ಕಟಕ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ, ರಾಹುಲ್, ರೋಹಿತ್ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ 4 ವಿಕೆಟ್ಗಳ ಗೆಲುವು ಸಾಧಿಸುವ ಮೂಲಕ ಏಕದಿನ ಸರಣಿಯನ್ನ 2-1 ಅಂತರದಲ್ಲಿ ವಶಪಡಿಸಿಕೊಂಡಿದೆ.
-
Ravindra Jadeja ends on 39* as India win by four wickets! 👏
— ICC (@ICC) December 22, 2019 " class="align-text-top noRightClick twitterSection" data="
India take the series 2-1 in a dramatic finish 🏆 #INDvWI pic.twitter.com/3HYcIvbZDV
">Ravindra Jadeja ends on 39* as India win by four wickets! 👏
— ICC (@ICC) December 22, 2019
India take the series 2-1 in a dramatic finish 🏆 #INDvWI pic.twitter.com/3HYcIvbZDVRavindra Jadeja ends on 39* as India win by four wickets! 👏
— ICC (@ICC) December 22, 2019
India take the series 2-1 in a dramatic finish 🏆 #INDvWI pic.twitter.com/3HYcIvbZDV
ವಿಂಡೀಸ್ ನೀಡಿದ 316 ರನ್ಗಳ ಗುರಿ ಬೆನ್ನತ್ತಿದ ಭಾರತಕ್ಕೆ ಉತ್ತಮ ಆರಂಭ ದೊರೆಯಿತು. ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್ ಮೊದಲ ವಿಕೆಟ್ಗೆ 122 ರನ್ಗಳ ಕಾಣಿಕೆ ನೀಡಿದ್ರು. ಭರ್ಜರಿಯಾಗಿ ಬ್ಯಾಟ್ ಬೀಸಿದ ರೋಹಿತ್ ಶರ್ಮಾ ಅರ್ಧ ಶತಕ ಸಿಡಿಸಿದ್ರು. 63 ಗಳಿಸಿರುವಾಗ ಜಾಸನ್ ಹೋಲ್ಡರ್ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ರು.
ಏಕದಿನ ಕ್ರಿಕೆಟ್ನಲ್ಲಿ ಉತ್ತಮ ಫಾರ್ಮ್ ಕಂಡುಕೊಂಡಿರು ಕನ್ನಡಿಗ ಕೆ.ಎಲ್.ರಾಹುಲ್ ಕೂಡ ಅರ್ಧ ಶತಕ ಸಿಡಿಸಿದ್ರು. ಕೊಹ್ಲಿ ಜೊತೆಗೂಡಿ 2ನೇ ವಿಕೆಟ್ಗೆ 45ರನ್ಗಳ ಜೊತೆಯಾಟವಾಡಿ ಅಲ್ಜಾರಿ ಜೋಸೆಫ್ಗೆ ವಿಕೆಟ್ ಒಪ್ಪಿಸಿದ್ರು. ನಂತರ ಬಂದ ಶ್ರೇಯಸ್ ಐಯ್ಯರ್ 7 ರನ್ಗಳಿಸಿ ಔಟ್ ಆದ್ರೆ ರಿಷಭ್ ಪಂತ್ ಕೂಡ 7 ರನ್ಗಳಿಸಿ ವಿಕೆಟ್ ಒಪ್ಪಿಸಿದ್ರು.
-
3rd ODI. It's all over! India won by 4 wickets https://t.co/kK8v4wTXJz #IndvWI @Paytm
— BCCI (@BCCI) December 22, 2019 ." class="align-text-top noRightClick twitterSection" data="
.">3rd ODI. It's all over! India won by 4 wickets https://t.co/kK8v4wTXJz #IndvWI @Paytm
— BCCI (@BCCI) December 22, 2019
.3rd ODI. It's all over! India won by 4 wickets https://t.co/kK8v4wTXJz #IndvWI @Paytm
— BCCI (@BCCI) December 22, 2019
ಇತ್ತ ಕೇದಾರ್ ಜಾದವ್ ಕೂಡ 9 ರನ್ಗಳಿಸಿ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದ್ರು. ಒಂದೆಡೆ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಬೀಳುತ್ತಿದ್ದರೂ ತಾಳ್ಮೆಯ ಆಟವಾಡಿದ ನಾಯಕ ವಿರಾಟ್ ಕೊಹ್ಲಿ ಅರ್ಧ ಶತಕ ಸಿಡಿಸಿ ಮಿಂಚಿದ್ರು. ವಿಂಡೀಸ್ ಬೌಲರ್ಗಳ ಬೆವರಿಳಿಸಿದ ವಿರಾಟ್, ಭಾರತ ಗೆಲುವಿನ ಆಸೆಯನ್ನ ಜೀವಂತವಾಗಿಸಿದ್ರು.
ವಿರಾಟ್ 85 ರನ್ ಗಳಿಸಿರುವಾಗ ಪೊಲಾರ್ಡ್ ಎಸೆತದಲ್ಲಿ ಬೌಲ್ಡ್ ಆಗಿ ನಿರ್ಗಮಿಸಿದ್ರು. ಸಮಯೋಚಿತ ಆಟ ಪ್ರದರ್ಶಿಸಿದ ರವೀಂದ್ರ ಜಡೇಜಾ(39) ಮತ್ತು ಶಾರ್ದೂಲ್ ಠಾಕೂರ್(17) ಭಾರತವನ್ನ ಗೆಲುವಿನ ದಡ ಸೇರಿಸಿದ್ರು. ಅಂತಿಮವಾಗಿ ಟೀಂ ಇಂಡಿಯಾ 48.4 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಏಕದಿನ ಸರಣಿ ಗೆದ್ದುಕೊಂಡಿತು.
ವೆಸ್ಟ್ ಇಂಡಿಸ್ ಪರ ಕೀಮೋ ಪಾಲ್ 3, ಜಾಸನ್ ಹೋಲ್ಡರ್, ಶೆಲ್ಡನ್ ಕಾಟ್ರೆಲ್, ಅಲ್ಜಾರಿ ಜೋಸೆಪ್ ತಲಾ ಒಂದು ವಿಕೆಟ್ ಪಡೆದುಕೊಂಡರು.