ಎದುರಿಸಿದ್ದೀರಿ. ಇದರ ಮಧ್ಯೆ ನೀವು ಪ್ರದರ್ಶಿಸಿದ ಹೋರಾಟದ ಮನೋಭಾವಕ್ಕೆ ಇಡೀ ದೇಶವೇ ನಿಮ್ಮ ಬಗ್ಗೆ ಅಪಾರ ಗೌರವ ತೋರುವಂತೆ ಮಾಡಿದೆ. ನಿಮ್ಮ ಆಟ ನಮಗೆ ಸಂತೋಷ ಮತ್ತು ಭರವಸೆ ಮೂಡಿಸಿದೆ" ಎಂದು ಪತ್ರದ ಮೂಲಕ ಸೋನಿಯಾ ಗಾಂಧಿ ತಿಳಿಸಿದ್ದಾರೆ.
ಇದನ್ನೂ ಓದಿ- ಸೋಲುತ್ತೇವೆಂಬ ಭಯವೇ ಆಸೀಸ್ ಸೋಲಿಗೆ ಕಾರಣ: ಮೈಕಲ್ ಕ್ಲಾರ್ಕ್