ನವದೆಹಲಿ: ನಾಯಕ ವಿರಾಟ್ ಕೊಹ್ಲಿ ಶತಕದ (120) ಬಲದಿಂದ ಮತ್ತು ವೇಗಿ ಭುವನೇಶ್ವರ್ ಮಾರಕ ಬೌಲಿಂಗ್ (31ಕ್ಕೆ 4) ದಾಳಿಯಿಂದ ವೆಸ್ಟ್ ಇಂಡೀಸ್ 59 ರನ್ಗಳ ಅಂತರದಿಂದ ಭಾರತಕ್ಕೆ ಶರಣಾಯಿತು. ಈ ಮೂಲಕ 1-0 ಸರಣಿ ಮುನ್ನಡೆ ಸಾಧಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಆರಂಭಿಕ ಆಘಾತ ಅನುಭವಿಸಿತು. ಆರಂಭಿಕರಾದ ಶಿಖರ್ ಧವನ್ (2) ಮತ್ತು ರೋಹಿತ್ ಶರ್ಮಾ (18) ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ನಂತರ ರಿಷಭ್ ಪಂತ್ ಕೂಡ 20 ರನ್ ಗಳಿಸಲಷ್ಟೇ ಶಕ್ತರಾದರು.
300 ಸರ್ದಾರನಿಗೆ ಮತ್ತೊಂದು ಗರಿ... ಲಾರಾ ದಾಖಲೆ ಸರಿಗಟ್ಟಿದ ಕ್ರಿಸ್ ಗೇಲ್....!
103 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಇಂಡಿಯಾಗೆ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಚೇತರಿಕೆ ನೀಡಿದರು. ಇಬ್ಬರೂ 4ನೇ ವಿಕೆಟ್ಗೆ 125 ರನ್ ಪೇರಿಸಿದರು. ತಂಡದ ಮೊತ್ತ 226 ರನ್ ಆಗಿದ್ದಾಗ 120 ರನ್ ಗಳಿಸಿದ್ದ ಕೊಹ್ಲಿ ಔಟಾದರು. ನಂತರ ಅಯ್ಯರ್ 71, ಕೇದಾರ್ ಜಾಧವ್ 16 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ರವೀಂದ್ರ ಜಡೆಜಾ 16 ರನ್ ಗಳಿಸಿ ಅಜೇಯರಾಗುಳಿದರು. ಕೊಹ್ಲಿಯ 42ನೇ ಶತಕ ಹಾಗೂ ಅಯ್ಯರ್ ಅರ್ಧಶತಕದ (71) ನೆರವಿನಿಂದ ಟೀಂ ಇಂಡಿಯಾ 2ನೇ ಏಕದಿನ ಪಂದ್ಯದಲ್ಲಿ 7 ವಿಕೆಟ್ ಕಳೆದುಕೊಂಡು ವಿಂಡೀಸ್ಗೆ 280 ರನ್ಗಳ ಗುರಿ ನೀಡಿತು.
-
Superb performance by #TeamIndia as they take a 1-0 lead in the 3-match ODI series 🇮🇳🇮🇳 #WIvIND pic.twitter.com/ujClgsltS7
— BCCI (@BCCI) August 11, 2019 " class="align-text-top noRightClick twitterSection" data="
">Superb performance by #TeamIndia as they take a 1-0 lead in the 3-match ODI series 🇮🇳🇮🇳 #WIvIND pic.twitter.com/ujClgsltS7
— BCCI (@BCCI) August 11, 2019Superb performance by #TeamIndia as they take a 1-0 lead in the 3-match ODI series 🇮🇳🇮🇳 #WIvIND pic.twitter.com/ujClgsltS7
— BCCI (@BCCI) August 11, 2019
ಇಂಡಿಯಾ ನೀಡಿದ್ದ ಗುರಿ ಬೆನ್ನಟ್ಟಲು ಮುಂದಾದ ಕೆರಿಬಿಯನ್ ಬ್ಯಾಟ್ಸ್‌ಮನ್‌ಗಳಿಗೆ ಇಂಡಿಯಾ ಬೌಲರ್‌ಗಳು ಆರಂಭದಲ್ಲೇ ಆಘಾತ ನೀಡಿದರು. ಪವರ್ ಪ್ಲೇನಲ್ಲಿಯೇ 11 ರನ್ಗಳಿಸಿದ್ದ ದೈತ್ಯ ಕ್ರೀಸ್ಗೇಲ್ರನ್ನು ಭುವಿ ಬೌಲಿಂಗ್ನಲ್ಲಿ ಎಲ್ಡಬ್ಲ್ಯೂ ಆದರು. ಬಳಿಕ ಶೈ ಹೋಪ್ (5) ರನ್ ಹೆಚ್ಚು ರನ್ಗಳಿಸುವಲ್ಲಿ ವಿಫಲರಾದರು. ಈ ವೇಳೆ ಮಳೆ ಸುರಿದ ಪರಿಣಾಮ ಓವರ್ಗತಿಯನ್ನು 46ಕ್ಕೆ ಇಳಿಸಿ 270 ರನ್ಗಳ ಟಾರ್ಗೆಟ್ ನಿಗದಿಪಡಿಸಲಾಯಿತು. ಮತ್ತೆ ಪಂದ್ಯ ಆರಂಭವಾದ ಬೆನ್ನಲ್ಲೇ ಶಿಮ್ರಾನ್ ಹೆಟ್ಮಾಯರ್ (18) ಕೂಡ ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಕೆರಿಬಿಯನ್ನರ ವಿರುದ್ಧ 26 ವರ್ಷಗಳ ಹಿಂದಿನ ದಾಖಲೆ ಮುರಿದ ವಿರಾಟ್!
ಬಳಿಕ ಆರಂಭಿಕ ಎವಿನ್ ಲೆವಿಸ್ ಅರ್ಧಶತಕ (65) ಮತ್ತು ನಿಕೋಲಸ್ ಪೂರನ್ (42) ತಂಡಕ್ಕೆ ಸ್ಪಲ್ಪ ಚೇತರಿಕೆ ನೀಡಿದರೂ ಪ್ರಯೋಜನವಾಗಲಿಲ್ಲ. ಉಳಿದ ಬ್ಯಾಟ್ಸ್ಮನ್ಗಳು ಬಿಗಿ ಬೌಲಿಂಗ್ ದಾಳಿಯಿಂದ ವೆಸ್ಟ್ ಇಂಡೀಸ್ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡು 210 ರನ್ ಗಳಿಸಿತು. ವಿಂಡೀಸ್ ವಿರುದ್ಧ ಭಾರತ ತಂಡಕ್ಕೆ 59 ರನ್ಗಳ ಭರ್ಜರಿ ಗೆಲುವು ಸಾಧಿಸಿತು.
ಭಾರತದ ಪರ ಭುವಿ 4, ಮೊಹಮ್ಮದ್ ಶಮಿ, ಕುಲದೀಪ್ ಯಾದವ್ ತಲಾ 2 ಮತ್ತು ಕಖಲ್ ಅಹಮ್ಮದ್, ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದುಕೊಂಡರು. ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
ವಿರಾಟನ 42ನೇ ಸೆಂಚುರಿ: ದಾದಾ-ಪಾಂಟಿಂಗ್ ದಾಖಲೆ ಹಿಂದಿಕ್ಕಿದ ರನ್ ಮಷಿನ್!