ETV Bharat / sports

ಹರಿಣಗಳ ವಿರುದ್ಧ 2ನೇ ಟಿ20 ಪಂದ್ಯದಲ್ಲಿ ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಕೊಹ್ಲಿ... ಅವಕಾಶವಂಚಿತರಾದ ಕನ್ನಡಿಗರು! - ಮೊಹಾಲಿ

ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಟಾಸ್​ ಗೆದ್ದ ವಿರಾಟ್​ ಕೊಹ್ಲಿ ಬೌಲಿಂಗ್​ ಆಯ್ದುಕೊಂಡಿದ್ದಾರೆ. ಈ ಪಂದ್ಯದಲ್ಲಿ ಕನ್ನಡಿಗರಾದ ರಾಹುಲ್​-ಮನೀಶ್​ ಅವರನ್ನು ತಂಡಕ್ಕೆ ಆಯ್ಕೆಗೆ ಪರಿಗಣಿಸಿಲ್ಲ.

India vs South Africa
author img

By

Published : Sep 18, 2019, 6:55 PM IST

ಮೊಹಾಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ 2ನೇ ಪಂದ್ಯದಲ್ಲಿ ಟಾಸ್​ ಗೆದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ.

ಮೊದಲ ಟಿ20 ಪಂದ್ಯ ಧರ್ಮಶಾಲದಲ್ಲಿ ಮಳೆಗಾಹುತಿಯಾಗಿದ್ದರಿಂದ ಎರಡೂ ತಂಡಗಳಿಗೂ ಸರಣಿ ಗೆಲ್ಲಲು ಎರಡು ಪಂದ್ಯಗಳನ್ನು ಗೆಲ್ಲಬೇಕಿದೆ. ಈ ನಿಟ್ಟಿನಲ್ಲಿ ಸ್ಪಿನ್​ ಸ್ನೇಹಿ ಪಿಚ್​ ಆದ್ದರಿಂದ ಟಾಸ್​ ಗೆದ್ದ ಕೂಡಲೆ ಕೊಹ್ಲಿ ಬೌಲಿಂಗ್​ ಆಯ್ಕೆ ಮಾಡಿದ್ದಾರೆ.

ಈ ಪಂದ್ಯದಲ್ಲಿ ಭಾರತ ತಂಡ ಬ್ಯಾಟಿಂಗ್​ ವಿಭಾಗದಲ್ಲಿ ರೋಹಿತ್​, ಕೊಹ್ಲಿ, ಧವನ್​,ಅಯ್ಯರ್ ರಿಷಭ್​ ಪಂತ್​ ಇದ್ದರೆ ಆಲ್​ರೌಂಡರ್​ ವಿಭಾಗದಲ್ಲಿ ಹಾರ್ದಿಕ್​ ಪಾಂಡ್ಯ ತಂಡಕ್ಕೆ ಮರಳಿದ್ದಾರೆ. ಉಳಿದಂತೆ ಜಡೇಜಾ, ವಾಷಿಂಗ್ಟನ್​ ಸುಂದರ್​, ದೀಪಕ್​ ಚಹಾರ್​, ಕೃನಾಲ್​ ಪಾಂಡ್ಯ ಹಾಗೂ ನವದೀಪ್​ ಸೈನಿ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಆದರೆ ಕನ್ನಡಿಗರಾದ ಮನೀಶ್​ ಪಾಂಡೆ, ಕೆಎಲ್​ ರಾಹುಲ್​ ತಂಡಕ್ಕೆ ಪರಿಗಣಿಸಲಾಗಿಲ್ಲ. ​

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.